ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 10 ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ವೇಳೆ ರಾಗಾ ಕಲಾವಿದರಿಂದ ಅಪರೂಪದ ಉಡುಗೊರೆಯನ್ನು ಪಡೆದರು. ಅಮೆರಿಕದ ಕಲಾವಿದರೊಬ್ಬರು ರಾಹುಲ್‌ಗೆ ಸೋನಿಯಾ ಗಾಂಧಿ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮಾಧ್ಯಮ ಮತ್ತು ಸಂವಹನ ವೃತ್ತಿಪರ ಮತ್ತು ಕಲಾವಿದೆ ಸರಿತಾ ಪಾಂಡೆ ಕಳೆದ ವಾರ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿದಾಗ ರಾಹುಲ್ ಗಾಂಧಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದರು. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಇದ್ದಿಲು ಮತ್ತು ಜಲವರ್ಣ ವರ್ಣಚಿತ್ರವನ್ನು ರಾಹುಲ್ ಅವರಿಗೆ ನೀಡಲಾಯಿತು.
ಈ ವಿಷಯವನ್ನು ಸರಿತಾ ಪಾಂಡೆ ತಮ್ಮ ಟ್ವಿಟ್ಟರ್‌ನಲ್ಲಿ ಸರಿತಾ ಪಾಂಡೆ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಸೋನಿಯಾ ಗಾಂಧಿಗೆ ಕಳುಹಿಸುವಂತೆ ರಾಹುಲ್‌ಗೆ ಕೇಳಿಕೊಂಡಿದ್ದೇನೆ ಎಂದು ಸರಿತಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರವನ್ನು ನನ್ನ ತಾಯಿ ಅವರಿಗೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಅವರು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.