ದಿನಭವಿಷ್ಯ | ಹಣಕಾಸು ಪರಿಸ್ಥಿತಿಗೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳದಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಉನ್ನತಿ. ಮನೆಯಲ್ಲಿ ಎಲ್ಲರ ಜತೆ ಉತ್ತಮ ಹೊಂದಾಣಿಕೆ. ವೈಮನಸ್ಸು ದೂರ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು.

ವೃಷಭ
ಕುಟುಂಬ ಸದಸ್ಯರಿಂದ ಅನಿರೀಕ್ಷಿತ ಕೊಡುಗೆ. ವೃತ್ತಿಯಲ್ಲಿ ನಿಮ್ಮ ನಿರ್ವಹಣಾ ಸಾಮರ್ಥ್ಯ ಹೆಚ್ಚುವುದು. ಇತರರ ನಂಜು ಮಾತಿಗೆ ಕಿವಿಗೊಡದಿರಿ.

ಮಿಥುನ
ಸಣ್ಣ ಸಮಸ್ಯೆಯೊಂದು ಮನಸ್ಸು ಕಾಡುವುದು.  ವಿಷಯ ಸಣ್ಣದಾದರೂ ಅದನ್ನು ಕಡೆಗಣಿಸುವ ಹಾಗಿಲ್ಲ. ಸೂಕ್ತ ಕ್ರಮ ತೆಗೆದುಕೊಂಡು ಪರಿಹರಿಸಿಕೊಳ್ಳಿ.

ಕಟಕ
ನಿಮ್ಮ ಪಾಲಿಗೆ ಸಾಧಾರಣ ದಿನ. ವ್ಯವಹಾರದಲ್ಲಿ ಹೆಚ್ಚು ಪ್ರಾಕ್ಟಿಕಲ್ ಆಗಿರಿ. ಭಾವನಾತ್ಮಕತೆ ವ್ಯವಹಾರವನ್ನು ಹಾಳು ಮಾಡಬಹುದು.

ಸಿಂಹ
ಸಂವಹನದ ಕೊರತೆ ಖಾಸಗಿ ಬದುಕಲ್ಲಿ ಸಮಸ್ಯೆ ಸೃಷ್ಟಿಸಬಹುದು. ಅಭಿಪ್ರಾಯ ವ್ಯಕ್ತ ಮಾಡುವಾಗ ಎಚ್ಚರವಿರಲಿ. ಹೊಂದಾಣಿಕೆ ಮುಖ್ಯ.

ಕನ್ಯಾ
ಖಾಸಗಿ ಸಮಸ್ಯೆ ಬಗೆಹರಿಸಲು ಇಂದು ಆದ್ಯತೆ ಕೊಡಬೇಕು. ಸಣ್ಣ ವಿಷಯಕ್ಕೂ ರೇಗದಿರಿ. ಸೌಹಾರ್ದ, ಸಮಾಧಾನಕ್ಕೆ ಆದ್ಯತೆ ಕೊಡಿ.

ತುಲಾ
ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಅಭಿವೃದ್ಧಿ. ಆರ್ಥಿಕ ಉನ್ನತಿ. ಹದಗೆಟ್ಟಿದ್ದ ಸಂಬಂಧವೊಂದು ಮತ್ತೆ ಚಿಗುರುವುದು. ಒಟ್ಟಿನಲ್ಲಿ ಖುಷಿಯ ದಿನ.

ವೃಶ್ಚಿಕ
ಹಣಕಾಸು ಪರಿಸ್ಥಿತಿಗೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳದಿರಿ. ಅದು ನಿಮಗೆ ಪೂರಕ ಆಗಲಾರದು. ಸ್ವಲ್ಪ ದಿನ ಕಾದು ನೋಡಿ. ಆಪ್ತರ ಸಲಹೆ ಪಡೆಯಿರಿ.

ಧನು
ಯಾವುದೇ ಪ್ರತಿಕೂಲ ಪರಿಸ್ಥಿತಿ ಏರ್ಪಟ್ಟರೂ ಆತ್ಮವಿಶ್ವಾಸ ಬಿಡಬೇಡಿ. ಏಕೆಂದರೆ ದಿನದಂತ್ಯಕ್ಕೆ ಎಲ್ಲವೂ ನಿಮ್ಮ ಪರವಾಗಿ ಆಗುವುದು. ಆರ್ಥಿಕ ಬಿಕ್ಕಟ್ಟು ನಿವಾರಣೆ.

ಮಕರ
ಗತವನ್ನು ನೆನೆದು ಈಗಿನ ಸಂತೋಷ ಹಾಳು ಮಾಡಬೇಡಿ. ಹಳೆಯ ತಪ್ಪುಗಳನ್ನು ಪುನರಾವರ್ತನೆ ಮಾಡದಿರಿ. ವೃತ್ತಿಯಲ್ಲಿ ಅಧಿಕ ಒತ್ತಡ.

ಕುಂಭ
ಕೆಲಸದ ಹೊರೆ ಮರೆತು ಆನಂದದಿಂದ ಕಾಲ ಕಳೆಯುವ ಯೋಜನೆ ನಿಮ್ಮದು. ಆದರೆ ಅವಶ್ಯ ಕೆಲಸ ಪೂರೈಸಿ. ಯಾವುದನ್ನೂ ಬಾಕಿ ಇಡಬೇಡಿ.

ಮೀನ
ಹೊಣೆ ಹೆಚ್ಚು. ಅಧಿಕ ಕೆಲಸ. ಇತರರ ನೆರವು ಕೇಳಲು ಮುಜುಗರ ಬೇಡ. ಎಲ್ಲವನ್ನೂ ಯಾಂತ್ರಿಕವಾಗಿ ಮಾಡದಿರಿ. ಮನಸ್ಸು ತೊಡಗಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!