ʻಐಪಾನ್‌ ಕಲೆʼ ಉಳಿಸಿ, ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಿದ 24ರ ಹರೆಯದ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶಿಷ್ಟವಾದ ಕೆಂಪು ಬಣ್ಣದ ಮೇಲೆ ಚಿತ್ರಿಸಿದ ಶಂಖಗಳ ಬಿಳಿ ರೇಖಾಚಿತ್ರಗಳು, ಹೂವುಗಳು, ದೇವತೆಗಳ ಹೆಜ್ಜೆಗಳು ಇತ್ಯಾದಿಗಳನ್ನು ನೀವು ನೋಡಿರಬಹುದು. ಈ ಧಾರ್ಮಿಕ ಜಾನಪದ ಕಲೆಯು ಉತ್ತರಾಖಂಡದ ಕುಮಾವೂನ್ ಪ್ರದೇಶಕ್ಕೆ ಸೇರಿದ್ದು, ಇದನ್ನು ʻಐಪಾನ್ ಕಲೆʼ ಎಂದು ಕರೆಯಲಾಗುತ್ತದೆ. ಅವನತಿ ಅಂಚಿನತ್ತ ತಲುಪಿದ ಈ ಕಲೆಯನ್ನು ಉಳಿಸಲು 24 ವರ್ಷದ ಕಲಾವಿದೆ ಮಿನಾಕ್ಷಿ ಖಾತಿ ಅವರು ಕಾಲೇಜಿನಲ್ಲಿದ್ದಾಗಲೇ ಇದರ ಬಗ್ಗೆ ತಿಳಿದು ಪುನಃ ಪುನರುಜ್ಜೀವನಗೊಳಿಸಲು ಮನಸ್ಸು ಮಾಡಿದರು.

ಐಪಾನ್ ಕಲೆ ಎಂದರೇನು?
ಐಪಾನ್ ಕಲೆಯನ್ನು ಬಲಗೈಯ ಕೊನೆಯ ಮೂರು ಬೆರಳುಗಳನ್ನು ಬಳಸಿ ಮಾಡಲಾಗುತ್ತದೆ. ಅಕ್ಕಿಯಿಂದ ಪೇಸ್ಟ್ ತಯಾರಿಸಿ, ತಮಗೆ ತಿಳಿದ ಚಿತ್ರಗಳನ್ನು ಹಿಂಬದಿ ಕೆಂಪು ಬಣ್ಣ ಹಚ್ಚಿ ಬಿಳಿ ಪೇಸ್ಟ್‌ನಿಂದ ಚಿತ್ರ ಬಿಡಿಸುವುದು. ಸಾಮಾನ್ಯವಾಗಿ ಖಾಲಿ ಗೋಡೆಗಳು, ಮನೆ ಮತ್ತು ದೇವಾಲಯಗಳ ಅಂಗಳಗಳ ಮೇಲೆ ಬಿಡಿಸಲಾಗುತ್ತದೆ.

ಈ ಕಲೆ ಕುರಿತು ತಿಳಿದ ಮಿನಾಕ್ಷಿ ತನ್ನ ರಾಜ್ಯದಲ್ಲಿ ಕಲೆಯು ಪ್ರಧಾನವಾಗಿರುವುದನ್ನು ಗಮನಿಸುತ್ತಾಳೆ. ಅಜ್ಜಿಯರು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಸಂಪ್ರದಾಯವನ್ನು ವರ್ಗಾಯಿಸುತ್ತಾರೆ. ಮೀನಾಕ್ಷಿ ಬಾಲ್ಯದಲ್ಲಿರಬೇಕಾದರೆ ಆಕೆಯ ಅಜ್ಜಿ ಮತ್ತು ತಾಯಿಯೊಂದಿಗೆ ಅಕ್ಕಿ ಪೇಸ್ಟ್‌ನೊಂದಿಗೆ ಬಿಡಿಸುತ್ತಿದ್ದ ರಂಗೋಲಿ ಕಲೆಯಲ್ಲಿ ನೋಡಿದ್ದರಂತೆ. ಬರುಬರುತ್ತಾ ಇದು ಬದಲಾಯಿತು ಅಂತಾರೆ ಮೀನಾಕ್ಷಿ.

