ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನೀವಿಂದು ಹೆಚ್ಚು ಸಹನೆ ಪ್ರದರ್ಶಿಸಬೇಕು. ಯಾವುದೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಅವಕಾಶ ಕೊಡದಿರಿ. ಶಾಂತಚಿತ್ತತೆ ಮುಖ್ಯ.
ವೃಷಭ
ಕುಟುಂಬದ ಹಿತಾಸಕ್ತಿಯ ವಿಷಯ ಬಂದಾಗ ನಿಮ್ಮ ನಿಲುವಿನಿಂದ ಹಿಂದೆ ಸರಿಯಬೇಡಿ. ನಿಮ್ಮನ್ನು ಇತರರು ಬಳಸಿಕೊಳ್ಳಲು ಅವಕಾಶ ನೀಡಬೇಡಿ.
ಮಿಥುನ
ನಿಮ್ಮ ಉದ್ದೇಶ ಸಫಲವಾಗದು. ಅನಿರೀಕ್ಷಿತ ಅಡ್ಡಿಗಳು ಒದಗುತ್ತವೆ. ನಿಮ್ಮ ಏಳಿಗೆಯನ್ನು ಕಂಡು ಕರುಬುವವರ ಮಾತಿಗೆ ಬೆಲೆ ಕೊಡಬೇಡಿ.
ಕಟಕ
ವೃತ್ತಿಯಲ್ಲಿ ನಿಮ್ಮ ವಿಶ್ವಾಸ ವೃದ್ಧಿಸುವ ಬೆಳವಣಿಗೆ. ನಿಮ್ಮನ್ನು ದಮನಿಸುವ ಇತರರ ಪ್ರಯತ್ನ ಸಫಲ ಆಗುವುದಿಲ್ಲ. ಆರ್ಥಿಕ ಲಾಭ ಸಂಭವ.
ಸಿಂಹ
ಕಾಡುತ್ತಿದ್ದ ಆರ್ಥಿಕ ಬಿಕ್ಕಟ್ಟು ಇಂದು ನಿವಾರಣೆ. ಹಣಕಾಸು ಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಭಿನ್ನಮತ ಮೂಡಿದರೂ ಬಳಿಕ ಶಮನ.
ಕನ್ಯಾ
ನಿಮ್ಮ ಮುಖ್ಯ ಉದ್ದೇಶವೊಂದು ಇಂದು ಈಡೇರುವ ಸಂಭವ. ಅದಕ್ಕೆ ಪೂರಕ ಬೆಳವಣಿಗೆ ಸಂಭವಿಸುವುದು. ಆದರೆ ಸಂತೋಷದಲ್ಲಿ ಮೈಮರೆಯಬೇಡಿ.
ತುಲಾ
ಕುಟುಂಬದಲ್ಲಿ ಸಂಬಂಧ ಸುಧಾರಿಸುವ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸಫಲತೆ ಸಿಗುವುದು. ಮನಸ್ತಾಪ ದೂರವಾಗಲಿದೆ. ಆಪ್ತರ ಸಹಕಾರ.
ವೃಶ್ಚಿಕ
ಕೌಟುಂಬಿಕ ಸಮಸ್ಯೆ ಯನ್ನು ವಿಶ್ವಾಸದಿಂದ ನಿಭಾಯಿಸುವಿರಿ. ಮಾತು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳುವುದು ಅತಿ ಮುಖ್ಯ. ಸಂಧಾನದ ಹಾದಿ ಉತ್ತಮ.
ಧನು
ಎಂದಿನಂತೆ ದಿನ ಸಾಗದು. ಕಾರ್ಯದಲ್ಲಿ ಹೆಚ್ಚು ಕ್ರಿಯಾಶೀಲತೆ ಬೇಕು. ಇಲ್ಲವಾದರೆ ವೈಫಲ್ಯ ಕಾಣುವಿರಿ. ಮಾನಸಿಕ ಉದ್ವಿಗ್ನತೆ ಹೆಚ್ಚುವ ಸನ್ನಿವೇಶ.
ಮಕರ
ಆರ್ಥಿಕ ಮುಗ್ಗಟ್ಟು ಕಾಡಬಹುದು. ಪ್ರಮುಖ ಕಾರ್ಯಕ್ಕೆ ಹಣದ ಅವಶ್ಯಕತೆ ಬೀಳಬಹುದು. ಮಾನಸಿಕ ಒತ್ತಡದಿಂದ ಸಂಘರ್ಷ ಸಂಭವ.
ಕುಂಭ
ಕೌಟುಂಬಿಕ ಪರಿಸರವು ಮನಸ್ಸಿಗೆ ಕಿರಿಕಿರಿ ಸೃಷ್ಟಿಸಬಹುದು. ಕೆಲವರ ವರ್ತನೆ ಅಸಹನೀಯ ಎನಿಸುತ್ತದೆ. ಸಹನೆಯಿಂದ ಅದನ್ನು ನಿಭಾಯಿಸಿರಿ.
ಮೀನ
ಸಹೋದ್ಯೋಗಿ ಜತೆ ಸಂಘರ್ಷ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಸಮಾಧಾನದಿಂದ ವರ್ತಿಸುವುದೊಳಿತು.