Monday, March 27, 2023

Latest Posts

ದಿನಭವಿಷ್ಯ| ಕೆಲವು ಹಿನ್ನಡೆ, ನಿರಾಶೆ ಎದುರಿಸಲು ಸಜ್ಜಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕೆಲವು ನೆನಪುಗಳು ಕಾಡಬಹುದು. ನೆನಪು ಕಲಕುವ ವ್ಯಕ್ತಿಗಳ ಭೇಟಿ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ವರ್ತಿಸಿ.

ವೃಷಭ
ಕೆಲವು ಹಿನ್ನಡೆ, ನಿರಾಶೆ ಎದುರಿಸಲು ಸಜ್ಜಾಗಿ. ನಿಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ಹತಾಶೆ, ಅಸಹನೆ ನಿಮ್ಮನ್ನು ಆವರಿಸಬಹುದು.

ಮಿಥುನ
ಸೂಕ್ಷ್ಮ ಸಂವೇದಿಯಾಗಿ ಇಂದು ವರ್ತಿಸುತ್ತೀರಿ. ಸಣ್ಣ  ವಿಷಯಗಳೂ ಭಾವೋದ್ವೇಗಕ್ಕೆ  ಕಾರಣವಾಗುತ್ತದೆ. ಕೆಲವರು ನಿಮಗೆ ನೋವು ತರುತ್ತಾರೆ.

ಕಟಕ
ಭಾವುಕರಾಗಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಿ ಎಂದು ಗ್ರಹಗತಿ ತಿಳಿಸುತ್ತಿದೆ.ಕೌಟುಂಬಿಕ ವಿಚಾರಕ್ಕೆ ಮಹತ್ವ ಕೊಡಿ.  ಉಳಿದವೆಲ್ಲ ಮತ್ತೆ.

ಸಿಂಹ
ಹೆಚ್ಚು ಭಾವನಾತ್ಮಕವಾಗಿ ವರ್ತಿಸುವಿರಿ. ಆಪ್ತ ರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ಜೀವನ ಸಂಗಾತಿಯ ಹುಡುಕಾಟ ಸಫಲವಾಗಲಿದೆ.

ಕನ್ಯಾ
ಯಾವುದೋ ವಿಷಯ ಮನದಲ್ಲಿ ಭಯಾತಂಕ ಸೃಷ್ಟಿಸುತ್ತದೆ. ಜೀವನದ ಬಗ್ಗೆ ಅನಿಶ್ಚಿತತೆ. ಕೆಲವು ವ್ಯಕ್ತಿಗಳು ಮನಸ್ಸಿನ ಸ್ವಾಸ್ಥ್ಯ ಕದಡುತ್ತಾರೆ. ಎಚ್ಚರದಿಂದಿರಿ.

ತುಲಾ
ಕುಟುಂಬ ಸದಸ್ಯರ ಸಾಧನೆಯು ನಿಮ್ಮಲ್ಲಿ ಹೆಮ್ಮೆ ತುಂಬುವುದು. ಉದ್ಯೋಗದಲ್ಲಿ ಉನ್ನತಿ. ಆರ್ಥಿಕ ಲಾಭ. ಹೂಡಿಕೆಯಿಂದ ಉತ್ತಮ ಫಲ.

ವೃಶ್ಚಿಕ
ಇಂದು ನೀವು ಎಚ್ಚರಿಕೆಯಿಂದಿರಬೇಕು. ಯಾವುದೋ ಕೆಟ್ಟದ್ದರ ಮುನ್ಸೂಚನೆ  ತೋರುತ್ತಿದೆ. ಇದರಿಂದ ಪ್ರಮುಖ ಪಾಠ
ಕಲಿಯುವಿರಿ.

ಧನು
ದೂರ ಪ್ರಯಾಣ ಸಂಭವ. ಸಮಾರಂಭ ದಲ್ಲಿ ಪಾಲ್ಗೊಳ್ಳುವ ಅವಕಾಶ. ಧಾರ್ಮಿಕ ವಿಚಾರಗಳು ಹೆಚ್ಚು ಆಸಕ್ತಿ ಕೆರಳಿಸಬಹುದು. ನಿಶ್ಚಿಂತೆ.

ಮಕರ
ಇಂದು ಕೆಲಸದ ಒತ್ತಡ ಹೆಚ್ಚು. ಹಾಗಾಗಿ ಉಳಿದ ಮೋಜಿನ ವಿಚಾರಗಳಿಗೆ ಗಮನ ಹರಿಸಲಾಗುವುದಿಲ್ಲ. ಕೌಟುಂಬಿಕ ಹೊಣೆಗಾರಿಕೆ ಹೆಚ್ಚಳ.

ಕುಂಭ
ಕ್ಲಿಷ್ಟಕರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಇತರರು ತಮ್ಮ ತಪ್ಪಿಗೆ ನಿಮ್ಮನ್ನು ಹೊಣೆ ಯಾಗಿಸುವರು. ಅದಕ್ಕೆ ಬಲಿಯಾಗದಿರಿ.

ಮೀನ
ಆರ್ಥಿಕವಾಗಿ ಹಿನ್ನಡೆ. ಅನಿರೀಕ್ಷಿತ ಖರ್ಚು ಒದಗುವುದು. ಹೊಸ ಆರ್ಥಿಕ ವ್ಯವಹಾರ ಗಳಿಗೆ ಕೈ ಹಾಕಬೇಡಿ. ಕೌಟುಂಬಿಕ ಸಮಾಧಾನ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!