ಪಂದ್ಯ ಸೋತರೂ ಪ್ರೀತಿಯಲ್ಲಿ ಗೆದ್ದ ಹಾಂಗ್ ​ಕಾಂಗ್​​ ಪ್ಲೇಯರ್: ಗ್ಯಾಲರಿಗೆ ತೆರಳಿ ಗೆಳತಿಗೆ ಪ್ರಪೋಸ್ ಮಾಡಿದ ಶಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ-ಹಾಂಗ್ ​ಕಾಂಗ್​ ಪಂದ್ಯದಲ್ಲಿ ರೋಹಿತ್​ ಶರ್ಮಾ ಬಳಗ 40 ರನ್​​​​ಗಳ ಗೆಲುವು ದಾಖಲಿಸಿದ್ದು, ಇದರ ಮಧ್ಯೆ ಹಾಂಗ್ ​ಕಾಂಗ್​​ ಪ್ಲೇಯರ್ ತನ್ನ ಪ್ರಿಯತಮೆಗೆ ಸರ್​​​ಪ್ರೈಸ್​​​ ಪ್ರಪೋಸ್​ ಮಾಡಿದ್ದು ಗಮನ ಸೆಳೆಯಿತು.

ಪಂದ್ಯದ ನಂತರ ಕ್ರೀಡಾಂಗಣದ ಗ್ಯಾಲರಿಗೆ ಆಗಮಿಸಿದ ಬ್ಯಾಟರ್​ ಕಿಂಚತ್​​ ಶಾ, ಸ್ನೇಹಿತೆಗೆ ವಿಭಿನ್ನವಾಗಿ ಪ್ರಪೋಸ್ ಮಾಡಿದರು. ಗೆಳೆಯನ ನಿರ್ಧಾರಕ್ಕೆ ಅರೆಕ್ಷಣ ಅಚ್ಚರಿ ವ್ಯಕ್ತಪಡಿಸಿದ ಆಕೆ ನಂತರ ಸಂತೋಷದಿಂದ ಅಪ್ಪಿಕೊಂಡರು.

ಏಷಿಯನ್​​​ ಕ್ರಿಕೆಟ್​ ಕೌನ್ಸಿಲ್​ ತನ್ನ ಟ್ವಿಟರ್​ ಖಾತೆಯನಲ್ಲಿ ಈ ವಿಡಿಯೋ ಶೇರ್ ಮಾಡಿದೆ. ಭಾರತ ವಿರುದ್ಧದ ಪಂದ್ಯದ ಬೆನ್ನಲ್ಲೇ ಹಾಂಗ್ ​ಕಾಂಗ್​ ಪ್ಲೇಯರ್​​ ಕಿಂಚಿತ್​ ಶಾ ತಮ್ಮ ಗರ್ಲ್​​ಫ್ರೆಂಡ್​​​ಗೆ ಲವ್ ಪ್ರಪೋಸ್​ ಮಾಡಿದ್ದು, ಹೃದಯಸ್ಪರ್ಶಿ ಕ್ಷಣ ಇದಾಗಿದೆ. ಅಭಿನಂದನೆಗಳು. ನಿಮ್ಮ ಹೊಸ ಜೀವನ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದೆ.

ಈ ಹಿಂದೆ, ಇಂಡಿಯನ್​ ಪ್ರೀಮಿಯರ್​​ ಲೀಗ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​​ ತಂಡದ ವೇಗಿ​​ ದೀಪಕ್‌​ ಚಹರ್ ಕೂಡ ತಮ್ಮ ಪ್ರೇಯಸಿಗೆ ಲವ್ ಪ್ರಪೋಸ್ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!