ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದಾಗಿ ಲಕ್ನೋದ ಐತಿಹಾಸಿಕ ಕಟ್ಟಡವಾದ ಬಾರಾ ಇಮಾಂಬರದ ಒಂದು ಭಾಗ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ವರದಿ ಮಾಡಿವೆ.
ಕಟ್ಟಡದ ಪ್ರವೇಶದ್ವಾರದಲ್ಲಿರುವ ಇಮಾಂಬರಾದ ಒಂದು ಭಾಗವು ಕುಸಿದು ಬಿದ್ದಿದೆ. ಸಂದರ್ಶಕರು ಕಟ್ಟಡವನ್ನ ಪ್ರವೇಶಿಸುತ್ತಿದ್ದ ಸಂದರ್ಭದಲ್ಲೇ ಘಟನೆ ನಡೆದಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ.
ಸ್ಮಾರಕವು ಪ್ರಾಥಮಿಕವಾಗಿ ಅದರ ನಂಬಲಾಗದ ಕ್ಲಿಷ್ಟತೆಗೆ ಹೆಸರುವಾಸಿಯಾಗಿದೆ. ಇದನ್ನು ಸ್ಥಳೀಯವಾಗಿ ಭೂಲ್ ಭುಲೈಯಾ ಎಂದು ಕರೆಯಲಾಗುತ್ತದೆ. ಇದನ್ನು 1784 ರಲ್ಲಿ ನವಾಬ್ ಅಸಫ್-ಉದ್-ದೌಲಾ ನಿರ್ಮಿಸಿದರು.