ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ವೈರಲ್ ಆಗುತ್ತಿರುವ ವಿವಿಧ ವಿಡಿಯೋಗಳು..ಕೆಲವು ವಿಡಿಯೋಗಳು ಜನರನ್ನು ಹುಚ್ಚೆಬ್ಬಿಸುತ್ತಿವೆ, ಇನ್ನು ಕೆಲವು ವಿಡಿಯೋಗಳು ತಮಾಷೆಯಾಗಿ ಜನರನ್ನು ನಗೆಗಡಲಲ್ಲಿ ತೇಲಿಸುತ್ತದೆ..ಇನ್ನೂ ಕೆಲವು ಶಾಕ್‌ಗೆ ಗುರಿಮಾಡುತ್ತವೆ. ಆದರೆ, ಇಲ್ಲೊಂದು ವಿಡಿಯೋ ನೋಡಿದ್ರೆ ನಿಮ್ ಮೈಂಡ್ ಬ್ಲಾಕ್ ಅಗೋದು ಗ್ಯಾರೆಂಟಿ.
ಆ ವೈರಲ್ ವಿಡಿಯೋದಲ್ಲಿ ಮನೆಯಲ್ಲಿನ ಹಾಸಿಗೆಯನ್ನು ಮೂರು ಚಕ್ರದ ವಾಹನವನ್ನಾಗಿ ಪರಿವರ್ತಿಸಲಾಗಿದೆ. ವೀಡಿಯೋದಲ್ಲಿ, ಚಲಿಸುವ ವಾಹನದ ಬೆಡ್ ಮೇಲೆ ಕುಳಿತಿದ್ದ ಇಬ್ಬರು ಯುವಕರು ಪೆಟ್ರೋಲ್ ಪಂಪ್‌ಗೆ ಬರುತ್ತಿರುವುದು ಕಂಡುಬಂದಿದೆ. ದಾರಿಯಲ್ಲಿ ವಾಹನ ಸವಾರರು ಮತ್ತು ಸ್ಥಳೀಯರು ಈ ವಿಚಿತ್ರ ವಾಹನವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಕೆಲವರು ಈ ವಾಹನದ ಫೋಟೋ ಮತ್ತು ವೀಡಿಯೊಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೋ ನೋಡಿದ ನೆಟಿಜನ್ ಗಳು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.. ಸುಮಾರು 3 ನಿಮಿಷದ ಈ ವಿಡಿಯೋ ಈಗ ಟ್ರೆಂಡಿಂಗ್ ನಲ್ಲಿದೆ. ಈ ವಾಹನವನ್ನು ತಯಾರಿಸಲು ಹಾಸಿಗೆ, ಬೈಸಿಕಲ್ ಚಕ್ರಗಳು ಮತ್ತು ಕಾರ್ ಸ್ಟೀರಿಂಗ್ ಅನ್ನು ಬಳಸಲಾಯಿತು. ಹಾಸಿಗೆಯ ನಾಲ್ಕು ಕಾಲುಗಳ ಬಳಿ ಚಕ್ರಗಳನ್ನು ಜೋಡಿಸಲಾಗಿದೆ. ಒಂದು ಕಡೆ ಹ್ಯಾಂಡಲ್, ರೇಸ್ ಇತ್ಯಾದಿಗಳನ್ನು ಹೊಂದಿಸಲಾಗಿದೆ. ಮತ್ತೊಂದೆಡೆ ಮೋಟಾರ್ ಕೂಡ ಕ್ಲ್ಯಾಂಪ್ ಮಾಡಲಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲೂ ಮಂಚದ ವಾಹನ ಟ್ರೆಂಡ್ ಆಗುತ್ತಿದೆ. ಮುಂದೆ ಯಾವ ರೀತಿಯ ಪ್ರಯೋಗಕ್ಕೆ ಮುಂದಾಗುತ್ತಾರೆ ನೋಡೋಣ..