ಮೇಷ
ಉಲ್ಲಾಸದ ಮನಸ್ಥಿತಿ. ಇತರರಲ್ಲೂ ಅದೇ ಬಗೆಯ ಉತ್ಸಾಹ ತುಂಬಲು ಯತ್ನಿಸುವಿರಿ. ಆದರೆ ಕೆಲವರ ವರ್ತನೆ ನಿಮಗೆ ನಿರಾಶೆ ತರಬಹುದು.
ವೃಷಭ
ವೃತ್ತಿಯಲ್ಲಿ ಸಮಸ್ಯೆ ಎದುರಿಸಿದರೂ ಇತರರ ನೆರವಿನಿಂದ ಅದನ್ನು ಪರಿಹರಿಸುವಿರಿ. ಕೆಲವರು ನಿಮ್ಮ ಮನಶ್ಯಾಂತಿ ಕದಡಲು ಯತ್ನಿಸಬಹುದು.
ಮಿಥುನ
ಕುಟುಂಬಸ್ಥರ ಜತೆ ಇಂದು ಹೆಚ್ಚು ಕಾಲ ಕಳೆಯುವ ಅವಕಾಶ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ ನಿರಾಳತೆ. ಬಂಧುಗಳ ಭೇಟಿ ಸಂಭವ.
ಕಟಕ
ಉದ್ವೇಗರಹಿತರಾಗಿ ಕೆಲಸ ನಿರ್ವಹಿಸಿ. ಇಲ್ಲವಾದರೆ ಅನವಶ್ಯ ಒತ್ತಡಕ್ಕೆ ಸಿಲುಕುವಿರಿ. ಕುಟುಂಬಸ್ಥರ ವರ್ತನೆ ರೋಷ ತಂದೀತು. ಸಹನೆ ಕಾಯ್ದುಕೊಳ್ಳಿ.
ಸಿಂಹ
ಹಳೆಯ ನೆನಪುಗಳು ಕಾಡಬಹುದು. ಅದಕ್ಕೆ ಹಳಬರ ಭೇಟಿ ಕಾರಣವಾದೀತು. ಉದ್ಯೋಗದಲ್ಲಿ ಕೆಲವು ಉದ್ವಿಗ್ನ ಸ್ಥಿತಿ ಎದುರಿಸುವಿರಿ.
ಕನ್ಯಾ
ಮಾತು ಹಿತಮಿತ ವಾಗಿರಲಿ. ಇಲ್ಲವಾದರೆ ಅನವಶ್ಯ ವಾಗ್ವಾದಕ್ಕೆ ಕಾರಣವಾದೀತು. ಇತರರ ಮಾತನ್ನು ಸೈರಣೆಯಿಂದ ಆಲಿಸುವ ಮನಸ್ಥಿತಿಯಿರಲಿ.
ತುಲಾ
ಹೊಸ ವ್ಯವಹಾರದಲ್ಲಿ ತೊಡಗುವುದಾದರೆ ಸರಿಯಾಗಿ ಯೋಜನೆ ಹಾಕಿಕೊಳ್ಳಿ. ಯಾರದೋ ಚಿತಾವಣೆಯಿಂದ ನಷ್ಟಕ್ಕೆ ಒಳಗಾಗದಿರಿ. ಕೌಟುಂಬಿಕ ಬೆಂಬಲ.
ವೃಶ್ಚಿಕ
ನಿಮ್ಮ ದೇಹ ಮತ್ತು ಮನಸ್ಸಿಗೆ ವಿರಾಮದ ಆವಶ್ಯಕತೆಯಿದೆ. ಏಕೆಂದರೆ ಒತ್ತಡದ ಬದುಕಿನಿಂದ ಬಳಲಿರುತ್ತೀರಿ. ಆರ್ಥಿಕ ಕಷ್ಟ ಕಾಡೀತು.
ಧನು
ಸಣ್ಣಪುಟ್ಟ ಜಗಳಗಳಿಂದ ದೂರವಿರಿ. ಅದು ಕಚೇರಿ ಯಲ್ಲಿ ಆಗಿರಬಹುದು, ಮನೆಯಲ್ಲೂ ಆಗಿರ ಬಹುದು. ನಿಮ್ಮ ಮೆಚ್ಚಿನ ಹವ್ಯಾಸದಲ್ಲಿ ಖುಷಿ ಕಾಣುವಿರಿ.
ಮಕರ
ಇತರರ ಒತ್ತಡಕ್ಕೆ ಅಥವಾ ಪ್ರಭಾವಕ್ಕೆ ಒಳಗಾಗಿ ವರ್ತಿಸದಿರಿ. ಅಂತ್ಯದಲ್ಲಿ ಅದು ನಿಮಗೆ ಪ್ರತಿಕೂಲವೇ ಆದೀತು. ಹಣದ ವಿಚಾರದಲ್ಲಿ ಎಚ್ಚರದಿಂದ ವರ್ತಿಸಿ.
ಕುಂಭ
ಇತರರನ್ನು ಸಂತುಷ್ಟ ಪಡಿಸಲು ನಿಮ್ಮ ಬಯಕೆ ತ್ಯಾಗ ಮಾಡದಿರಿ. ಅದರಿಂದ ನಿಮಗಷ್ಟೇ ನಷ್ಟ. ನಿಮ್ಮ ಹಿತಾಸಕ್ತಿ ನೋಡಿಕೊಳ್ಳಿ. ಕೌಟುಂಬಿಕ ಸೌಹಾರ್ದ.
ಮೀನ
ನಿಮ್ಮ ಶ್ರಮಕ್ಕೆ ತಕ್ಕ ಫಲ ಲಭ್ಯ. ವೃತ್ತಿಗೆ ಸಂಬಂಸಿದ ಪ್ರಯಾಣವು ಸೂಕ್ತ ಪ್ರತಿಫಲ ನೀಡಲಿದೆ. ಮನೆಯಲ್ಲಿ ಎಲ್ಲರ ಜತೆ ಹೊಂದಾಣಿಕೆ.