ಶಾಲಾ ಕೊಠಡಿಗಳ ನಿಮಾ೯ಣದ ಕಾಯ೯ ಐತಿಹಾಸಿಕ ದಾಖಲೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಹೊಸದಿಗಂತ ವರದಿ, ಕಲಬುರಗಿ

ಪ್ರಸ್ತುತ ವಷ೯ದಲ್ಲೇ ರಾಜ್ಯಾದ್ಯಂತ 7601 ಶಾಲಾ ಕೊಠಡಿಗಳ ನಿಮಾ೯ಣದ ಕಾಯ೯ ರಾಜ್ಯದಲ್ಲೇ ಐತಿಹಾಸಿಕ ಕಾಯ೯ಕ್ರಮವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಕಾಲ ಸಚಿಲ ಬಿ.ಸಿ.ನಾಗೇಶ್ ಹೇಳಿದರು.

ಕಲಬುರಗಿ ತಾಲೂಕಿನ ಮಾಡಿಯಾಳ ತಾಂಡಾದಲ್ಲಿ ವಿವೇಕ ಯೋಜನೆಯಡಿ ನಿಮಾ೯ಣಗೊಳ್ಳುತ್ತಿರುವ ಶಾಲಾ ಕೊಠಡಿ ಶಂಕುಸ್ಥಾಪನೆ ಕಾಯ೯ಕ್ರಮದಲ್ಲಿ ಭಾಗವಹಿಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಜ್ಞಾನದ ಪ್ರತೀಕವಾಗಿರುವ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಈ ವರ್ಷ 7,601 ಶಾಲಾ ಕೊಠಡಿಗಳನ್ನು ಐತಿಹಾಸಿಕ ದಾಖಲೆ ರೂಪದಲ್ಲಿ ನಿರ್ಮಿಸಲಾಗುತ್ತಿದೆ. ಇದೂವರೆಗೆ ಒಂದೇ ವರ್ಷದಲ್ಲಿ ಇಷ್ಟು ಸಂಖ್ಯೆಯಲ್ಲಿ ಶಾಲಾ ಕೊಠಡಿ ನಿರ್ಮಿಸುವ ಉದಾಹರಣೆಯಿಲ್ಲ ಎಂದರು.

15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಡಿಸೆಂಬರ್‍ನಲ್ಲಿ ಹೊಸದಾಗಿ ನೇಮಕವಾದ ಶಿಕ್ಷಕರು ಶಾಲೆಗೆ ಹಾಜರಾಗಲಿದ್ದಾರೆ. ಕ.ಕ. ಭಾಗಕ್ಕೆ ಮೀಸಲಾದ 5 ಸಾವಿರ ಶಿಕ್ಷಕರ ಹುದ್ದೆ ಪೈಕಿ ಭರ್ತಿಯಾಗದೆ ಉಳಿದಿದ್ದಲ್ಲಿ ಅವುಗಳನ್ನು ಮುಂದೆ ಜನವರಿಯಲ್ಲಿ ಸ್ಥಳೀಯರಿಂದಲೇ ಮತ್ತೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ಮಹಾನ್ ಸಂತ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ವಿವೇಕ ಯೋಜನೆಯಡಿ ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿರುವುದರಿಂದ ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕೆಲಸಕ್ಕೆ ಅಣಿ ಇಟ್ಟಿದಂತಾಗಿದೆ. ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ 200 ಕೋಟಿ ರೂ. ಮೊತ್ತದಲ್ಲಿ ಪದವಿ ಪೂರ್ವ ಕಾಲೇಜುಗಳ ಕೊಠಡಿ ಭವನ ನಿರ್ಮಾಣ ಮಾಡಿದ್ದು, ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿಯಾಗುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!