ದಿನಭವಿಷ್ಯ | ಇಂದಿನ ರಾಶಿಫಲಗಳು ಹೀಗಿವೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೇಷ
ಬಹಳಷ್ಟು ಪ್ರಯತ್ನದ ಫಲವಾಗಿ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಕೆಲವರು ಸಾಲ ಬೇಡಿ ಬಳಿಗೆ ಬಂದಾರು.  ವಾಸ್ತವವನ್ನೆದುರಿಸಲು ಕಲಿಯಿರಿ.

ವೃಷಭ
ಜವಾಬ್ದಾರಿಯುತ ಕೆಲಸ ಗಳು ನಿಮ್ಮನ್ನು ಸಂಕಷ್ಟ ದಲ್ಲಿ ಕೆಡವುತ್ತವೆ. ಅವನ್ನು ಸ್ವಂತಕ್ಕೆ ಲಾಭದಾಯಕ ವಾಗಿಸುವುದನ್ನು ಯೋಚಿಸಿ. ಕಷ್ಟ ತಾನೇ ನಿವಾರಣೆಯಾಗುತ್ತದೆ.

ಮಿಥುನ
ಸಮಸ್ಯೆ ಬಗೆಹರಿಸುವಲ್ಲಿ ಹಿಂದೆ ಬೀಳುತ್ತೀರಿ. ಸಮಸ್ಯೆಯ ಇನ್ನೊಂದು ಮಗ್ಗುಲನ್ನು ಚಿಂತಿಸಿ ಕಾರ್ಯಪ್ರವೃತ್ತರಾಗಿ. ಸುಲಭ ಪರಿಹಾರ ಸಿಗಲಿದೆ.

ಕಟಕ
ನಿರ್ಧಾರ ತೆಗೆದುಕೊಳ್ಳು ವಲ್ಲಿ ದ್ವಂದ್ವ ಬೇಡ. ವಿಶ್ವಾಸ, ಧೈರ್ಯದಿಂದ ಸಂದರ್ಭವನ್ನು ಎದುರಿಸಿ. ಬೇಕಿದ್ದರೆ ಸುಗಮ ಹಾದಿ ಯನ್ನು ಆಯ್ಕೆ ಮಾಡಿಕೊಳ್ಳಿ.

ಸಿಂಹ
ಖರ್ಚಿನ ಬಾಬ್ತು ಹೆಚ್ಚಿದಂತೆ ಚಿಂತೆಗೆ ಕಾರಣವಾಗುವುದು. ಧನಾಭಿವೃದ್ಧಿಯ ಒಳಹರಿವನ್ನು ಗಟ್ಟಿಗೊಳಿಸಿ. ಆರೋಗ್ಯ ಸಾಮಾನ್ಯ.

ಕನ್ಯಾ
ಸ್ವಂತಿಕೆಯಿಂದ ಹೊಸ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯ. ಅಸಾಧ್ಯವೆಂದುಕೊಂಡ ವಿಷಯದ ಮೇಲೂ ಹಿಡಿತ ಸಾಧಿಸುವಿರಿ.

ತುಲಾ
ಸಾಮಾಜಿಕ ಚಟುವಟಿಕೆಗಳಲ್ಲಿ ಹೊಸ ಅವಕಾಶಗಳು. ಯಶಸ್ಸನ್ನು ಬೆನ್ನೆಟ್ಟಬೇಕಾಗಬಹುದು. ಪ್ರೀತಿಯ ಸಂಬಂಧವು ವಿಶೇಷವೆನಿಸಲಿದೆ.

ವೃಶ್ಚಿಕ
ಬದುಕಿನ ಬಗ್ಗೆ ಸ್ಪಷ್ಟ ಅರಿವಿದ್ದರೂ ಏನೋ ಕಳೆದುಕೊಂಡ ಮನೋಸ್ಥಿತಿ. ಹೆಚ್ಚು ತಲೆಕೆಡಿಸಿಕೊಳ್ಳದೆ ಮುಂದಿನ ಕೆಲಸಗಳತ್ತ ಗಮನ ಕೊಡಿ.

ಧನು
ಜೊತೆಗಾರರನ್ನು ಮೆಚ್ಚಿ ಸಲು ನಡವಳಿಕೆಯಲ್ಲಿ ಬದಲಾವಣೆ. ವೈಯಕ್ತಿಕ ವಿಷಯವನ್ನು ಕಚೇರಿ ಕೆಲಸಗಳೊಂದಿಗೆ ಜೋಡಿಸಬೇಡಿ.

ಮಕರ
ಆರ್ಥಿಕ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಸಮಯ ಅನುಕೂಲ ವಾಗಿದೆ. ಇತರರ ಸಲಹೆಗಳನ್ನು ಮಾನ್ಯ ಮಾಡದೆ ಸ್ವಯಂ ನಿರ್ಧಾರ ತೆಗೆದುಕೊಳ್ಳಿ.

ಕುಂಭ
ಹೊಸದನ್ನು ಅರಿಯುವ ತುಡಿತ. ಈ ಭಾವ ನಿಮ್ಮನ್ನು ಎಲ್ಲ ನಿಟ್ಟಿನಲ್ಲೂ ಕ್ರಿಯಾಶೀ ಲರ ನ್ನಾಗಿಸುವುದು. ಭವಿಷ್ಯದ ಏಳಿಗೆಗೆ ಈ ಕಾರ್ಯಶೀಲತೆ ಅಗತ್ಯ.

ಮೀನ
ಏಕತಾನತೆಯಿಂದ ಬೇಜಾರು. ಕಾರ್ಯ ವೈಖರಿ ಯಲ್ಲಿ ಬದಲಾವಣೆ ಮಾಡಿ ಕೊಳ್ಳಿ. ಮನಸನ್ನು ಚೈತನ್ಯ ಗೊಳಿಸಲು ಇದು ಸೂಕ್ತ ಮಾರ್ಗೋಪಾಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!