ದಿನಭವಿಷ್ಯ | ಈ ರಾಶಿಯವರಿಗಿಂದು ಅನಿರೀಕ್ಷಿತ ಧನಲಾಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ

ಆರೋಗ್ಯದ ಕುರಿತಂತೆ ಉಂಟಾಗಿದ್ದ ಆತಂಕ ನಿವಾರಣೆ. ಕೌಟುಂಬಿಕ ಒತ್ತಡ ಕಡಿಮೆ. ವೃತ್ತಿಯಲ್ಲಿ ಅನಿರೀಕ್ಷಿತ ಬೆಳವಣಿಗೆ. ನಿಮಗೆ ಒಳಿತಾಗುವುದು.

ವೃಷಭ
ಕೆಲಸದ ಒತ್ತಡದಿಂದಾಗಿ ನೀವಿಂದು ಉಲ್ಲಾಸ ಕಳಕೊಳ್ಳುವಿರಿ. ಕಾರ್ಯದಲ್ಲಿ ನಿರಾಸಕ್ತಿ. ಆತ್ಮೀಯ ಸಂಬಂಧದಲ್ಲಿ ಬಿರುಕು ಉಂಟಾದೀತು. ಸಹನೆಯಿರಲಿ.

ಮಿಥುನ
ಹೊಸದಿನವು ಯಾವತ್ತೂ ಹೊಸ ಆಯ್ಕೆಯ ಅವಕಾಶ ನೀಡುವುದು. ನೀವಿಂದು ಅಂತಹ ಹೊಸ ಅವಕಾಶಕ್ಕೆ ಎದುರು ನೋಡುವುದೊಳಿತು.

ಕಟಕ
ಆತ್ಮೀಯರೊಂದಿಗೆ ಸೇರಿಕೊಂಡು ಸಂತೋಷ ಆಚರಿಸುವ ಅವಕಾಶ. ಸಣ್ಣ ವಿಷಯವನ್ನು ಇಟ್ಟುಕೊಂಡು ಈ ಸಂತೋಷ ಕೆಡಿಸಲು ಹೋಗದಿರಿ.

ಸಿಂಹ
ಅನಿರೀಕ್ಷಿತ ಧನಲಾಭ. ಅಪೂರ್ಣ ಕೆಲಸಗಳು ಇಂದು ಅಂತ್ಯ ಕಾಣುತ್ತವೆ. ಕೌಟುಂಬಿಕ ಬಿಕ್ಕಟ್ಟಿಗೆ ಸೌಹಾರ್ದ ಪರಿಹಾರ. ಒಟ್ಟಿನಲ್ಲಿ ಮನಸ್ಸಿಗೆ ನಿರಾಳತೆ.

ಕನ್ಯಾ
ಮೋಜಿಗೆ ಆದ್ಯತೆ ಕೊಟ್ಟು ಕರ್ತವ್ಯ ಕಡೆಗಣಿಸಬೇಡಿ. ನಿಮ್ಮ ಹೊಣೆಗಾರಿಕೆ ಸರಿಯಾಗಿ ನಿಭಾಯಿಸಿ. ಉದಾಸೀನತೆಯನ್ನು ತೊಡೆಯಿರಿ.

ತುಲಾ
ಹಣದ ಮಹತ್ವ ಅರಿಯಿರಿ. ಬೇಕಾಬಿಟ್ಟಿ ಖರ್ಚು ಈಗ ಹಿತ ಎನಿಸಿದರೂ ಆರ್ಥಿಕ ಮುಗ್ಗಟ್ಟು ಒದಗಬಹುದು. ಕೌಟುಂಬಿಕ ಒತ್ತಡ.

ವೃಶ್ಚಿಕ
ವೃತ್ತಿಯಲ್ಲಿ ಹೊಸ ಸವಾಲು. ಕೆಲವರ ವರ್ತನೆ ಮನಶ್ಯಾಂತಿ ಕೆಡಿಸುವುದು. ತಾಳಿಕೊಂಡು ಬಾಳುವುದು ಸದ್ಯಕ್ಕೆ ಹಿತಕಾರಿ.

ಧನು
ವ್ಯವಹಾರದಲ್ಲಿ ಪ್ರತಿಯೊಂದು ಹೆಜ್ಜೆ ಸರಿಯಾಗಿ ಇಟ್ಟರೆ ನಿಮಗೆ ದೊಡ್ಡ ಯಶಸ್ಸು ಸಿಗಲಿದೆ. ಇತರರ ಬಾಲಿಶ ಮಾತುಗಳಿಗೆ ಕಿವಿಗೊಡದಿರಿ.

ಮಕರ
ನಿಮ್ಮ ಕಾರ್ಯವು ಇತರರ ಮೆಚ್ಚುಗೆ ಗಳಿಸುವುದು. ಜನಮನ್ನಣೆ ಪಡೆಯುವಿರಿ. ಆದರೆ ನಿಮ್ಮ ಮನಸ್ಸಲ್ಲಿ ಅತೃಪ್ತಿ. ಕೊರತೆಯ ಭಾವನೆ.

ಕುಂಭ
ಕೆಲಸಮಯದಿಂದ ಕಾದಿದ್ದ ಕಾರ್ಯ ಕೊನೆಗೂ ಈಡೇರಿಕೆ. ಇತರರ ಸಹಕಾರ ಲಭ್ಯ. ಇತರರ ಜತೆ ವ್ಯವಹರಿಸುವಾಗ ವಿನಯವಿರಲಿ.

ಮೀನ
ಮನೆಯಲ್ಲಿ ಹಿರಿಯರ ಆರೋಗ್ಯದ ಕುರಿತಾದ ಚಿಂತೆ ಪರಿಹಾರ. ಎಲ್ಲವೂ ಸುಗಮ. ವೃತ್ತಿಯಲ್ಲಿ ಕೆಲವರು ಒತ್ತಡ ಸೃಷ್ಟಿಸುವರು. ತಾಳ್ಮೆಯಿಂದ ವರ್ತಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!