Tuesday, March 28, 2023

Latest Posts

ದಿನಭವಿಷ್ಯ| ವೃತ್ತಿಯಲ್ಲಿನ ಸವಾಲು ನಿಭಾಯಿಸಲು ತಾಳ್ಮೆ ಅವಶ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ವೃತ್ತಿಯಲ್ಲಿನ ಸವಾಲು ನಿಭಾಯಿಸಲು ತಾಳ್ಮೆ ಅವಶ್ಯ. ಕೆಲಸದ ಫಲ ಸಿಗಬೇಕಾದರೆ ತುಂಬ ಶ್ರಮ ಪಡಬೇಕು. ಸಂಬಂಧದಲ್ಲಿ ಏರುಪೇರು ಸಂಭವ.

ವೃಷಭ
ಎಲ್ಲರ ಜತೆ ಉತ್ತಮ ಹೊಂದಾಣಿಕೆ. ಮನೆಯಲ್ಲಿ ಪರಸ್ಪರರನ್ನು ಅರಿಯುವಲ್ಲಿ ಸಫಲತೆ.ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು. ಆರೋಗ್ಯ ಸ್ಥಿರ.

ಮಿಥುನ
ಖರ್ಚು ನಿಯಂತ್ರಿಸಲು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗದು. ಬಂಧುಗಳ ಜತೆ ಸೌಹಾರ್ದ ಬಾಂಧವ್ಯ. ವೃತ್ತಿಯಲ್ಲಿ ಕೆಲವರ ವಿರೋಧ .

ಕಟಕ
ವೃತ್ತಿಯ ಒತ್ತಡವು ನಿಮಗೆ ಇತರ ವಿಷಯಗಳ ಕುರಿತು ಗಮನ ಕೇಂದ್ರೀಕರಿಸಲು ಬಿಡುವುದಿಲ್ಲ.ಸಂಬಂಧದಲ್ಲಿ ಬಿಕ್ಕಟ್ಟು ಉಂಟಾದೀತು.

ಸಿಂಹ
ಹಣದ ಕೊರತೆ ಕಾಡುವುದು.ಪ್ರಮುಖ ಕಾರ್ಯವು ಇದರಿಂದ ವಿಳಂಬವಾದೀತು. ನಿಕಟ ಬಂಧುವಿನಿಂದ ಟೀಕೆ ಕೇಳುವಿರಿ. ಸಂಬಂಧ ಹಳಸಬಹುದು.

ಕನ್ಯಾ
ಮಾನಸಿಕವಾಗಿ ಒತ್ತಡ.  ಇದು ನಿಮ್ಮ ಮಾತು ಮತ್ತು ವರ್ತನೆಯಲ್ಲೂ ಪ್ರತಿಫಲಿಸುವುದು. ಯಾವುದೇ ಕೆಲಸಕ್ಕೆ ಕೇವಲ ಅದೃಷ್ಟ ನಂಬಿ ಕೂರದಿರಿ.

ತುಲಾ
ಹೆಚ್ಚುವರಿ ಹೊಣೆಗಾರಿಕೆ. ಸಹೋದ್ಯೋಗಿ  ಜತೆಗೆ ಭಿನ್ನಮತ. ಕೆಲಸದಲ್ಲಿ ಏರುಪೇರು. ಒಟ್ಟಿನಲ್ಲಿ ಮಾನಸಿಕ ನೆಮ್ಮದಿ ಹಾಳು. ಕುಟುಂಬಸ್ಥರ ಸಂಗದಲ್ಲಿ ಸಮಾಧಾನ.

ವೃಶ್ಚಿಕ
ಹೆಚ್ಚು ಏರುಪೇರು ಇಲ್ಲದ ಸಹಜ ದಿನ. ಕಚೇರಿಯಲ್ಲಿ ಸುಗಮ ಕಾರ್ಯ. ಮನೆಯಲ್ಲಿ ಹೊಣೆಗಾರಿಕೆ ಹೆಚ್ಚಿದರೂ ಅದನ್ನು ನಿಭಾಯಿಸುವಿರಿ. ಆರ್ಥಿಕ ಸ್ಥಿತಿ ತೃಪ್ತಿಕರ.

ಧನು
ಯಾವುದೇ ವಿಷಯವನ್ನು ಕ್ಷಿಪ್ರವಾಗಿ ಇತ್ಯರ್ಥ ಮಾಡಿ. ಇದರಿಂದ ನಿಮಗೆ ಅನುಕೂಲ. ಬಿಕ್ಕಟ್ಟನ್ನು ದೀರ್ಘ ಕಾಲ ಎಳೆಯದಿರಿ.

ಮಕರ
ನೀವಿಂದು ಭಾವನೆಯ ಮೇಲೆ ನಿಯಂತ್ರಣ ಸಾಧಿಸಿ. ಪ್ರಾಕ್ಟಿಕಲ್ ಆಗಿ ಚಿಂತಿಸಿರಿ. ಆತುರದ ತೀರ್ಮಾನ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರೀತು.

ಕುಂಭ
ಶೀತ ಕೆಮ್ಮಿನಂತಹ ಅನಾರೋಗ್ಯ ಕಾಡಬಹುದು.ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ಕೌಟುಂಬಿಕ ಶಾಂತಿ, ಸಮಾಧಾನ.

ಮೀನ
ಸಹೋದ್ಯೋಗಿ ಅಥವಾ ಮನೆಯ ಸದಸ್ಯರ ಜತೆ ವಾಗ್ವಾದಕ್ಕೆ ಹೋಗದಿರಿ.ಅದರಿಂದ ನೆಮ್ಮದಿ ಹಾಳು. ಸಹನೆ ಕಾಯ್ದುಕೊಳ್ಳಿ. ಆರ್ಥಿಕ ಪರಿಸ್ಥಿತಿ ಸದೃಢ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!