Monday, October 3, 2022

Latest Posts

ಬ್ರಿಟನ್‌ ಹಿಂದಿಕ್ಕಿ ಐದನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತವು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಬಲಿಷ್ಟವಾಗುತ್ತಿದೆ. ಇತೀಚಿನ ಬೆಳವಣಿಗೆಯೊಂದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿದೆ. ಯುನೈಟೆಡ್‌ ಕಿಂಗ್‌ಡಮ್‌ ಅನ್ನು ಹಿಂದಿಕ್ಕಿ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಬ್ಲೂಮ್‌ ಬರ್ಗ್‌ ವರದಿಯೊಂದರ ಪ್ರಕಾರ 2021ರ ಕೊನೆಯ ಮೂರು ತಿಂಗಳಲ್ಲಿ ಭಾರತವು ಇಂಗ್ಲೆಂಡ್‌ ದೇಶವನ್ನು ಮೀರಿಸಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎನ್ನಲಾಗಿದೆ.

ವರದಿಯ ಪ್ರಕಾರ, 2019 ರ ಆರ್ಥಿಕ ವರ್ಷದಲ್ಲಿ 5ನೇ ಶ್ರೇಯಾಂಕ ಪಡೆದಿದ್ದ ಯುಕೆಯನ್ನು ಭಾರತವು ಆರನೇ ಸ್ಥಾನಕ್ಕೆ ತಳ್ಳಿದೆ. ಬ್ಲೂಮ್‌ಬರ್ಗ್‌ನ ಅಧ್ಯಯನದ ಪ್ರಕಾರ, ಮಾರ್ಚ್‌ವರೆಗಿನ ತ್ರೈಮಾಸಿಕದಲ್ಲಿ ‘ನಾಮಮಾತ್ರ’ ನಗದು ಪರಿಭಾಷೆಯಲ್ಲಿ ದೇಶದ ಆರ್ಥಿಕತೆಯ ಗಾತ್ರ USD 854.7 ಮಿಲಿಯನ್ ಆಗಿದ್ದರೆ, ಯುಕೆಯ ಆರ್ಥಿಕತೆಯ ಗಾತ್ರ ಗಾತ್ರ 816 ಮಿಲಿಯನ್ ಡಾಲರ್ ಆಗಿದೆ.

ಮೊದಲ ತ್ರೈಮಾಸಿಕದ ಡೇಟಾವನ್ನು ಭಾರತ ಹಂಚಿಕೊಂಡ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದ್ದು ಭಾರತೀಯ ಆರ್ಥಿಕತೆಯು ವರ್ಷದಿಂದ ವರ್ಷಕ್ಕೆ 13.5 ಪರ್ಸೆಂಟ್‌ನಲ್ಲಿ ಬೆಳೆಯುತ್ತಿದೆ. ಈ ಸಂಖ್ಯೆ ಆರ್‌ಬಿಐ ಅಂದಾಜಿಸಿರುವುದಕ್ಕಿಂತ ಕಡಿಮೆಯಿದ್ದರೂ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ದರವು ಅತ್ಯಧಿಕವಾಗಿದೆ ಎಂದು ಹೇಳಲಾಗುತ್ತದೆ.

ಈ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಸುಮಾರು 7 ಶೇಕಡಾ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!