ದಿನಭವಿಷ್ಯ | ಸೋಮವಾರದ ರಾಶಿಫಲಗಳು ಹೀಗಿವೆ..

ಮೇಷ
ಉತ್ತಮ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಅದನ್ನು ಅನುಷ್ಟಾನಗೊಳಿಸಲು ಕಷ್ಟ ಪಡಬೇಕಾದೀತು. ಕುಟುಂಬಸ್ಥರಿಂದ ವಿರೋಧ.

ವೃಷಭ
ಶ್ರಮಕ್ಕೆ ತಕ್ಕ ಪ್ರತಿಫಲ. ವೃತ್ತಿ ಬದುಕು ಖಾಸಗಿ ಬದುಕಿನ ಮೇಲೂ ಪರಿಣಾಮ ಬೀರಬಹುದು. ಕುಟುಂಬದತ್ತಲೂ ಗಮನ ಹರಿಸಿ.

ಮಿಥುನ
ಇತರರಿಗೆ ಆಗುವ ಅನ್ಯಾಯವನ್ನು ಪ್ರತಿಭಟಿಸಲು ಹೊರಡುತ್ತೀರಿ. ವಿರೋಗಳು ನಿಮಗೆ ಹಾನಿ ತರಲು ಯತ್ನಿಸುತ್ತಾರೆ.

ಕಟಕ
ಕೆಲದಿನಗಳಿಂದ ಉನ್ನತಿ ಕಂಡ ನೀವು ಇಂದು ಅವನತಿಗೆ ಸಾಕ್ಷಿಯಾಗಬಹುದು. ಧೈರ್ಯಗೆಡಬೇಡಿ. ಮತ್ತೆ ಮೇಲೆದ್ದು ಬರುತ್ತೀರಿ. ಕೌಟುಂಬಿಕ ಸಹಕಾರ.

ಸಿಂಹ
ಹೊಸ ಕೆಲಸದ ಬಗ್ಗೆ ಸರಿಯಾಗಿ ಅರಿಯಲು ಯತ್ನಿಸುವಿರಿ. ಆದರೆ ಇತರರಿಂದ ಸಹಕಾರ ಸಿಗದು. ಪರಮಾಪ್ತ ವ್ಯಕ್ತಿಗಳ ಸಂಗದಲ್ಲಿ ಸಂತೋಷ.

ಕನ್ಯಾ
ಅಪರೂಪದ ಬೆಳವಣಿಗೆ ಯೊಂದು ನಿಮ್ಮನ್ನು ಅಚ್ಚರಿಗೆ ತಳ್ಳಬಹುದು. ಅದರಿಂದ ನಿಮಗೆ ಒಳಿತೇ ಆಗಲಿದೆ.  ನಿಮ್ಮ ಸಾಮರ್ಥ್ಯ  ತೋರಿ ಬರಲಿದೆ.

ತುಲಾ
ಖರ್ಚು ಹೆಚ್ಚಳ. ಆದಾಯ ಹೆಚ್ಚಳಕ್ಕೂ ಯತ್ನಿಸುವಿರಿ. ಕುಟುಂಬ ದಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ. ಸಹನೆ ಜತೆಗಿರಲಿ. ವಾದಕ್ಕೆ ಹೋಗದಿರಿ.

ವೃಶ್ಚಿಕ
ಕುಟುಂಬ ಸದಸ್ಯರೊಂದಿಗೆ ಮಹತ್ವದ ವಿಷಯದ ಬಗ್ಗೆ ಸಮಾಲೋಚನೆ. ಭಿನ್ನಮತ ಏರ್ಪಡುವುದು ಸಹಜ. ಆದರೆ ವಿರಸ ಬೇಡ.

ಧನು
ನಿಮಗೆ ಪ್ರತಿಕೂಲ ಬೆಳವಣಿಗೆ ಸಂಭವಿಸುತ್ತದೆ. ಆದರೆ ಎದೆಗುಂದುವ ಅಗತ್ಯವಿಲ್ಲ. ಈ ಹಿ ಡೆ ತಾತ್ಕಾಲಿಕ. ಕೌಟುಂಬಿಕ ಸಮಾಧಾನ.

ಮಕರ
ಮಹತ್ವಗಳಿಲ್ಲದ ಸಹಜ ದಿನ. ಏರುಪೇರುಗಳು ನಿಮ್ಮನ್ನು ಬಾಸವು. ಏಕತಾನತೆಯ ಬದುಕು ತುಸು ಬೇಸರ ಹುಟ್ಟಿಸಬಹುದು. ಆರೋಗ್ಯ ಸ್ಥಿರ.

ಕುಂಭ
ನಿಮ್ಮ ವಿರೋಗಳಿಂದ ಚಾರಿತ್ರ್ಯಹನನಕ್ಕೆ ಯತ್ನ. ಸುಮ್ಮಗೆ ಕೂರಬೇಡಿ. ನೀವೂ ಪ್ರತ್ಯುತ್ತರ ಕೊಡಬೇಕಾದೀತು. ಕೌಟುಂಬಿಕ ಪರಿಸರ ಹಿತಕರ.

ಮೀನ
ಉದ್ಯೋಗದಲ್ಲಿ ಒತ್ತಡ. ಅದನ್ನು ಸಮರ್ಥವಾಗಿ ನಿಭಾಯಿಸಿದರೆ ನೀವಿಂದು ಯಶಸ್ಸು ಗಳಿಸುವಿರಿ. ಸಹೋ ದ್ಯೋಗಿಗಳ ಕಿರಿಕಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!