ದಿನಭವಿಷ್ಯ| ಶೀತಕಾರಿ ಆಹಾರದಿಂದ ದೂರವಿರುವುದು ಒಳ್ಳೆಯದು..

ಮೇಷ
ಸಂತೋಷದ ಮನಸ್ಥಿತಿ. ಆದರೆ ಅನಿರೀಕ್ಷಿತ ವೆಚ್ಚ ಒದಗಿಬರಬಹುದು. ಆಪ್ತರೊಂದಿಗಿನ ಸಂಬಂಧದಲ್ಲಿ ಸಂಘರ್ಷ ಉಂಟಾದೀತು. ಸಹನೆ ಕಾಯ್ದುಕೊಳ್ಳಿ.

ವೃಷಭ
ಎಲ್ಲರನ್ನು ಮೆಚ್ಚಿಸುವ ಕಲೆ ನಿಮಗೆ ಕರಗತ. ಅದನ್ನು ಇಂದೂ ಸಾಬೀತುಪಡಿಸುವಿರಿ. ಎಲ್ಲರೂ ನಿಮ್ಮ ಸಹಕಾರಕ್ಕೆ ಧಾವಿಸಿ ಬರುವರು.

ಮಿಥುನ
ನೀವು ಇಷ್ಟ ಪಡುವ ಕಾರ್ಯ ಮಾಡಲು ಹಿಂಜರಿಯದಿರಿ. ಇತರರು ಏನಾದರೂ ತಿಳಿದಾರು ಎಂಬ ಅಂಜಿಕೆ ಬಿಟ್ಟುಬಿಡಿ. ನಿಮ್ಮ ಬದುಕು ನಿಮ್ಮದು.

ಕಟಕ
ನಿಮ್ಮ ಸುತ್ತಲಿನ ಪರಿಸ್ಥಿತಿ ಶಾಂತಿಯುತವಾಗಿದ್ದರೆ ಅದನ್ನು ಕೆಡಿಸಲು ನೀವು ಹೋಗದಿರಿ. ನಿಮ್ಮ ಹಸ್ತಕ್ಷೇಪ ಕೆಲವರಿಗೆ ಸರಿ ಕಾಣಲಾರದು. ನಡೆನುಡಿ ಮಿತವಿರಲಿ.

ಸಿಂಹ
ಖಾಸಗಿ ಬದುಕು ಮತ್ತು ವೃತ್ತಿಯ ಮಧ್ಯೆ ಸಮತೋಲನ ಸಾಧಿಸಿ. ಒಂದಕ್ಕೆ ಆದ್ಯತೆ ನೀಡಿ ಮತ್ತೊಂದು ಕಡೆಗಣಿಸಬೇಡಿ. ಆರ್ಥಿಕ ಸದೃಢತೆ.

ಕನ್ಯಾ
ಹವಾಮಾನ ಬದಲಾವಣೆಗೆ ಸಂಬಂಧಿಸಿ ಎಚ್ಚರದಿಂದಿರಿ. ಅದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರೀತು.

ತುಲಾ
ಉದಾಸೀನತೆ ಕಾಡುವುದು. ಆರ್ಥಿಕ ವ್ಯವಹಾರದಲ್ಲಿ ಎಚ್ಚರ ವಹಿಸಿ. ಅರಿವಿಲ್ಲದ ತಪ್ಪು ನಷ್ಟಕ್ಕೆ ಕಾರಣವಾದೀತು. ಶೀತಕಾರಿ ಆಹಾರದಿಂದ ದೂರವಿರಿ.

ವೃಶ್ಚಿಕ
ನಿಮ್ಮ ಖಾಸಗಿ ವಿಚಾರದಲ್ಲಿ ಇತರರು ಮೂಗು ತೂರಿಸಲು ಯತ್ನಿಸಬಹುದು. ಅವರಿಂದ ಕಿರಿಕಿರಿ ಅನುಭವಿಸುವಿರಿ. ಆರ್ಥಿಕ ಒತ್ತಡ.

ಧನು
ನಿಮ್ಮ ಮನಸ್ಸಿಗೆ ಬಂದುದನ್ನೆಲ್ಲ ಮಾತನಾಡಲು ಹೋಗದಿರಿ. ಅದರಿಂದ ಸಂಬಂಧ ಹಾಳಾದೀತು. ಕೆಲವರ ಅಸಹನೀಯ ವರ್ತನೆ ತಾಳಿಕೊಳ್ಳಿ.

ಮಕರ
ನಿಮ್ಮ ಕೋಪತಾಪ ನಿಮ್ಮನ್ನು ಮುಜುಗರದ ಸನ್ನಿವೇಶಕ್ಕೆ ತಳ್ಳಬಹುದು. ಸಹನೆ ಕಾಯ್ದುಕೊಳ್ಳಿ. ಆರ್ಥಿಕ ಒತ್ತಡ ಹೆಚ್ಚು. ಅನಿರೀಕ್ಷಿತ ಖರ್ಚು.

ಕುಂಭ
ನಿಮ್ಮ ಸಹನೆ ಪರೀಕ್ಷಿಸುವ ಪ್ರಸಂಗ ಉಂಟಾದೀತು. ಕೆಲವು ವ್ಯಕ್ತಿಗಳು ಮಾನಸಿಕವಾಗಿ ಕಿರುಕುಳ ನೀಡುವರು. ದೃಢ ಮನಸ್ಸು ಬೆಳೆಸಿಕೊಳ್ಳಿ. ಒತ್ತಡಕ್ಕೆ ಮಣಿಯದಿರಿ.

ಮೀನ
ಸಂಬಂಧದಲ್ಲಿ ಕೆಲವು ವಿಷಯ ರಹಸ್ಯವಾಗಿರಬೇಕು. ಅದನ್ನು ಬಹಿರಂಗ ಮಾಡಲು ಹೋಗದಿರಿ. ಕಚೇರಿಯಲ್ಲಿ ತಪ್ಪು ಘಟಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!