ಹೊಸದಿಗಂತ ಡಿಜಿಟಲ್ ಡೆಸ್ಕ್;
ವಿಧಾನಸಭೆಯಲ್ಲಿ ಇಂದು ಹನಿ ಟ್ರ್ಯಾಪ್ ಕುರಿತು ಗಂಭೀರವಾದ ಚರ್ಚೆ ನಡೆಯಿತು. ವಿಜಯಪುರ ನಗರ ಶಾಸಕ ಯತ್ನಾಳ್ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೇಳಿದ್ದು, ಇದಕ್ಕೆ ಉತ್ತರಿಸಿದ ಸಚಿವ ಕೆ ಎನ್ ರಾಜಣ್ಣ , ಈ ಕುರಿತು ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.
ಬಳಿಕ ಸಚಿವ ಕೆ ಎನ್ ರಾಜಣ್ಣ ದೂರು ನೀಡಿದರೆ ಉನ್ನತಮಟ್ಟದ ತನಿಖೆಗೆ ಆದೇಶಿಸುತ್ತೇನೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಒಬ್ಬರಿಗಾಯಿತು ಇಬ್ಬರಿಗೆ ಆಯ್ತು ಅನ್ನೋದಕ್ಕಿಂತ ಹೆಚ್ಚಾಗಿ ಒಂದು ಫುಲ್ ಸ್ಟಾಪ್ ಹಾಕಬೇಕಾಗಿದೆ. ಕರ್ನಾಟಕ ವಿಧಾನ ಮಂಡಲ ಏನಿದೆ ಇಡಿ ದೇಶದಲ್ಲಿ ಬಹಳ ಗೌರವ ಸಂಪಾದನೆ ಮಾಡಿದೆ.ಈ ಸದನದ ಸದಸ್ಯರು ನಮ್ಮ ತಂದೆಯವರು. ಅವರು ಕೂಡ 1952 ರಲ್ಲಿ ಮೇಲ್ಮನೆ ಸದಸ್ಯರಾಗಿದ್ದರು. ಬಹಳ ದೊಡ್ಡ ವ್ಯಕ್ತಿಗಳು ಈ ಸದನದಲ್ಲಿ ಸದಸ್ಯರಾಗಿ ಅವರ ಕುರುಹುಗಳನ್ನು, ಆದರ್ಶಗಳನ್ನು ಈ ರಾಜ್ಯದಲ್ಲಿ ಬಿಟ್ಟು ಹೋಗಿದ್ದಾರೆ. ಅಂತಹ ಸಂದರ್ಭದಲ್ಲಿ ಸದನದ ಗೌರವ ಕಾಪಾಡಬೇಕಾದರೆ ಸದನದ ಮರ್ಯಾದೆ ಕಾಪಾಡಬೇಕಾದರೆ ಸದಸ್ಯರ ಮರ್ಯಾದೆ ಕಾಪಾಡಬೇಕಾದರೆ ಇದಕ್ಕೆಲ್ಲ ಇತಿಶ್ರೀ ಹಾಡಬೇಕಾಗುತ್ತದೆ.ಇಲ್ಲದೆ ಹೋದರೆ ಹೀಗೆ ನಡೆಸಿಕೊಂಡು ಹೋದರೆ ಬಹಳಷ್ಟು ಜನರಿಗೆ ಅವರವರ ಕುರಿತು ಮರ್ಯಾದೆ ಪ್ರಶ್ನೆ ಕಾಡುತ್ತದೆ. ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎನ್ನಲಾಗಿದ್ದು, ಅವರು ನನಗೆ ಒಂದು ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ ಆ ಒಂದು ದೂರಿನ ಮೇಲೆ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡುತ್ತೇನೆ . ಸತ್ಯಾ ಸತ್ಯತೆ ಎಲ್ಲರಿಗೂ ಗೊತ್ತಾಗಲಿ ಎಂದು ಪರಮೇಶ್ವರ್ ಹೇಳಿದರು.