ಹಾಲಿವುಡ್ ನಟಿ ಆ್ಯನ್ನೆ ಹೆಚೆ ಕಾರು ಅಪಘಾತ: ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಲಿವುಡ್ ಕ್ವಾಂಟಿಕೋ ಸಿನಿಮಾದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೊತೆ ಸಹನಟಿಯಾಗಿದ್ದ ಆ್ಯನ್ನೆ ಹೆಚೆ(53) ಚಲಾಯಿಸುತ್ತಿದ್ದ ಕಾರಿಗೆ ಅಪಘಾತವಾಗಿದ್ದು, ಈ ವೇಳೆ ಬೆಂಕಿ ಹೊತ್ತಿಕೊಂಡ ಕಾರಣ ನಟಿ ದೇಹದ ಮೇಲೆ ತೀವ್ರ ಸುಟ್ಟ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿದೆ.

ಆ್ಯನ್ನೆಶುಕ್ರವಾರ ನೀಲಿ ಬಣ್ಣದ ಮಿನಿ ಕೂಪರ್​ ಕಾರನ್ನು ಓಡಿಸುತ್ತಿದ್ದು, ಮೊದಲು ವಾಷಿಂಗ್ಟನ್ ನ ಲಾಸ್ ಏಂಜಲೀಸ್‌ನ ಅಪಾರ್ಟ್‌ಮೆಂಟ್ ಸಂಕೀರ್ಣದ ಗ್ಯಾರೇಜ್​ಗೂ ಡಿಕ್ಕಿ ಹೊಡೆದಿದ್ದು, ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಮುಂದೆ ಕ್ಯಾಲಿಫೋರ್ನಿಯಾದ ಮಾರ್ ವಿಸ್ಟಾ ಮನೆಗೆ ಡಿಕ್ಕಿ ಹೊಡೆದಿದ್ದಾರೆ. ಆಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಆದಾಗಲೇ ದೇಹದ ತುಂಬಾ ಸುಟ್ಟ ಗಾಯಗಳಾಗಿದ್ದ ನಟಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆ ಆ್ಯನ್ನೆ ಅವರಿಗೆ ಪ್ರಜ್ಞೆ ಇದ್ದು ಉಸಿರಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆ್ಯನ್ನೆ ಹೆಚೆ ಇತ್ತೀಚೆಗೆ ದಿ ಬ್ರೇವ್, ಕ್ವಾಂಟಿಕೋ ಮತ್ತು ಶಿಕಾಗೊ ಪಿ.ಡಿ. ಟೆಲಿವಿಷನ್​ ಸಿರೀಸ್​ನಲ್ಲಿ ಅಭಿನಯಿಸಿದ್ದರು. ಪ್ರಿಯಾಂಕಾ ಚೋಪ್ರಾ ಅಭಿನಯದ ಕ್ವಾಂಟಿಕೋದಲ್ಲಿ ಆ್ಯನ್ನೆ, ಸುಸಾನ್ ಲ್ಯಾಂಗ್ಡನ್ ಪಾತ್ರವನ್ನು ನಿರ್ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!