ವಾಯುಪಡೆಗೆ ಐತಿಹಾಸಿಕ ಕ್ಷಣ: ಮೊದಲ ಬಾರಿ ‘ಫೈಟರ್ ಜೆಟ್’ ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದ ತಂದೆ-ಮಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತೀಯ ವಾಯುಪಡೆಗೆ ಐತಿಹಾಸಿಕ ಕ್ಷಣ. ಹೌದು, ಏರ್ ಕಮೋಡೋರ್ ಸಂಜಯ್ ಶರ್ಮಾ ಮತ್ತು ಫ್ಲೈಯಿಂಗ್ ಆಫೀಸರ್ ಅನನ್ಯಾ ಶರ್ಮಾ ಭಾರತೀಯ ವಾಯುಪಡೆಯ (IAF) ಯುದ್ಧ ವಿಮಾನಗಳನ್ನ ಒಟ್ಟಿಗೆ ಹಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅದರಲ್ಲೂ ಈ ಸಾಧನೆಗೈದ ಮೊದಲ ತಂದೆ-ಮಗಳ ಜೋಡಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ಲ್ಲಿ ಬಿಟೆಕ್ ಮುಗಿಸಿರುವ ಆನನ್ಯ ಐಎಎಫ್‌ನ ಫ್ಲೈಯಿಂಗ್ ಬ್ರಾಂಚ್ ತರಬೇತಿಗೆ ಆಯ್ಕೆಯಾದರು. ಡಿಸೆಂಬರ್ 2021ರಲ್ಲಿ ಅವರನ್ನ ಫೈಟರ್ ಪೈಲಟ್ ಆಗಿ ನಿಯೋಜಿಸಲಾಯಿತು.
ಅನನ್ಯಾ ಅವರ ತಂದೆ ಏರ್ ಕಮೋಡೋರ್ ಸಂಜಯ್ ಶರ್ಮಾ ಅವರನ್ನ 1989ರಲ್ಲಿ ಐಎಎಫ್ನ ಫೈಟರ್ ಸ್ಟ್ರೀಮ್ನಲ್ಲಿ ನಿಯೋಜಿಸಲಾಯಿತು.
ಮೇ 30, 2022 ರಂದು ತಂದೆ-ಮಗಳು ಇಬ್ಬರೂ ಬೀದರ್ ವಾಯುನೆಲೆಯಲ್ಲಿ ಹಾಕ್ -132 ವಿಮಾನದ ಅದೇ ರಚನೆಯಲ್ಲಿ ಹಾರಾಟ ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದರು.
ಐಎಎಫ್‌ನಲ್ಲಿ ಈ ಹಿಂದೆ ತಂದೆ ಮತ್ತು ಅವರ ಮಗಳು ಮಿಷನ್ಗಾಗಿ ಒಂದೇ ಫೈಟರ್ ರಚನೆಯ ಭಾಗವಾಗಿದ್ದ ಯಾವುದೇ ಉದಾಹರಣೆ ಇಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!