ದಿನಭವಿಷ್ಯ | ಈ ರಾಶಿಯವರಿಗಿಂದು ವೃತ್ತಿಯಲ್ಲಿ ಹೊಸ ಅವಕಾಶಗಳು ಲಭ್ಯ

ಮೇಷ
ನಿಮ್ಮ ಮನಸ್ಸಿನ ಭಾವನೆಯನ್ನು ಸುಲಭದಲ್ಲಿ ಎಲ್ಲರಿಗೆ ಬಿಟ್ಟುಕೊಡಬೇಡಿ. ಆಪ್ತರೆನಿಸಿದವರು ದೂರವಾದಾರು. ತಾಳ್ಮೆಯಿಂದ ವರ್ತಿಸಿ.

ವೃಷಭ
ವೃತ್ತಿಯಲ್ಲಿ ಹೊಸ ಅವಕಾಶ ಲಭ್ಯ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ತಪ್ಪು ಕಲ್ಪನೆಯಿಂದ ಹುಟ್ಟಿಕೊಂಡ ಕೌಟುಂಬಿಕ ಸಮಸ್ಯೆ ನಿವಾರಣೆ.

ಮಿಥುನ
ಪ್ರೀತಿ, ಪ್ರಣಯದ ಭಾವ ನಿಮ್ಮನ್ನು ಆವರಿಸಬಹುದು. ಇದಕ್ಕಾಗಿ ನಿಮ್ಮ ಹಿತಾಸಕ್ತಿ ಕಡೆಗಣಿಸದಿರಿ. ಸಮಸ್ಯೆಗೆ ಸಿಲುಕುವಿರಿ, ಎಚ್ಚರದಿಂದಿರಿ.

ಕಟಕ
ನಿಮ್ಮ ಕ್ರಿಯಾಶೀಲತೆ ಯನ್ನು ವ್ಯರ್ಥ ಮಾಡು ತ್ತಿದ್ದೀರಿ. ಉದಾಸೀನತೆ ಬಿಟ್ಟು ಕಾರ್ಯವೆಸಗಿ. ಉತ್ತಮ ಸಾಧನೆ ಮಾಡುವ ಅವಕಾಶ ಕೈಚೆಲ್ಲದಿರಿ.

ಸಿಂಹ
ಆತ್ಮೀಯ ಸಂಬಂಧ ವೊಂದನ್ನು ಇನ್ನಷ್ಟು ಗಟ್ಟಿಗೊಳಿಸಲು ಯೋಜಿಸಿರಿ. ಕೆಲವರ ವದಂತಿ ನಂಬಿ ಸಂಬಂಧ ಹಾಳು ಮಾಡದಿರಿ.  ಕುಟುಂಬದ ಸಹಕಾರ.

ಕನ್ಯಾ
ಕೌಟುಂಬಿಕ ವಿಚಾರದಲ್ಲಿ ಹೊರಗಿನವರ ಸಲಹೆ ಕೇಳದಿರಿ. ಅದರಿಂದ ನಿಮಗೇ ತೊಂದರೆ. ಆಪ್ತರೊಂದಿಗಿನ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ.

ತುಲಾ
ಉದ್ಯೋಗ ಕ್ಷೇತ್ರದಲ್ಲಿ ಅಕಾರಿಗಳ ಅವಕೃಪೆಗೆ ತುತ್ತಾಗುವಿರಿ. ಇತರರ ಕರ್ತವ್ಯಚ್ಯುತಿಯ ಹೊಣೆ ನೀವೇ ಹೊರ ಬೇಕಾಗುವುದು. ಕೌಟುಂಬಿಕ ಅಸಹಕಾರ.

ವೃಶ್ಚಿಕ
ಖಾಸಗಿ ಬದುಕಿನಲ್ಲಿ ಸಮಸ್ಯೆ. ಮಾನಸಿಕ ಚಿಂತೆಯಿಂದ ದೈಹಿಕವಾಗಿಯೂ ದುಷ್ಪರಿಣಾಮ.  ಕೆಲವರ ವರ್ತನೆ ಅಸಹನೀಯ ಎನಿಸುವುದು.

ಧನು
ಖಾಸಗಿ ಬದುಕಿನಲ್ಲಿ ಏರುಪೇರು. ಪ್ರೀತಿಯ ಆಕರ್ಷಣೆಗೆ ತುತ್ತಾಗುವಿರಿ. ಕೆಲವರು ಮುನಿಸಿಕೊಳ್ಳುವ ಸಾಧ್ಯತೆ ಯಿದೆ.  ಸಂಧಾನದಿಂದ ಸಮಸ್ಯೆ ಪರಿಹರಿಸಿ.

ಮಕರ
ಮನೆ ಮತ್ತು ಕಚೇರಿ ಯಲ್ಲಿ ಹೊಣೆಗಾರಿಕೆ ಹೆಚ್ಚಳ. ನಿಮ್ಮಿಂದ ಎಲ್ಲ ಕೆಲಸ ಮುಗಿಸಲು ಅಸಾಧ್ಯ. ಕೆಲವರ ಅಸಮಾಧಾನಕ್ಕೆ ತುತ್ತಾಗುವಿರಿ.

ಕುಂಭ
ನಿಮ್ಮ ಮೇಲೆಯೇ ಮೊದಲಾಗಿ ವಿಶ್ವಾಸ ಹೆಚ್ಚಿಸಿಕೊಳ್ಳಿ. ನಿಮ್ಮಿಂದ ಆಗದು ಎಂಬ ಅಪನಂಬಿಕೆ ಬಿಡಿ. ಸಣ್ಣ ಆರೋಗ್ಯ ಸಮಸ್ಯೆ ಇಂದು ಕಾಡಬಹುದು.

ಮೀನ
ಮಿತ್ರರೊಂದಿಗೆ ಜಗಳ ಸಂಭವ. ಸಣ್ಣ ಮಾತಿಗೂ ರೇಗದಿರಿ.  ಆರ್ಥಿಕ ವಿಚಾರದಲ್ಲಿ ಒತ್ತಡ ಹೆಚ್ಚು. ಹಣಕ್ಕಾಗಿ ಇತರರು ಬೇಡಿಕೆ ಇಡುವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!