ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿಇತಿಹಾಸವನ್ನು ತಿರುಚಲಾಗಿದೆ, ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು : ಈಶ್ವರ ಖಂಡ್ರೆ ಆಗ್ರಹ

ಹೊಸದಿಗಂತ ವರದಿ ಹುಬ್ಬಳ್ಳಿ:

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಬಿ.ಆರ್.‌ಅಂಬೇಡ್ಕರ್, ಬಸವಣ್ಣ, ಕುವೆಂಪು ಸೇರಿದಂತೆ ಅನೇಕ ಮಹನೀಯರ ಕುರಿತು ಇರುವ ಇತಿಹಾಸವನ್ನು ತಿರುಚಲಾಗಿದೆ. ಪರಿಷ್ಕರಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲಾಗಿದ್ದು, ಇದರ ನೈತಿಕ ಹೊಣೆಹೊತ್ತು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.‌

ವೈಜ್ಞಾನಿಕ‌ ಪಠ್ಯಕ್ರಮ ಇರಬೇಕಾದ ಪಠ್ಯಪುಸ್ತಕದಲ್ಲಿ ಜಾತಿ ಧರ್ಮದಲ್ಲಿ ವಿಷ ಬೀಜ ಬಿತ್ತುವ ವಿಷಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಹಲವಾರು ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ವಿಚಾರ ವಾದಿಗಳು ಇದ್ದಾರೆ. ಅವರನ್ನು ಬಿಟ್ಟು ಸರ್ಕಾರ ಮನೆಯ ಪಾಠ ಹೇಳುವವನಿಗೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇವನು ತಯಾರಿಸಿದ ಪಠ್ಯ ಪುಸ್ತಕದಿಂದ ೧.೩೮ ಕೋಟಿ ವಿದ್ಯಾರ್ಥಿಳ ಭವಿಷ್ಯ ಹಾಳಾಗುತ್ತದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!