ದಿನ ಭವಿಷ್ಯ | ಆಪ್ತರು ಮನಸ್ಸಿಗೆ ನೋವಾಗುವಂತೆ ವರ್ತಿಸಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ನಿಮ್ಮ ಕೆಲವು ಭಾವನೆಗಳು ವಾಸ್ತವಿಕತೆಗೆ ದೂರವಾಗಿವೆ. ಅದನ್ನು ಅತಿಯಾಗಿ ಹಚ್ಚಿಕೊಳ್ಳದಿರಿ. ವೃತ್ತಿಯಲ್ಲಿ ಆರ್ಥಿಕ ಏರುಪೇರು.

ವೃಷಭ
ನಿಮ್ಮ ದೇಹಾರೋಗ್ಯ ಕಾಪಾಡಲು ಆದ್ಯತೆ ಕೊಡಿ. ವ್ಯಾಯಾಮ, ಮಿತ ಆಹಾರದಂತಹ ನಿಯಮ ಪಾಲಿಸಿ. ಬಂಧುಗಳಲ್ಲಿ ವಿರಸ ತಪ್ಪಿಸಿರಿ.

ಮಿಥುನ
ಅಪ್ತೇಷ್ಟರ ಸಂಗದಲ್ಲಿ ಸಮಯ ಕಳೆಯವಿರಿ. ಅವರ ಹಿತಾಸಕ್ತಿಗೆ ನೀವೂ ಸಹಕರಿಸುವಿರಿ. ಸಂಜೆ ವೇಳೆಗೆ ಖರ್ಚು ಹೆಚ್ಚುವಂತಹ ವಿದ್ಯಮಾನ ಸಂಭವ.

ಕಟಕ
ಭಾವುಕತೆ ಮತ್ತು ಲೌಕಿಕ ವಿಚಾರಗಳು ಇಂದು ಸಮಾನ ಆದ್ಯತೆ ಪಡೆಯುತ್ತವೆ. ಆಪ್ತರಿಂದ ಮನಸ್ಸಿಗೆ ನೋವು ತರುವ  ವರ್ತನೆ ಕಂಡೀತು.

ಸಿಂಹ
ನೀವು ಏನೇ ಕಾರ್ಯ ಮಾಡಿದರೂ ಕೆಲವರನ್ನು ಮೆಚ್ಚಿಸುವುದು ಅಸಾಧ್ಯ. ಅಂತಹ ಅಸಾಧ್ಯ ಕೆಲಸಕ್ಕೆ ಪ್ರಯತ್ನಿಸದಿರುವುದೇ ಒಳಿತು. ನಿಮ್ಮ ಹಿತ ನೋಡಿಕೊಳ್ಳಿ.

ಕನ್ಯಾ
ಸಣ್ಣ ವಿಷಯಗಳು ದೊಡ್ಡ ತಾಕಲಾಟ ಸೃಷ್ಟಿಸಬಹುದು. ಎಲ್ಲದಕ್ಕೂ ಭಾವುಕವಾಗಿ ಸ್ಪಂದಿಸುವುದು ಬಿಡಿ. ವಾಸ್ತವಿಕ ನೆಲೆಗಟ್ಟಲ್ಲಿ ಯೋಚಿಸಿರಿ.

ತುಲಾ
ಉದ್ಯೋಗದಲ್ಲಿ ಹೆಚ್ಚಿನ ಅಕಾರ ನಿಮಗೆ ದೊರೆಯುವುದು. ಅದನ್ನು ಸದುಪಯೋಗ ಮಾಡಿಕೊಳ್ಳಿ. ಇತರರ ದ್ವೇಷ ಕಟ್ಟಿಕೊಳ್ಳುವ ಕಾರ್ಯ ಎಸಗದಿರಿ.

ವೃಶ್ಚಿಕ
ಪೂರ್ಣ ಮನಸ್ಸಿಟ್ಟು ಕಾರ್ಯ ಎಸಗಬೇಕು. ಅರೆಮನಸ್ಸಿನ ಕಾರ್ಯ ಫಲ ನೀಡದು. ದೂರದ ಹಣದ ವಿಚಾರದಲ್ಲಿ ಎಚ್ಚರದಿಂದ ಕಾರ್ಯ ನಿರ್ವಹಿಸಿ.

ಧನು
ಸಂಗಾತಿ ಜತೆಗೆ ಭಾವನಾತ್ಮಕ ಸ್ಥಿರತೆ ಸಾಸಿ. ಕುಟುಂಬದಿಂದ ಇಂದು ಉತ್ತಮ ಸಹಕಾರ, ಬೆಂಬಲ ಪಡೆಯುವಿರಿ. ಕಾರ್ಯದಲ್ಲಿ ಸಫಲತೆ.

ಮಕರ
ನಿಮ್ಮ ಮನಸ್ಥಿತಿ ಪದೇಪದೇ ಬದಲಾದೀತು. ಇದರಿಂದ ನಿಮ್ಮ ಆಪ್ತರು ಗೊಂದಲಕ್ಕೆ ಸಿಲುಕುವರು. ಹಣದ ಕೊರತೆ ಎದುರಿಸುವಿರಿ.

ಕುಂಭ
ನಿಮ್ಮ ದೈನಂದಿನ ಕಾರ್ಯ ಸರಿಯಾಗಿ ನೆರವೇರಿಸಿ. ಅದರಲ್ಲಿ ಲೋಪ ಮಾಡಬೇಡಿ. ಕೆಲವರು ನಿಮ್ಮ ತಪ್ಪನ್ನು ಕಂಡುಹಿಡಿಯಲು ಕಾದಿರುತ್ತಾರೆ.

ಮೀನ
ಸಂತೋಷದ ದಿನ. ಆಪ್ತರ ಜತೆ ಕೂಡಿ ಕಳೆಯುವ ಅವಕಾಶ. ಅನವಶ್ಯ ಖರ್ಚು ಹೆಚ್ಚಬಹುದು. ಜಡತ್ವ ಬಿಟ್ಟು ಕಾರ್ಯಾಚರಿಸಿ. ಕೌಟುಂಬಿಕ ಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!