ದಿನಭವಿಷ್ಯ | ವೃತ್ತಿಯಲ್ಲಿ ಹೊಸ ಎತ್ತರಕ್ಕೆ ಏರುವಿರಿ, ಆರ್ಥಿಕ ಸ್ಥಿತಿ ಸುಧಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಇದ್ದುದರಲ್ಲೆ  ತೃಪ್ತಿ ಪಡೆಯುವ ಬದಲಾಗಿ ಹೊಸ ಅವಕಾಶಗಳತ್ತ ನೋಡುವುದೊಳಿತು. ಏಕೆಂದರೆ ನಿಮಗೆ ಉಜ್ವಲ ಅವಕಾಶದ ಸಂಕೇತಗಳಿವೆ.

ವೃಷಭ
ಆಹಾರದಲ್ಲಿ ಹಿತಮಿತ ಸಾಧಿಸಿ. ಹೊಟ್ಟೆ ಕೆಡುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಪ್ರಲೋಭನೆಗೆ ಒಳಗಾಗಿ ನಿಮ್ಮ ಘನತೆ ಹಾಳು ಮಾಡಿಕೊಳ್ಳದಿರಿ.

ಮಿಥುನ
ಅತಿಯಾದ ಕೆಲಸ ನಿಮ್ಮ ದೇಹದ ಮೇಲೆ ಪರಿಣಾಮ ಬೀರುವುದು. ವಿಶ್ರಾಂತಿಯ ಅಗತ್ಯವಿದೆ. ಮಾನಸಿಕ ಕ್ಲೇಶ ನಿವಾರಣೆ.

ಕಟಕ
ಕುಟುಂಬ ಸದಸ್ಯರನ್ನು ಕಡೆಗಣಿಸದೆ ಕಾಳಜಿಯಿಂದ ನೋಡಿಕೊಳ್ಳಿ.  ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚು. ಅನಿಶ್ಚಿತತೆ ಕಾಡುವುದು.

ಸಿಂಹ
ಕೆಲವು ಅಚ್ಚರಿಗಳು ಕಾದಿವೆ. ಆದರೆ ಅವು ನಿಮಗೆ ಒಳಿತು ತರುವಂತಹವೇ ಆಗಿವೆ. ವಿರಸ ಶಮನ, ಸಂಬಂಧ ಮತ್ತೆ ಚಿಗಿತುಕೊಳ್ಳುವುದು.

ಕನ್ಯಾ
ವೃತ್ತಿಯಲ್ಲಿ ಹೊಸ ಎತ್ತರಕ್ಕೆ ಏರುವಿರಿ. ಆರ್ಥಿಕ ಸ್ಥಿತಿ ಸುಸ್ಥಿರ. ಸಂಬಂಧದಲ್ಲಿ ಸುಧಾರಣೆ. ಕುಟುಂಬ ಸದಸ್ಯರಿಂದ ಉತ್ತಮ ಸಹಕಾರ.

ತುಲಾ
ದೈಹಿಕ ಶ್ರಮ ಅಧಿಕ. ಉದ್ಯೋಗದಲ್ಲಿ ಸಮಸ್ಯೆ ಎದುರಿಸುವಿರಿ. ಯಾರದೋ ತಪ್ಪು ನಿಮ್ಮ ತಲೆಗೇರಬಹುದು. ಸಮಾಧಾನದಿಂದ ಪ್ರತಿಕ್ರಿಯಿಸಿ.

ವೃಶ್ಚಿಕ
ಕೌಟುಂಬಿಕ ಬಿಕ್ಕಟ್ಟು ಮನಶ್ಯಾಂತಿ ಕೆಡಿಸುವುದು. ಅದಕ್ಕೆ ಕೆಲವರ ವರ್ತನೆ ಕಾರಣವಾಗುವುದು. ವಾದಕ್ಕಿಂತ ರಾಜಿಗೆ ಮಹತ್ವ ಕೊಡಿ.

ಧನು
ಹಳೆಯ ಮಿತ್ರ ಭೇಟಿ. ಹಳೆ ನೆನಪುಗಳು ಕಾಡಬಹುದು. ವೃತ್ತಿಯಲ್ಲಿ ನಿರೀಕ್ಷಿತ ಬೆಳವಣಿಗೆ ಸಂಭವಿಸದೆ ನಿರಾಶೆ ಅನುಭವಿಸುವಿರಿ.

ಮಕರ
ಪ್ರೀತಿಪಾತ್ರರು ನಿಮ್ಮ ಕಾಳಜಿಯನ್ನು ಬಯಸುವರು. ಅವರನ್ನು ಕಡೆಗಣಿ ಸಿದ ಭಾವನೆ ಕಾಡುವುದು. ಆರ್ಥಿಕ ಸಮಸ್ಯೆ ಕೆಂಗೆಡಿಸುತ್ತದೆ.

ಕುಂಭ
ಕೆಲಸದ ಒತ್ತಡ. ಉಳಿದವರ ಅಸಹಕಾರ. ಮಾನಸಿಕ ಉದ್ವಿಗ್ನತೆ. ಕೌಟುಂಬಿಕ ಪರಿಸರದಲ್ಲಿ ನೆಮ್ಮದಿ ಕಾಣುವಿರಿ. ಆಪ್ತರಿಂದ ಸಾಂತ್ವನ ಪಡೆಯುವಿರಿ.

ಮೀನ
ವೃತ್ತಿಯಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಆರ್ಥಿಕ ನಷ್ಟ, ಮಾನಸಿಕ ಬೇಗುದಿ.  ಅವಿವೇಕದ ವರ್ತನೆ ತೋರದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!