ವಿಜ್ಞಾನ ವಿಷಯದಲ್ಲಿ ತನ್ನ ಪದವಿ ಪೂರ್ಣಗೊಳಿಸಿದ ನಂತರ, 2019ರಲ್ಲಿ ಮಿನಾಕೃತಿ: ದಿ ಐಪಾನ್ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದರು, ಇದನ್ನು ಮಾಡುವಾಗ ಕಲಾ ಪ್ರಕಾರಕ್ಕೆ ಸರಿಯಾದ ಮನ್ನಣೆಯನ್ನು ನೀಡುವ ಮಾರ್ಗವಾಗಿ, ಸ್ಥಳೀಯ ಮಹಿಳೆಯರಿಗೆ ಉದ್ಯೋಗಗಳನ್ನು ಸಹ ಒದಗಿಸಿದರು. ತನ್ನ ತಿಳುವಳಿಕೆಯನ್ನು ವಿಸ್ತರಿಸಲು ಕುಮಾವೂನ್‌ಗೆ ಆಗಾಗ್ಗೆ ಪ್ರವಾಸ ಮಾಡಕಾಯಿತು, ಏಕೆಂದರೆ ಕಲಾ ಪ್ರಕಾರವು ಹುಟ್ಟಿಕೊಂಡಿದ್ದು ಇಲ್ಲೇ ಆದ್ದರಿಂದ.

ಬರುಬರುತ್ತಾ ಎಲ್ಲರೊಂದಿಗೆ ಮಾತನಾಡಿ ಸಕಲವೂ ಕಲಿತ ಮೇಲೆ ಅಲ್ಲಿನ ಮಹಿಳೆಯರೊಂದಿಗೆ ಮಾತನಾಡಿ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಕೈ ಹಾಕಿದರು. ಮೊದಲಿಗೆ ನಾಮಫಲಕಗಳು ಮತ್ತು ವಾಲ್ ಹ್ಯಾಂಗಿಂಗ್‌ಗಳೊಂದಿಗೆ ಪ್ರಾರಂಭಿಸಿದ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡರು.

Aipan art that is made with rice flour on a red background as a traditional art form in Uttarakhand

ಇಂದು, ಮಿನಾಕ್ಷಿ ಅವರು ತಮ್ಮ ಉದ್ಯಮದ ಮೂಲಕ ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ. ಮಹಿಳೆಯರು ತಮಗೆ ಬಿಡುವಿರುವ ಸಮಯದಲ್ಲಿ ಮನೆಯಲ್ಲಿಯೇ ಆರ್ಡರ್‌ ತೆಗೆದುಕೊಂಡು ತಿಂಗಳಿಗೆ ರೂ 5,000 ರಿಂದ ರೂ 10,000ಗಳಿಸುತ್ತಾರೆ. ಜೊತೆಗೆ ಮೀನಾಕ್ಷಿ ತಂಡವು ಶಾಲಾ-ಕಾಲೇಜುಗಳಲ್ಲಿ ನಡೆಸುವ ಕಾರ್ಯಾಗಾರಗಳ ಮೂಲಕ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಮಹಿಳೆಯರು ತಯಾರಿಸುವ ಉತ್ಪನ್ನಗಳಲ್ಲಿ ನಾಮಫಲಕ, ಕೋಸ್ಟರ್, ಶೋಪೀಸ್, ಕೆಟಲ್‌ಗಳು, ಇತ್ಯಾದಿಗಳಿರುತ್ತವೆ. ದೀಪಾವಳಿಯಲ್ಲಿ ಪೂಜೆ ತಾಲಿಗಳು, ತೋರಣಗಳು, ಕರ್ವಾ ಚೌತ್‌ಗೆ ಲೋಟಗಳು, ಇತ್ಯಾದಿಗಳಿರುತ್ತವೆ, ರಾಖಿಗಳ ಬೆಲೆ 20 ರೂ. 25 ರೂ. ಮನಸಿಗೆ ಹೊಳೆದ ಒಂದು ಆಲೋಚನೆ ಇಂದು ಇಷ್ಟು ಜನರ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಲ್ಲದೆ, ಸಂಪ್ರದಾಯಿಕ ಕಲೆಯನ್ನೂ ಜೀವಂತವಾಗಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!