ದಿನಭವಿಷ್ಯ| ಇಂದು ಕೆಲ ರಾಶಿಯವರಿಗೆ ಆರೋಗ್ಯ ಸಮಸ್ಯೆ ಕಾಡುವುದು..

ಮೇಷ
ನಿಮ್ಮ ಮೆಚ್ಚಿನ ಹವ್ಯಾಸವನ್ನು ಮತ್ತೆ ಕೈಗೆತ್ತಿಕೊಳ್ಳಲು ಸಕಾಲ. ಇತರರ ಒತ್ತಡಕ್ಕೆ ಮಣಿಯಬೇಡಿ. ಕೌಟುಂಬಿಕ ಅಶಾಂತಿ ನಿವಾರಣೆ. 

ವೃಷಭ
ದೀರ್ಘ ಕಾಲದ ಬಳಿಕ ಹಳೆಯ ಸ್ನೇಹಿತರ ಸಂಪರ್ಕ ಸಾಧಿಸುವಿರಿ. ವೃತ್ತಿಯಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಬಾಧಿಸುತ್ತವೆ. ಸಂಜೆ ವೇಳೆಗೆ ಸಮಾಧಾನ.

ಮಿಥುನ
ನಿಮ್ಮ ಹೊಸ ಯೋಜನೆ ನಿರೀಕ್ಷಿತ ಫಲ ನೀಡುವುದಿಲ್ಲ. ನಿಮ್ಮ ಶ್ರಮ ವ್ಯರ್ಥವಾಗುವುದು. ಆರ್ಥಿಕ ಒತ್ತಡವೂ ಹೆಚ್ಚಲಿದೆ.

ಕಟಕ
ಕೆಲಸ ಸಾಧಿಸಿ ಪ್ರಶಂಸೆಗೆ ಕಾದುನೋಡುವಿರಿ. ಆದರೆ ನಿಮ್ಮ ಕೆಲಸ ಮೆಚ್ಚಿಕೊಳ್ಳದೆ ಟೀಕಿಸುವವರೇ ಕಾಣುತ್ತಾರೆ. ಇದಕ್ಕೆಲ್ಲ ತಲೆ ಕೆಡಿಸದಿರಿ.

ಸಿಂಹ
ಭಾವನಾತ್ಮಕ ಏರುಪೇರು. ಸಂಬಂಧ ಗಳನ್ನು ಪರಾಮರ್ಶೆ ಮಾಡಿಕೊಳ್ಳಬೇಕಾದ ಸಮಯ. ಆತ್ಮೀಯರು ಎಂದುಕೊಂಡವರು ದೂರವಾಗುವರು.

ಕನ್ಯಾ
ವೃತ್ತಿಯಲ್ಲಿ ಸಮಸ್ಯೆ ಎದುರಿಸುವಿರಿ. ಕೆಲವರು ವಿನಾಕಾರಣ ನಿಮಗೆ ವಿಘ್ನ ಒಡ್ಡುವರು. ಕೌಟುಂಬಿಕ ವಾಗಿಯೂ ಒತ್ತಡ ಹೆಚ್ಚಿಸುವ ಬೆಳವಣಿಗೆ.

ತುಲಾ
ನಿಮ್ಮ ಕಾರ್ಯದಲ್ಲಿ ಇಂದು ಹೆಚ್ಚು ಶ್ರಮ ಹಾಕಬೇಕಾಗುವುದು. ಇಲ್ಲವಾದರೆ ಕೆಲಸ ಕೈಗೂಡದು. ಕೆಲವು ವ್ಯಕ್ತಿಗಳಿಂದ ದಿನವಿಡೀ ಕಿರಿಕಿರಿ.

ವೃಶ್ಚಿಕ
ಕೌಟುಂಬಿಕ ಬಿಕ್ಕಟ್ಟು. ಕುಟುಂಬದ ಸದಸ್ಯರ ಕೆಲವು ಬೇಡಿಕೆಯಿಡುವರು.ಆದನ್ನು ಪೂರೈಸುವುದು ನಿಮ್ಮ ಕರ್ತವ್ಯವಾಗಲಿದೆ. ಆದರೆ ಕಷ್ಟವೂ ಇದೆ.

ಧನು
ಬದಲಾವಣೆಯ ಗಾಳಿ ಬೀಸಲಿದೆ. ಅದಕ್ಕೆ ಎದುರಾಗಿ ಹೋಗದಿರಿ. ನೀವೂ ಅದರೊಂದಿಗೆ ಸಾಗಬೇಕು. ಜತೆಗೆ ಬರದವರನ್ನು ಬಿಟ್ಟು ಸಾಗಬೇಕು.

ಮಕರ
ಕೌಟುಂಬಿಕ ಕಾರ್ಯಗಳಲ್ಲಿ ಹೆಚ್ಚು ವ್ಯಸ್ತರಾಗುವಿರಿ. ಕೆಲವು ಕಾರ್ಯಗಳೂ ಮತ್ತೂ ಬಾಕಿ ಉಳಿಯುತ್ತವೆ. ಬಂಧಗಳ ಜತೆ ಆತ್ಮೀಯ ಮಾತುಕತೆ.

ಕುಂಭ
ಇತರರ ಬದುಕಿನ ಮೇಲೆ ನೀವು ಪರಿಣಾಮ ಬೀರ ಬಲ್ಲಿರಿ. ಆದರೆ ಅವರ ಬದುಕನ್ನು ಹಾಳು ಗೆಡವಬೇಡಿ. ಇತರರ ಬಗ್ಗೆ ಕಾಳಜಿ ಇರಲಿ.

ಮೀನ
ಕುಟುಂಬಕ್ಕೆ ಹೆಚ್ಚು ಆದ್ಯತೆ ಕೊಡಿ. ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾದೀತು. ಆರ್ಥಿಕ ಪರಿಸ್ಥಿತಿಯೂ ಕಷ್ಟಕರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!