ಮರ್ಯಾದಾ ಹತ್ಯೆ ನಮ್ಮೆಲ್ಲರ ಮನ ಕಲುಕಿದೆ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋಲಾರದಲ್ಲಿ ನಡೆದ ಮರ್ಯಾದಾ ಹತ್ಯೆ(Honor Killing) ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ(Siddaramaiah) ಮೌನ ಮುರಿದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ರಾಜ್ಯದ 2 ಕಡೆಗಳಲ್ಲಿ ಮರ್ಯಾದೆಗೇಡು ಹತ್ಯೆಗಳು‌‌ ನಡೆದಿವೆ. ಇದು ನಮ್ಮೆಲ್ಲರ ಮನ ಕಲುಕಿದೆ. ಸಮಾಜದಲ್ಲಿ ಅಂತರ್ಗತ ಜಾತಿ ವ್ಯವಸ್ಥೆ, ಸಮಾಜಿಕ ಕಟ್ಟುಪಾಡುಗಳ‌ ಹೀನ‌ ಮನಸ್ಥಿತಿ ಇಂತಹ ಘಟನೆಗಳು ಪ್ರತಿಫಲಿಸುತ್ತವೆ. ಈ ಪ್ರಕರಣದಲ್ಲಿ ನಮ್ಮ ಸರ್ಕಾರ ಕಾನೂನಾತ್ಮಕ ಕಟ್ಟು ನಿಟ್ಟಿನ ಕ್ರಮ‌ಕೈಗೊಳ್ಳಲಿದೆ. ಪ್ರಕರಣದ ತನಿಖೆ, ವಿಚಾರಣೆಯಲ್ಲಿ ಯಾವುದೆ ಲೋಪವಾಗದಂತೆ ಎಚ್ಚರವಹಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇಂತಹ ಮನಸ್ಥಿತಿ ಸೃಷ್ಠಿಸಿರುವ ಜಾತಿಗ್ರಸ್ತ ಸಮಾಜದಲ್ಲಿ ಪರಿವರ್ತನೆ, ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರೂ ದಲಿತರಿಗೆ ದೇವಸ್ಥಾನ, ಮನೆಗಳಲ್ಲಿ ಕಾಲಿರಿಸಲು ಅವಕಾಶ ನೀಡದ ಆಚರಣೆ, ಸಂಪ್ರದಾಯ ನಮ್ಮಲ್ಲಿವೆ. ಜಾತಿ ಸಂರಚನೆಯ ಕಟ್ಟು ಪಾಡುಗಳನ್ನ ಮೀರಲು ಮಾನವೀಯತೆ, ವಿಚಾರಪರತಯೆ ದಾರಿ, ಜಾಗೃತಿಯೇ ಅಸ್ತ್ರ. ಸಮಾಜವನ್ನ ಜಾತಿ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ ಎಲ್ಲಾ ಸಮಾಜ ಸುಧಾರಕರ ಆಶಯಗಳನ್ನ ವ್ಯಾಪಕವಾಗಿ ಪ್ರಚುರಪಡಿಸುವುದು ಅಗತ್ಯ. ಈ ದಿಕ್ಕಿನಲ್ಲಿ ಸರ್ಕಾರವು ರಚನಾತ್ಮಕ ಕಾರ್ಯಕ್ರಮ ಗಳಿಗೆ ಮುಂದಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

ಕೋಲಾರದ ತೊಟ್ಲಿ ಗ್ರಾಮದಲ್ಲಿ ವರಮಹಾಲಕ್ಷ್ಮೀ ಹಬ್ಬದ ದಿನವೇ ವೆಂಕಟೇಶಗೌಡ ಎಂಬುವರು ತಮ್ಮ 19 ವರ್ಷದ ಮಗಳನ್ನೇ ಕೊಂದು ಹಾಕಿದ್ದರು. ಮಗಳು ಬೇರೆ ಸಮುದಾಯದ ಅಪ್ರಾಪ್ತ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಮಗಳ ಪ್ರಾಣ ತೆಗೆದಿದ್ದರು. ರಾಜ್ಯದಲ್ಲಿ ಎರಡು ಕಡೆಗಳಲ್ಲಿ ಮರ್ಯಾದೆಗೇಡು ಪ್ರಕರಣಗಳು ನಡೆದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!