ದಿನಭವಿಷ್ಯ| ಬಾಕಿಯುಳಿದ ಕೆಲಸ ಮುಗಿಸಲು ಗಮನ ಕೊಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಸ್ನೇಹಿತರು ಅಥವಾ ಬಂಧುಗಳ ಜತೆ ಭಿನ್ನಾಭಿಪ್ರಾಯ. ಬಾಕಿಯುಳಿದ ಕೆಲಸ ಮುಗಿಸಲು ಗಮನ ಕೊಡಿ. ಆರ್ಥಿಕ ಸಂಕಷ್ಟ ಕಾಡುವುದು.

ವೃಷಭ
ನಿಮ್ಮ ಮನಸ್ಸಲ್ಲಿ ಏನೋ ಗಹನವಾದುದು ಕೊರೆಯುತ್ತಿರುತ್ತದೆ. ಅಗತ್ಯ ಸಂದರ್ಭದಲ್ಲಿ ಅದನ್ನು ಹೊರಹಾಕಲು ಹಿಂಜರಿಯದಿರಿ. ಧೈರ್ಯವಿರಲಿ.

ಮಿಥುನ
ಪ್ರೀತಿಪಾತ್ರ ವ್ಯಕ್ತಿಯೊಂದಿಗೆ ಇಂದು ಹೆಚ್ಚು ಕಾಲ ಕಳೆಯುವಿರಿ. ಭವಿಷ್ಯದ ಯೋಜನೆ ಹಾಕಿಕೊಳ್ಳಿ. ಹಣಕಾಸು ಕೊರತೆ ಕಾಡಬಹುದು.

ಕಟಕ
ಆಪ್ತರ ಸಂಗದಲ್ಲಿ ಸಂತೋಷ. ಸಣ್ಣಪುಟ್ಟ ಸಮಸ್ಯೆ ತಲೆದೋರ ಬಹುದಾದರೂ ಅದನ್ನು ನಿಭಾಯಿಸಿಕೊಳ್ಳುವಿರಿ. ಕುಟುಂಬಸ್ಥರು ನಿಮ್ಮ ಬೆಂಬಲಕ್ಕಿದ್ದಾರೆ.

ಸಿಂಹ
ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ದೊರಕು ವುದು. ಇದರಿಂದ ಕೆಲಸಗಳು ಸುಗಮ ವಾಗಿ ನಡೆಯುವವು. ಕೌಟುಂಬಿಕ ಪರಿಸ್ಥಿತಿ ಉಲ್ಲಾಸದಾಯಕ.

ಕನ್ಯಾ
ಎಡವುದು ಸಹಜ. ಆದರೆ ತಕ್ಷಣವೇ ಎದ್ದು ನಿಲ್ಲುವುದು ಮುಖ್ಯ. ಇದನ್ನು ನೀವಿಂದು ನೆನಪಲ್ಲಿಡಬೇಕು. ಸಣ್ಣ ಹಿನ್ನಡೆಗಳಿಂದ ಎದೆಗುಂದದಿರಿ.

ತುಲಾ
ಶಾಂತಿದೂತರ ಕಾರ್ಯ ನಿರ್ವಹಿಸುವ ಪ್ರಸಂಗ ಒದಗಬಹುದು. ನಿಮ್ಮ ಸಂಧಾನ ಕಾರ್ಯ ಯಶಸ್ಸು ಕಾಣುವುದು. ಮನ, ಕುಟುಂಬದ  ಕೆಲಸದಲ್ಲಿ ಪ್ರಗತಿ.

ವೃಶ್ಚಿಕ
ಸವಾಲಿನ ದಿನ. ಕಷ್ಟ ಗಳು ನಿಮ್ಮ ಚಿಂತಿ ಸುವ ಶಕ್ತಿಯನ್ನೆ ಮರೆಸಿ ಬಿಡಬಹುದು. ಅಗತ್ಯವಿರುವ ನೆರವನ್ನೆಲ್ಲ ಪಡೆಯಬೇಕಾದೀತು. ಕೌಟುಂಬಿಕ ಅಶಾಂತಿ.

ಧನು
ಕೌಟುಂಬಿಕ ಶಾಂತಿ, ಭದ್ರತೆಗೆ ಇಂದು ನೀವು ಹೆಚ್ಚು ಆದ್ಯತೆ ಕೊಡುವಿರಿ. ಕುಟುಂಬ ನಿರ್ಲಕ್ಷಿಸಿದ್ದೇನೆ ಎಂಬ ಭಾವನೆ ತೊಡೆಯಲು ಯತ್ನಿಸುವಿರಿ.

ಮಕರ
ಪ್ರೀತಿಪಾತ್ರರನ್ನು ಸಂತುಷ್ಟಗೊಳಿಸಲು ಇಂದು ಪ್ರಯತ್ನಿಸುವಿರಿ. ಶಾಪಿಂಗ್ ಕುಶಿ ತರಲಿದೆ. ಇದೇವೇಳೆ, ನಿಮ್ಮ ಕರ್ತವ್ಯವನ್ನು ಕಡೆಗಣಿಸಬೇಡಿ.

ಕುಂಭ
ಇಂದು ಎಲ್ಲವೂ ನಿಮ್ಮ ಹಿಡಿತಕ್ಕೆ ಸಿಗುವುದು. ನಿಮ್ಮ ಗುರಿಯನ್ನು ಸಾಧಿಸುವಿರಿ. ಅಡ್ಡಿಗಳು ತಾನಾಗಿ ನಿವಾರಣೆ ಆಗುವವು. ಕೌಟುಂಬಿಕ ಶಾಂತಿ, ಸಮಾಧಾನ.

ಮೀನ
ಚೂರಿಯಿಂದ ಇರಿಯುವ ಬದಲು ಮಾತಿನಿಂದ ಚುಚ್ಚುವುದನ್ನು ನೀವು ಇಷ್ಟ ಪಡುವಿರಿ. ಅದರಿಂದ ಸಂಬಂಧ ಹಾಳಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!