Tuesday, March 28, 2023

Latest Posts

ಓಂ…ಶಿವೋಹಂ: ಭಕ್ತರಿಂದ ತುಂಬಿ ತುಳುಕುತ್ತಿರುವ ಶಿವಕ್ಷೇತ್ರಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲು ಶೈವ ಕ್ಷೇತ್ರಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಮುಂಜಾನೆಯಿಂದಲೇ ಕೈಲಾಸನಾಥನ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಮುರುಡೇಶ್ವರ, ಗೋಕರ್ಣ, ಮಲೆ ಮಹದೇಶ್ವರ, ಕೋಟಿಲಿಂಗ, ಭೋಗನಂದೀಶ್ವರ, ನಂಜನಗೂಡು ನಂಜುಡೇಶ್ವರ, ಧರ್ಮಸ್ಥಳದಲ್ಲಿ ವಿಸೇಷ ಪೂಜೆ ಕೈಂಖರ್ಯಗಳು ನೆರವೇರುತ್ತಿವೆ. ಶಿವನ ದರ್ಶನಕ್ಕಗಿ ಬೆಳಗ್ಗೆಯಿಂದಲೇ ಭಕ್ತರ ದಂಡು ಆಗಮಿಸುತ್ತಿದೆ.

ತೆಲುಗು ರಾಜ್ಯಗಳ ಶ್ರೀಶೈಲ, ದ್ರಾಕ್ಷಾರಂ, ಕೋಟಪ್ಪಕೊಂಡ, ಶ್ರೀಕಾಳಹಸ್ತಿಯ ಶೈವ ಕ್ಷೇತ್ರಗಳ ಜತೆಗೆ ವೇಮುಲವಾಡ, ಕಾಳೇಶ್ವರಂನಲ್ಲಿ ಭಕ್ತರ ದಂಡೇ ಇದೆ. ಶಿವನ ನಾಮಸ್ಮರಣೆಯೊಂದಿಗೆ ನಲ್ಲಮಾಲ ಗುನುಗುತ್ತಿದೆ. ಶ್ರೀಶೈಲ ಭ್ರಮರಾಂಭಿಕಾ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶಿವದೀಕ್ಷೆಯನ್ನು ಕೈಗೊಂಡಿರುವ ಜನರು ಪಾದಯಾತ್ರೆಯಲ್ಲಿ ಶ್ರೀಶೈಲಕ್ಕೆ ಆಗಮಿಸುತ್ತಿದ್ದಾರೆ.

ಶ್ರೀಶೈಲದಲ್ಲಿ ಎಲ್ಲಿ ನೋಡಿದರೂ ಶಿವಭಕ್ತರ ದಂಡೇ ಕಾಣಸಿಗುತ್ತದೆ. ಹರಹರ ಶಂಭೋ ಶಂಕರ ಎಂದು ಜಪಿಸುತ್ತಾ ಭಕ್ತರು ಮಲ್ಲಣ್ಣನ ಬಳಿಗೆ ಬರುತ್ತಿದ್ದಾರೆ. ಕಾಲ ನಡಿಗೆಯಲ್ಲಿ ಭಕ್ತರು ಮಲ್ಲಣ್ಣ ಬಳಿ ತಲುಪುತ್ತಿದ್ದಾರೆ.

ಪಂಚರಮಕ್ಷೇತ್ರದಲ್ಲಿ ಮಹಾಶಿವರಾತ್ರಿ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದೆ. ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ದಂಡು. ಬೆಳಗ್ಗೆಯಿಂದಲೇ ಭಕ್ತರು ಸ್ವಾಮಿಯ ದರ್ಶನ ಪಡೆದರು. ಶನಿ ತ್ರಯೋದಶಿಯಾದ್ದರಿಂದ ಭಕ್ತರು ಅಭಿಷೇಕ ಮಾಡಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!