Saturday, February 4, 2023

Latest Posts

ರಷ್ಯಾದ ಶಾಲೆಯಲ್ಲಿ ಭೀಕರ ಶೂಟೌಟ್​: ಮಕ್ಕಳು ಸೇರಿ 10 ಬಲಿ, 20 ಕ್ಕೂ ಹೆಚ್ಚು ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾದ ಶಾಲೆಯೊಂದರಲ್ಲಿ ಭೀಕರ ಶೂಟೌಟ್​ ನಡೆದಿದೆ. ಇದರಲ್ಲಿ ಶಿಕ್ಷಕರು ಮತ್ತು ಮಕ್ಕಳು ಸೇರಿದಂತೆ 10 ಮಂದಿ ಬಲಿಯಾಗಿದ್ದಾರೆ.
ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಈ ಗುಂಡಿನ ದಾಳಿಯಲ್ಲಿ ಸುಮಾರು 20 ಜನರು ಗಾಯಗೊಂಡಿದ್ದಾರೆ ಎಂದೂ ತಿಳಿದುಬಂದಿದೆ.

ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಬಳಿಕ ಆತ ಸಹ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ರಷ್ಯಾದ ಇಝೆವ್ಸ್ಕ್‌ನಲ್ಲಿ ಶಾಲೆಯಲ್ಲಿ 1ನೇ ತರಗತಿಯಿಂದ 11ನೇ ತರಗತಿಯವರೆಗಿನ ಮಕ್ಕಳು ಓದುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಗವರ್ನರ್‌ ಹಾಗೂ ಸ್ಥಳೀಯ ಪೊಲೀಸ್‌ ಪ್ರಕಾರ ಆ ಬಂದೂಕುಧಾರಿ ತಮ್ಮನ್ನು ತಾವೇ ಶೂಟ್‌ ಮಾಡಿಕೊಂಡಿದ್ದಾಳೆ. ಅಲ್ಲದೆ, ಅ ಶಾಲೆಯನ್ನು ಖಾಲಿ ಮಾಡಿಸಲಾಗಿದ್ದು, ಆ ಪ್ರದೇಶಕ್ಕೆ ಬೇಲಿ ಹಾಕಲಾಗಿದೆ ಎಂದೂ ಅಧಿಕಾರಿ ಹೇಳಿದ್ದಾರೆ. ಆದರೆ, ಆ ಬಂದೂಕುಧಾರಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಹಾಗೂ ಆತನ ಉದ್ದೇಶದ ಬಗ್ಗೆಯೂ ತಿಳಿದುಬಂದಿಲ್ಲ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!