ದಿನಭವಿಷ್ಯ | ಕೌಟುಂಬಿಕ ಭಿನ್ನಮತ ವಿಕೋಪಕ್ಕೆ ತಿರುಗದಂತೆ ನೋಡಿಕೊಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ:

ಕೌಟುಂಬಿಕ ಒತ್ತಡದಿಂದ ಭಿನ್ನಮತ ಏರ್ಪಟ್ಟೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ.  ವ್ಯವಹಾರದಲ್ಲಿ ಕೆಲವರಿಂದ ಅಡ್ಡಿ ಒದಗಿಬರಬಹುದು.

ವೃಷಭ:
ಸಂಚಾರಿ ನಿಯಮ ಪಾಲಿಸಿಕೊಂಡೇ ವಾಹನ ಚಲಾಯಿಸಿ. ಇಕ್ಕಟ್ಟಿಗೆ ಸಿಲುಕದಿರಿ. ಶೀತದಂತಹ ಅನಾರೋಗ್ಯ ಕಾಡಬಹುದು. ಕೌಟುಂಬಿಕ ಸಹಕಾರ.

ಮಿಥುನ:
ನಿಮ್ಮ ಮಾತುಗಳು ಅಪಾರ್ಥ ಸೃಷ್ಟಿಸದಂತೆ ನೋಡಿಕೊಳ್ಳಿ. ಇಲ್ಲವಾದರೆ ವಾಗ್ವಾದ ಸಂಭವಿಸಬಹುದು. ಇತರರ ಜಗಳದಲ್ಲಿ ಹಸ್ತಕ್ಷೇಪ ಮಾಡದಿರಿ.

ಕಟಕ:
ವೃತ್ತಿಯಲ್ಲಿ ಒತ್ತಡ. ಹಣದ ಮುಗ್ಗಟ್ಟು ಕಾಡಬಹುದು. ಮನೆಯಲ್ಲಿ ಸಂಗಾತಿ ಜತೆಗೆ ವಾಗ್ವಾದ ನಡೆದೀತು. ಸಂಯಮ ವಹಿಸಿರಿ.

ಸಿಂಹ:
ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ದೇಹಾಲಸ್ಯ ಉಂಟಾದೀತು. ಕೌಟುಂಬಿಕ ಸೌಹಾರ್ದ. ಭಿನ್ನಮತವಿದ್ದರೂ ಪರಿಹಾರ ಕಾಣುವುದು.

ಕನ್ಯಾ:
ವೃತ್ತಿಯಲ್ಲಿನ ಸಮಸ್ಯೆ ಎದುರಿಸಲು ಮುಂದಾಗಿ. ಅದನ್ನು ಹಾಗೇ ಬಿಟ್ಟುಬಿಡಬೇಡಿ. ಕೆಲವು ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯದಿರಿ.

ತುಲಾ:
ಸಣ್ಣಪುಟ್ಟ ಜಗಳಗಳಿಂದ ದೂರವಿರಿ. ಹೆಚ್ಚುವರಿ ಕೆಲಸದ ಹೊಣೆಗಾರಿಕೆ. ಒತ್ತಡ ಹೆಚ್ಚಿದರೂ, ಧನಲಾಭವೂ ಇದೆ. ಉದ್ಯೋಗ ಬದಲಾವಣೆ ಅವಕಾಶವಿದೆ.

ವೃಶ್ಚಿಕ:
ಕೆಲಸದ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ. ಸಂಘರ್ಷವೂ ನಡೆದೀತು. ಮನೆಯಲ್ಲಿನ ಶಾಂತ ಪರಿಸರದಿಂದ ಮನಸ್ಸು ಶಾಂತವಾಗುವುದು.

ಧನು:
ಹಣದ ಹರಿವು ಹೆಚ್ಚು. ಹಾಗೆಂದು ಸಿಕ್ಕಾಬಟ್ಟೆ ಖರ್ಚು ಮಾಡದಿರಿ. ಇತರರು ಹರಡುವ ವದಂತಿಗೆ ಕಿವಿಗೊಡದಿರಿ. ಇಲ್ಲವಾದರೆ ಮನಸ್ಸಿನ ಶಾಂತಿ ಹಾಳು.

ಮಕರ:
ಮನೆಯವರ ಹಿತಾಸಕ್ತಿ ಗಮನಿಸಿ. ಅವರ ಬೇಕುಬೇಡಕ್ಕೆ ಕಿವಿಗೊಡಿ. ಅಜೀರ್ಣ ದಂತಹ ಸಮಸ್ಯೆ ಕಾಡೀತು. ಆಹಾರ ಸೇವನೆ ಚೆನ್ನಾಗಿರಲಿ.

ಕುಂಭ
:
ಸಮಯದೊಳಗೆ ನಿಮ್ಮ ಕೆಲಸ ಮುಗಿಸಲು ಕಷ್ಟಪಡುವಿರಿ. ಇದರಿಂದ ಮಾನಸಿಕ ಒತ್ತಡ ಹೆಚ್ಚು. ಇತರರ ನೆರವು ಕೇಳುವುದರಲ್ಲಿ ತಪ್ಪಿಲ್ಲ, ಬಿಗುಮಾನ ಬಿಡಿ.

ಮೀನ:
ಮನೆಯಲ್ಲಿ ಇತರರ ಅಭಿಪ್ರಾಯಕ್ಕೂ ಬೆಲೆ ಕೊಡಿ. ಇದರಿಂದ ಸಂಭವನೀಯ ಭಿನ್ನಮತ ತಪ್ಪಿಸ ಬಹುದು. ಹಠಮಾರಿ ಧೋರಣೆ ಬಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!