ದಿನಭವಿಷ್ಯ| ಯಾವ ರಾಶಿಯವರಿಗೆ ಇಂದು ಫಲಪ್ರದ

ಮೇಷ
ಇತರರ ಅಭಿವೃದ್ಧಿಗೂ ದುಡಿಯುವಿರಿ. ಇದು ನಿಮಗೆ ವ್ಯಕ್ತಿಗತವಾಗಿ ತೃಪ್ತಿ ತರಲಿದೆ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣಲಿದೆ. ಆರ್ಥಿಕ ಲಾಭ.

ವೃಷಭ
ನಿಮ್ಮ ಯಶಸ್ಸು ಕೆಲವರ ಕಣ್ಣು ಕುಕ್ಕಲಿದೆ. ಅವರು ನಿಮ್ಮ ವರ್ಚಸ್ಸು ಹಾಳುಗೆಡವಲು ಪ್ರಯತ್ನಿಸಬಹುದು. ನಿಮ್ಮ ಎಚ್ಚರದಲ್ಲಿ ನೀವಿರುವುದು ಒಳಿತು.

ಮಿಥುನ
ಖಾಸಗಿ ಸಂಬಂಧದ ಬಗ್ಗೆ ಹೆಚ್ಚು ಗಮನ ಕೊಡಿ. ಸಣ್ಣ ವಿಷಯಗಳು ಸಂಘರ್ಷ ಸೃಷ್ಟಿಸುವ ಸಾಧ್ಯತೆಗಳಿವೆ. ವಾಗ್ವಾದವನ್ನು ಆದಷ್ಟು ತಪ್ಪಿಸಿರಿ.

ಕಟಕ
ನಿಮ್ಮ ಅಕಾರವನ್ನು ಪೂರ್ಣವಾಗಿ ಪ್ರದರ್ಶಿಸುವ ಸಮಯ ವಿದು. ಕೆಲವರಿಗೆ ಅದರ ಮನದಟ್ಟು ಮಾಡಿಸುವುದು ಅಗತ್ಯ.

ಸಿಂಹ
ಪ್ರಗತಿಯ ದಿನ. ಆರ್ಥಿಕ ಸ್ಥಿತಿ ಸುಧಾರಿಸುವುದು. ಅದರ ಜತೆಗೇ ನಿಮ್ಮ ಖಾಸಗಿ ಸಮಸ್ಯೆಗಳನ್ನು ಕೂಡ ಪರಿಹರಿಸಿಕೊಳ್ಳುವಿರಿ. ಸಂಬಂಧ ಗಟ್ಟಿ.

ಕನ್ಯಾ
ಹಣಕಾಸಿನ ವಿಚಾರವಾಗಿಯೇ ನೀವಿಂದು ಯೋಚಿಸುವ ಪ್ರಸಂಗ ಒದಗುತ್ತದೆ. ಖರ್ಚಿನ ಮೇಲೆ ನಿಯಂತ್ರಣ ಅವಶ್ಯ. ಕೌಟುಂಬಿಕ ಒತ್ತಡ.

ತುಲಾ
ಇಂದು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಆರೋಗ್ಯ ಕೆಡುವಂತಹ ವಾತಾವರಣ, ಆಹಾರ, ಪಾನೀಯದಿಂದ ದೂರವಿರಿ. ಹಣದ ಕೊರತೆ ಕಾಡುವುದು.

ವೃಶ್ಚಿಕ
ನಿಮ್ಮ ನಿರ್ವಹಣೆ ಎಲ್ಲರ ಗಮನ ಸೆಳೆಯಲಿದೆ. ಪ್ರಶಂಸೆ ಗಳಿಸುವಿರಿ. ಕೌಟುಂಬಿಕ ಒತ್ತಡ ನಿವಾರಣೆ. ಅವಶ್ಯ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಿರಿ.

ಧನು
ವಿವಾದಗಳು ಮತ್ತು ಭಿನ್ನಮತಗಳು ನಿಮ್ಮನ್ನು ಆವರಿಸಲು ಕಾದು ನಿಂತಿವೆ. ಅದನ್ನು ಎದುರಿಸಲು ಸಜ್ಜಾಗಿ. ಅಂತಿಮವಾಗಿ ನಿಮಗೇ ಗೆಲುವು.

ಮಕರ
ನಿಮ್ಮ ಹೊಂದಾಣಿಕೆಯ ಮನೋಭಾವವು ಇತರರಿಂದ ಕೆಲಸ ತೆಗೆಸಲು ನೆರವಾಗುವುದು. ಖಾಸಗಿ ಬದುಕಿನಲ್ಲೂ ಸಂತೋಷ.

ಕುಂಭ
ಮನೆಯನ್ನು ನವೀಕರಿಸುವ ಕಾರ್ಯ ಕೈಗೊಳ್ಳಲು ಸಕಾಲ. ಕೆಲ ಕಾಲದಿಂದ ಬಾಕಿ ಉಳಿದಿರುವ ಇಂತಹ ಕಾರ್ಯ ಮುಗಿಸಲು ಆದ್ಯತೆ ಕೊಡಿರಿ.

ಮೀನ
ಕೆಲವು ಕಷ್ಟಗಳು ಬಾಸಿದರೂ ನೀವಿಂದು ಎಲ್ಲವನ್ನು ಎದುರಿಸುವ ಮನಸ್ಥಿತಿ ಯಲ್ಲಿ ಇರುತ್ತೀರಿ. ಖಾಸಗಿ ಬದುಕಿನಲ್ಲಿ ಏರುಪೇರು ಸಂಭವ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!