ಈ ಸ್ವಾತಂತ್ರ್ಯ ಹೋರಾಟಗಾರ ಕಂಡಲ್ಲಿ ಗುಂಡು ಹಾರಿಸುವಂತೆ ಆದೇಶ ಹೊರಡಿಸಿತ್ತು ಬ್ರಿಟೀಷ್‌ ಸರ್ಕಾರ

ಹೊಸದಗಿಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವಿಶೇಷ)
ಹೇಮಮ್ ನೀಲಮಣಿ ಸಿಂಗ್ ಅವರು ಮಣಿಪುರದ ಮೊಯಿರಾಂಗ್‌ ಪ್ರದೇಶಕ್ಕೆ ಸೇರಿದವರು. ದೇಶಭಕ್ತರಾಗಿದ್ದ ನೀಲಮಣಿ ಸಿಂಗ್ ಐಎನ್ಎ (ಇಂಡಿಯನ್ ನ್ಯಾಷನಲ್ ಆರ್ಮಿ) ಸೇರಿದ ಬಳಿಕ ಅವರ ಬದುಕೇ ಬದಲಾಯಿತು. ಐಎನ್ಎ ಪ್ರಧಾನ ಕಛೇರಿಯೇ ಅವರ ನಿವಾಸವಾಯಿತು.
ಅವರು ಬ್ರಿಟೀಷ್‌ ಸಾಮ್ರಾಜ್ಯದ ಗುಪ್ತಚರ ವರದಿಗಳನ್ನು ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಐಎನ್‌ಎ ಸೇನೆಯ ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆಗಳನ್ನು ನೋಡಿಕೊಂಡರು. ಇದರಿಂದ ಆಕ್ರೋಶಗೊಂಡ ಬ್ರಿಟೀಷ್‌ ಸರ್ಕಾರ ನೀಲಮಣಿ ಸಿಂಗ್ ಅವರನ್ನು ದೇಶದ್ರೋಹಿ ಎಂದು ಘೋಷಿಸಿತ್ತು. ಮತ್ತು ಅವರ ಮೇಲೆ ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನು ಹೊರಡಿಸಿತು.
ಆದ್ದರಿಂದ ಸಿಂಗ್  ಭಾರತವನ್ನು ತೊರೆದು ರಂಗೂನ್‌ಗೆ ಓಡಿಹೋದರು.
ಅಲ್ಲಿ ಅವರು ಯುದ್ಧ ನಿಧಿಯೆಂದು ನೇತಾಜಿ ಸುಭಾಷ್ ಚಂದ್ರ ಬೋಸ್‌ ಅವರಿಗೆ ಮೂರು ಸಾವಿರ ರೂಪಾಯಿಗಳನ್ನು ನೀಡಿದರು. ಅವರು ರಂಗೂನ್‌ನಲ್ಲಿರುವ ಐಎನ್‌ಎ ಮೊಯಿರಾಂಗ್ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡಿದರು. ಮತ್ತು ಸೇನೆಗೆ ಸ್ವಯಂಸೇವಕರ ನೇಮಕಾತಿ ಮತ್ತು ತರಬೇತಿಯಲ್ಲಿ ತೊಡಗಿಕೊಂಡರು. ರಂಗೂನ್ ಪತನದ ನಂತರ ನೀಲಮಣಿ ಸಿಂಗ್ ಅವರನ್ನು ಬ್ರಿಟಿಷ್ ಸೈನ್ಯ ಬಂಧಿಸಿತು ಮತ್ತು ರಂಗೂನ್ ಸೆಂಟ್ರಲ್ ಜೈಲಿನಲ್ಲಿ ಅನೇಕ ವರ್ಷಗಲ ಕಾಲ  ಅವರನ್ನು ಬಂಧಿಸಿಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!