Tuesday, June 28, 2022

Latest Posts

ಬೈಕಿಗೆ ಹಾಲಿನ ಟ್ಯಾಂಕರ್ ಡಿಕ್ಕಿ : ಯುವಕ ಸ್ಥಳದಲ್ಲೇ ಸಾವು

ಹೊಸ ದಿಗಂತ ವರದಿ, ಹಲಗೂರು:

ಸಮೀಪದ ಚಿಲ್ಲಾಪುರದ ಗೇಟ್ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಗುರುವಾರ ರಾತ್ರಿ 11 ಗಂಟೆಯ ಸಮಯದಲ್ಲಿ ಬೈಕಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಪುಟ್ಟರಾಜು(27) ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಮೂಲತಃ ತಲಕಾಡು ಗ್ರಾಮದ ವಾಸಿ ಮಾದೇಶರವರ ಮಗನಾದ ಪುಟ್ಟರಾಜ ಅಲಿಯಾಸ್ ಪುಟ್ಟ ಇವರು ಬೆಂಗಳೂರಿನಲ್ಲಿ ಖಾಸಿಗೆ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಗುರುವಾರ ಸ್ವಗ್ರಾಮವಾದ ತಲಕಾಡಿಗೆ ಹೋಗುತ್ತಿದ್ದಾಗ ಚಿಲ್ಲಾಪುರದ ಗೇಟ್ ಹಲಗೂರು ಬೈಪಾಸ್ ರಸ್ತೆಯಲ್ಲಿ ಮಳವಳ್ಳಿ ಕಡೆಯಿಂದ ಹಲಗೂರಿಗೆ ಬರುತ್ತಿದ್ದ ಹಾಲಿನ ಟ್ಯಾಂರ್ಕ ವಾಹನ ಎದುರುಗಡೆಯಿಂದ ಬಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪುಟ್ಟರಾಜು ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುತ್ತಾನೆ. ಶುಕ್ರವಾರ ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯೆದ್ಯಕೀಯ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಶವವನ್ನು ನೀಡಲಾಯಿತು. ಹಲಗೂರು ಠಾಣೆ ಸಬ್ಇನ್ಸ್‌ಪೆ ಕ್ಟರ್ ರವಿಕುಮಾರ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss