ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಆಪ್ತರ ಜತೆಗಿನ ಸಂಬಂಧದಲ್ಲಿ ಬಿರುಕು ಕಾಣಬಹುದು. ಪರಸ್ಪರ ಅರಿವು, ಹೊಂದಾಣಿಕೆ ಮೂಲಕ ಇದನ್ನು ಪರಿಹರಿಸಬಹುದು. ಅಧಿಕ ಖರ್ಚು.
ವೃಷಭ
ವಾಹನ ಚಲಾಯಿಸು ವಾಗ ನಿಯಮಗಳನ್ನು ಸರಿಯಾಗಿ ಪಾಲಿಸಿ. ಆರ್ಥಿಕ ಹಿನ್ನಡೆ ಉಂಟಾದೀತು. ಮನೆಯಲ್ಲಿ ಸಂಭ್ರಮ ಆಚರಣೆ.
ಮಿಥುನ
ದಂಪತಿಗಳ ಮಧ್ಯೆ ಭಿನ್ನಮತ ಉಂಟಾಗಬಹುದು. ವಾದಕ್ಕೆ ಹೋಗದಿದ್ದರೆ ಎಲ್ಲವೂ ಸರಿಯಾಗು ವುದು. ವೃತ್ತಿಯಲ್ಲಿ ಒತ್ತಡ ಹೆಚ್ಚು.
ಕಟಕ
ಇಂದಿನ ಕಾರ್ಯ ಕಠಿಣವೆನಿಸೀತು. ಆದರೂ ದಿನದಂತ್ಯಕ್ಕೆ ಎಲ್ಲವೂ ಸರಿಯಾಗು ವುದು. ಆತ್ಮೀಯರ ಸಂಬಂಧದಲ್ಲಿ ಬಿರುಕು ಮೂಡಬಹುದು.
ಸಿಂಹ
ಕಾರ್ಯಸಿದ್ಧಿ. ವಿಘ್ನಗಳನ್ನು ಸಮರ್ಥವಾಗಿ ಪರಿಹರಿಸುವಿರಿ. ಆರೋಗ್ಯ ಸಮಸ್ಯೆ ತುಸು ಕಾಡಬಹುದು. ಕೌಟುಂಬಿಕ ಪರಿಸರ ಉಲ್ಲಾಸದಾಯಕ.
ಕನ್ಯಾ
ವೃತ್ತಿ ಬದುಕಿನಲ್ಲಿ ಸಮಸ್ಯೆ ಎದುರಿಸುವಿರಿ. ವಿವೇಕದಿಂದ ವರ್ತಿಸಿದರೆ ಅದರಿಂದ ಪಾರಾಗಬಹುದು. ದುಡುಕಿನ ನಿರ್ಧಾರ ತಾಳಲು ಹೋಗದಿರಿ.
ತುಲಾ
ಇಂದು ಜಗಳ, ವಾಗ್ವಾದದಿಂದ ದೂರವಿರಿ. ಮನಸ್ಸಿನ ಶಾಂತಿ ಕದಡಬಹುದು. ಹೆಚ್ಚುವರಿ ಹೊಣೆಗಾರಿಕೆಯ ಹೊರೆ ಬಾಧಿಸಬಹುದು.
ವೃಶ್ಚಿಕ
ಬಿಡುವಿಲ್ಲದ ಕೆಲಸದಲ್ಲಿ ನಿರತರಾಗುವಿರಿ. ಮನೆಯಲ್ಲಿ ಹಲವಾರು ಹೊಣೆಗಾರಿಕೆ ನಿಭಾಯಿಸಬೇಕಾದ ಪರಿಸ್ಥಿತಿ. ಆದರೆ ಮನಸ್ಸು ಉಲ್ಲಸಿತ.
ಧನು
ಸಂಗಾತಿ ಜತೆ ಉತ್ತಮ ಹೊಂದಾಣಿಕೆ. ಪರಸ್ಪರ ತಿಳುವಳಿಕೆಯಿಂದ ಭಿನ್ನಮತ ನಿವಾರಣೆ. ಗಾಸಿಪ್‌ಗಳಿಗೆ ಹೆಚ್ಚು ಗಮನ ಕೊಡದಿರಿ. ಬಂಧು ಭೇಟಿ.
ಮಕರ
ಅಜೀರ್ಣದಂತಹ ಸಮಸ್ಯೆ ಕಾಡಬಹುದು. ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿರಿ. ಕುಟುಂಬ ಸದಸ್ಯರ ಹಿತಾಸಕ್ತಿಗೆ ಹೆಚ್ಚು ಗಮನ ಕೊಡಿರಿ.
ಕುಂಭ
ಸಮಸ್ಯೆ ಕಾಡುವುದು. ಅದನ್ನು ಪರಿಹರಿಸುವ ಯತ್ನ ಪೂರ್ಣ ಸಫಲತೆ ಕಾಣದು. ಆಪ್ತರ ಜತೆ ಮಾತಿನ ಚಕಮಕಿ ನಡೆದೀತು. ಸಹನೆ ಕಾಯ್ದುಕೊಳ್ಳಿ.
ಮೀನ
ಮನೆಯಲ್ಲಿ ಬಿರುಸಿನ ವಾಗ್ವಾದ ನಡೆದೀತು. ಇದರಿಂದ ನೆಮ್ಮದಿ ಹಾಳು. ಸಂಜೆ ವೇಳೆಗೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು. ಖರ್ಚು ಹೆಚ್ಚಳ.