ದಿನಭವಿಷ್ಯ| ಯಾರನ್ನೂ ಕುರುಡಾಗಿ ನಂಬಬೇಡಿ, ತಪ್ಪಿದರೆ ಸಮಸ್ಯೆಗೆ ಸಿಲುಕುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಅತೀ ಮುಖ್ಯ ವಿಷಯವನ್ನು ಇಂದು ಇತ್ಯರ್ಥ ಪಡಿಸಿ. ಅದು ಬಿಟ್ಟು ಬೇರಾವುದೋ ಕಾರ್ಯದಲ್ಲಿ ತೊಡಗಿ ವ್ಯರ್ಥ ಮಾಡಬೇಡಿ. ಸೂಕ್ತ ಸಹಕಾರ ಲಭ್ಯ.

ವೃಷಭ
ಕೆಲದಿನಗಳಿಂದ ದೂರವಾಗಿದ್ದ ಕೌಟುಂಬಿಕ ಶಾಂತಿ ಇಂದು ಮರಳುವುದು. ಬಿರುಕು ಕಂಡ ಸಂಬಂಧಗಳನ್ನು ಮತ್ತೆ ಗಟ್ಟಿಗೊಳಿಸಿರಿ.

ಮಿಥುನ
ಯಾರನ್ನೂ ಕುರುಡಾಗಿ ನಂಬಬೇಡಿ. ತಪ್ಪಿದರೆ ಸಮಸ್ಯೆಗೆ ಸಿಲುಕುವಿರಿ. ಕರ್ತವ್ಯದಿಂದ ಮನಸ್ಸು ವಿಮುಖಗೊಳಿಸುವ ಪ್ರಸಂಗ ಉಂಟಾದೀತು. ದೃಢಚಿತ್ತವಿರಲಿ.

ಕಟಕ
ಇಂದು ಭಾವುಕರಾಗಿ ವರ್ತಿಸುವಿರಿ. ಅದರಲ್ಲೇ ಸಂತೋಷವನ್ನೂ ಕಾಣುವಿರಿ. ಸಣ್ಣ ವಿಷಯಕ್ಕೂ ಕೋಪಗೊಳ್ಳುವ ಸ್ವಭಾವ ತ್ಯಜಿಸಿರಿ.

ಸಿಂಹ
ಎಲ್ಲರೊಂದಿಗೆ ಸೇರಿಕೊಳ್ಳಲು ಪ್ರಯತ್ನಿಸಿ. ಗುಂಪಿನಿಂದ ದೂರವಾಗಿ ಉಳಿಯುವ ಅಭ್ಯಾಸ ತ್ಯಜಿಸಿ. ನಿಮ್ಮ ಭಾವನೆಗೆ ಸ್ಪಂದಿಸುವ ವ್ಯಕ್ತಿಗಳ ಜತೆ ಭೇಟಿ.

ಕನ್ಯಾ
ನಿಮ್ಮ ಗುರಿ ಈಡೇರಿಕೆಗೆ ಕಠಿಣ ಶ್ರಮ ಪಡುವಿರಿ. ಆದರೆ ಅದಕ್ಕೆ  ತುಸು ಕಾಯಬೇಕು. ಎಲ್ಲದಕ್ಕೂ ಅವಸರ ಪಡಬೇಡಿ. ತಾಳ್ಮೆಯಿಂದ ವ್ಯವಹರಿಸಿ.

ತುಲಾ
ಖಾಸಗಿ ಬದುಕಿಗೆ ಹೆಚ್ಚು ಆದ್ಯತೆ ಕೊಡಿ. ಕೆಲ ಸಮಯದಿಂದ ಅದನ್ನು ಕಡೆಗಣಿಸುತ್ತಿದ್ದೀರಿ. ಕೆಲಸದ ಪರಿಸರದಲ್ಲಿ ಗುಣಾತ್ಮಕ ಬದಲಾವಣೆ ಮಾಡಿಕೊಳ್ಳಿ.

ವೃಶ್ಚಿಕ
ಕುಟುಂಬ, ವೃತ್ತಿ ಮತ್ತು ಪ್ರೀತಿಯ ಬದುಕಿನ ಮಧ್ಯೆ ಸಮತೋಲನ ಸಾಧಿಸಬೇಕು. ಇಲ್ಲವಾದರೆ ಎಲ್ಲ ಕ್ಷೇತ್ರದಲ್ಲೂ ಗೊಂದಲ ಎದುರಿಸುವಿರಿ.

ಧನು
ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಲು ಉದ್ದೇಶಿಸಿದರೆ ಅದು ನಿಮಗೆ ಒಳಿತು ಮಾಡಲಿದೆ. ಕೌಟುಂಬಿಕ ಸಹಕಾರ ಸಿಗುವುದು. ಧನಲಾಭವಿದೆ.

ಮಕರ
ಇಂದು ನಿಮ್ಮ ಗುರಿಗೆ ಅಡೆತಡೆಗಳು ಸೃಷ್ಟಿಯಾಗುತ್ತವೆ. ಅದನ್ನು ನಿವಾರಿಸುವಾಗ ತಾಳ್ಮೆಯಿಂದ ವ್ಯವಹರಿಸಿ. ಕೆಲವರ ವರ್ತನೆ ಅಸಹನೀಯ ಎನಿಸೀತು.

ಕುಂಭ
ಮನದೊಳಗೆ ಅಶಾಂತಿ. ಯಾವುದೇ ಕಾರ್ಯದಲ್ಲಿ ಮನಸ್ಸು ಮೂಡದು. ಸುಮ್ಮನೆ ಚಿಂತಿಸುವ ಬದಲು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿರಿ.

ಮೀನ
ಕುಟುಂಬ ಸದಸ್ಯರ ಮಾತಿಗೆ ಕಿವಿಗೊಡಿ. ಅವರೊಡನೆ ಕೆಲವು ಕಾಲ ಕಳೆಯಿರಿ. ವೃತ್ತಿಯ ಒತ್ತಡದಲ್ಲಿ ಅವರನ್ನು ಕಡೆಗಣಿಸಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!