ಹೃದಯಾಘಾತದಿಂದ ಕುಸಿದ ವ್ಯಕ್ತಿಗೆ ಸಿಪಿಆರ್ ಮಾಡಿ ಪ್ರಾಣ ಉಳಿಸಿದ ಡಾಕ್ಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವೈದ್ಯರ ಜೊತೆ ಮಾತನಾಡುತ್ತಿರುವಾಗಲೇ ರೋಗಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ತಕ್ಷಣವೇ ಸಮಯ ಪ್ರಜ್ಞೆ ಮೆರೆದ ಡಾಕ್ಟರ್ ಸಿಪಿಐರ್ ಪ್ರಥಮ ಚಿಕಿತ್ಸೆ ಮೂಲಕ ರೋಗಿಯ ಪ್ರಾಣ ಉಳಿಸಿದ್ದಾರೆ .

ಈ ಕುರಿತ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ವೈದ್ಯರ ಬಳಿ ಬಂದಿದ್ದಾರೆ. ವೈದ್ಯರು ಮುಂದೆ ಕೂತ ಮಾತನಾಡುತ್ತಿರುವ ವೇಳೆ ಅಸ್ವಸ್ಥಗೊಂಡಿದ್ದಾರೆ. ಮಾತನಾಡುತ್ತಲೇ ಕುಳಿತಲ್ಲೇ ಕುಸಿದಿದ್ದಾರೆ. ಇದನ್ನು ಗಮನಿಸಿದ ವೈದ್ಯರು ತಕ್ಷಣವೇ ಎದ್ದು ವ್ಯಕ್ತಿಯ ಬಳಿಕ ಬಂದು ಸಿಪಿಆರ್ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸೂಕ್ತ ಸಮಯದಲ್ಲಿ ಸಿಕ್ಕಿದ ಸಿಪಿಆರ್‌ನಿಂದ ಕೆಲ ಹೊತ್ತಲ್ಲಿ ರೋಗಿ ಚೇತರಿಸಿಕೊಂಡಿದ್ದಾರೆ.

ರೋಗಿಯ ಪ್ರಾಣ ಉಳಿಸಿದ ವೈದ್ಯ ಅರ್ಜುನ್ ಅದ್ನಾಯಕ್ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಿಯಲ್ ಹೀರೋ ಎಂದಿದ್ದಾರೆ.

ಏನಿದು ಸಿಪಿಆರ್
ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್(CPR). ವ್ಯಕ್ತಿಯ ಹೃದಯಬಡಿತ ನಿಂತು ಹೋದಾಗ, ಅಥವಾ ಮೂರ್ಛೆ ಹೋದಾಗ, ನಾಡಿ ಮಿಡಿತ ಸ್ಥಗಿತಗೊಂಡಾಗ ಸಿಪಿಆರ್ ಸೂಕ್ತ ಪ್ರಥಮ ಚಿಕಿತ್ಸೆಯಾಗಿದೆ. ಈ ವೇಳೆ ವ್ಯಕ್ತಿಯ ಎದೆ ಅಥವಾ ಶ್ವಾಸಕೋಶದ ಭಾಗವನ್ನು ಮಿತವಾಗಿ ಒತ್ತುವುದು ಅಥವಾ ಸ್ಟ್ರೋಕ್ ನೀಡಿದರೆ ವ್ಯಕ್ತಿಯ ಉಸಿರಾಟಕ್ಕೆ ನೆರವಾಗಲಿದೆ. ಇದರಿಂದ ಹೃದಯ ಹಾಗೂ ಮೆದುಳಿಗೆ ರಕ್ತ ಸಂಚಲನ ಸರಾಗವಾಗಲಿದೆ. ಇದು ಸ್ಥಗಿತಗೊಂಡ ಹೃದಯ ಬಡಿತ ಮರಳಿ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!