Tuesday, March 28, 2023

Latest Posts

ದಿನಭವಿಷ್ಯ| ಮನೆಯವರಿಂದ ಬರುವ ಬೇಡಿಕೆಗಳನ್ನು ಈಡೇರಿಸುವ ಒತ್ತಡಕ್ಕೆ ಸಿಲುಕುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಆಪ್ತರೊಬ್ಬರು ತಮ್ಮ ವರ್ತನೆಯಿಂದ ಮನಸ್ಸಿಗೆ ನೋವು ನೀಡುತ್ತಾರೆ. ಕೆಲಸಗಳು ಅಪೂರ್ಣ.

ವೃಷಭ
ಇಂದು ನಿಮ್ಮ ಪಾಲಿಗೆ ವಿಶೇಷವಾದ ವ್ಯಕ್ತಿಯನ್ನು ಭೇಟಿಯಾಗುವಿರಿ. ಅವರ ಸಂಗದಲ್ಲಿ ಸಂತೋಷ. ಕೌಟುಂಬಿಕ ಪರಿಸರ ಹರ್ಷದಾಯಕ.

ಮಿಥುನ
ನಿಮ್ಮ ವೃತ್ತಿಯ ಮೇಲೆ ಪರಿಣಾಮ ಬೀರುವಂತಹ ಬೆಳವಣಿಗೆ. ನೀವು ವಿವೇಚನೆಯಿಂದ ಹೆಜ್ಜೆ ಇಡಬೇಕು. ಆತುರದ ನಡೆ ಸಲ್ಲದು.

ಕಟಕ
ಬಂಧುಗಳ ಜತೆ ಉತ್ತಮ ಸಮನ್ವಯ. ಇದರಿಂದಾಗಿ ಭಿನ್ನಮತ ನಿವಾರಣೆ.  ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯ. ಆರ್ಥಿಕ ಕೊರತೆ ದೂರ.

ಸಿಂಹ
ಅಪೂರ್ಣವಾಗಿ ಉಳಿದಿದ್ದ ಕಾರ್‍ಯ ಪೂರ್ಣಗೊಳಿಸುವ ಅವಕಾಶ. ಬಂಧುಗಳಿಂದ ಶುಭಸುದ್ದಿ ಕೇಳುವಿರಿ. ಧನಲಾಭವಿದೆ.

ಕನ್ಯಾ
ಕುಟುಂಬದ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ಸಣ್ಣಪುಟ್ಟ ವಾಗ್ವಾದಗಳಿಗೆ ಹೆಚ್ಚು ಪ್ರಾಮುಖ್ಯ ಕೊಡಬೇಡಿ.

ತುಲಾ
ಆರ್ಥಿಕವಾಗಿ ಉತ್ತಮ ದಿನ. ಧನ ಲಾಭ. ಖರ್ಚೂ ಹೆಚ್ಚಲಿದೆ. ವೈಯಕ್ತಿಕವಾಗಿ ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ.

ವೃಶ್ಚಿಕ
ಮನೆಯವರಿಂದ ಬರುವ ಬೇಡಿಕೆಗಳನ್ನು ಈಡೇರಿಸುವ ಒತ್ತಡಕ್ಕೆ ಸಿಲುಕುವಿರಿ. ಜೇಬಿಗೆ ಕತ್ತರಿ. ಆದರೆ ಮನಸ್ಸಿಗೆ ಹಿತ. ಕೌಟುಂಬಿಕ ಸೌಹಾರ್ದ ಹೆಚ್ಚಳ.

ಧನು
ನಿಮ್ಮ ನಿರೀಕ್ಷೆಗಳು ಈಡೇರುವ ದಿನ. ಮುಖ್ಯ ವಸ್ತು ಖರೀದಿಸುವ ಆಸೆ ಈಡೇರಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಕೌಟುಂಬಿಕ ಶಾಂತಿ.

ಮಕರ
ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು. ಹಿತವಲ್ಲದ ಆಹಾರ ಸೇವಿಸದಿರಿ. ಕೌಟುಂಬಿಕ ಸ್ವಾಸ್ಥ್ಯಕ್ಕೂ ಆದ್ಯತೆ ಕೊಡಿ. ಇಂದು ಖರ್ಚು ಅಧಿಕವಾದೀತು

ಕುಂಭ
ಪ್ರಮುಖ ವಿಷಯದಲ್ಲಿ ಹಠಾತ್ ನಿರ್ಧಾರ ತಾಳಬೇಕಾದ ಪ್ರಸಂಗ ಉದ್ಭವಿಸಬಹುದು. ಕಠಿಣ ನಿಲುವು ತಾಳಲು ಹಿಂಜರಿಯದಿರಿ. ಹಿತಾಸಕ್ತಿ ಕಾಯ್ದುಕೊಳ್ಳಿ.

ಮೀನ
ಕುಟುಂಬಸ್ಥರು ಮತ್ತು ಸ್ನೇಹಿತರು ನಿಮ್ಮಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾರೆ.  ಅವರ ನಿರೀಕ್ಷೆ ಈಡೇರಿಸಲು ನೀವು ಕಠಿಣ ಶ್ರಮ ಪಡಬೇಕಾಗುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!