ಮೇಷ
ನಿಮ್ಮಲ್ಲಿರುವ ಕಲಾವಿದ ನಿಗೆ ಹೆಚ್ಚಿನ ಪ್ರೋತ್ಸಾಹ ದೊರಕುವುದು. ಉದ್ಯೋಗದಲ್ಲಿ ನಿಮಗೆ ಪೂರಕವಾದ ಬೆಳವಣಿಗೆ. ಈ ದಿನ ಸದುಪಯೋಗಪಡಿಸಿ.
ವೃಷಭ
ಆಪ್ತೇಷ್ಟರು ಅಥವಾ ಕುಟುಂಬಸ್ಥರು ನಿಮ್ಮ ಕುರಿತು ಮುನಿಸಿಕೊಂಡಾರು. ಸಂಬಂಧ ಕಡಿಯುವ ಹಂತಕ್ಕೆ ಅದು ಸಾಗದಂತೆ ನೋಡಿಕೊಳ್ಳಿ.
ಮಿಥುನ
ನಿಮ್ಮ ಕಾರ್ಯಕ್ಷೇತ್ರ ದಲ್ಲಿ ಹೆಚ್ಚಿನ ಒತ್ತಡ. ನೀವು ಮಾಡುವ ಕೆಲಸ ಇತರರಿಗೆ ಮೆಚ್ಚಿಕೆಯಾಗದು. ದಿನದಂತ್ಯಕ್ಕೆ ರೋಸಿ ಹೋಗುವಿರಿ.
ಕಟಕ
ಮನೆಯಲ್ಲಿನ ಅಶಾಂತಿ ನಿವಾರಣೆಗೆ ಆದ್ಯತೆ ಕೊಡಿ. ನೀವೇ ಕೆಲವು ವಿಷಯಗಳಲ್ಲಿ ರಾಜಿಯಾಗಬೇಕು. ಉದ್ಯೋಗದಲ್ಲಿ ಅತೃಪ್ತಿ ಹೆಚ್ಚಳ.
ಸಿಂಹ
ಗಂಭೀರ ವರ್ತನೆ ಇಂದಿನ ಅಗತ್ಯ. ಕೆಲವು ವಿಷಯ ಲಘುವಾಗಿ ಪರಿಗಣಿಸಬೇಡಿ. ಹಾಗೆ ಮಾಡಿದರೆ ಅದು ದೊಡ್ಡ ಪರಿಣಾಮ ಸೃಷ್ಟಿಸಬಹುದು.
ಕನ್ಯಾ
ಫಲಪ್ರದ ದಿನ. ಉದ್ಯೋಗದಲ್ಲಿ ಅಥವಾ ಉದ್ಯಮದಲ್ಲಿ ಪ್ರಗತಿ. ಕೌಟುಂಬಿಕವಾಗಿಯೂ ನೀವು ಬಯಸಿದ ಬೆಳವಣಿಗೆ. ಮಕ್ಕಳಿಂದ ಸಂತೋಷ.
ತುಲಾ
ಉಪಯುಕ್ತ ಮಾತುಕತೆ, ಫಲಪ್ರದ ಸಲಹೆ, ಆಪ್ತರಿಂದ ಸಕಾಲಿಕ ನೆರವು, ಆರ್ಥಿಕ ಲಾಭ – ಇವೆಲ್ಲ ನಿಮ್ಮ ದಿನವನ್ನು ಯಶಸ್ವಿ ಗೊಳಿಸುತ್ತವೆ.
ವೃಶ್ಚಿಕ
ಉದ್ಯೋಗದಲ್ಲಿ ಪೂರಕ ಬೆಳವಣಿಗೆ. ನಿಮ್ಮ ಆಸಕ್ತಿಯ ವಿಚಾರದಲ್ಲಿ ಗಣನೀಯ ಪ್ರಗತಿ ಸಾಸುವಿರಿ. ಕುಟುಂಬ ಸದಸ್ಯರಿಂದ ಉತ್ತಮ ಸಹಕಾರ.
ಧನು
ನಿಮ್ಮ ಯಶಸ್ಸಿನಲ್ಲಿ ಕುಟುಂಬದ ಪಾಲು ದೊಡ್ಡದು. ಕುಟುಂಬಸ್ಥರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ. ವಾದವಿವಾದ ತಪ್ಪಿಸಿ.
ಮಕರ
ಆರ್ಥಿಕ ವಿಷಯದಲ್ಲಿ ತುಸು ಹಿನ್ನಡೆ ಉಂಟಾ ದೀತು. ಶೇರು ಮಾರು
ಕಟ್ಟೆಯಲ್ಲಿ ನಷ್ಟ. ಕೌಟುಂಬಿಕ ವಿಷಯ
ಗಳು ಹೆಚ್ಚು ತಲೆಬಿಸಿಗೆ ಕಾರಣವಾಗಬಹುದು.
ಕುಂಭ
ಅದುಮಿಟ್ಟ ಭಾವನೆಗಳು ಇಂದು ಸೋಟಿಸಬಹುದು. ತೀವ್ರ ನೋವಿಗೆ ಒಳಗಾಗುವಿರಿ. ಕೆಲವು ನೆನಪುಗಳು ಬೇಸರ ಮೂಡಿಸಬಹುದು.
ಮೀನ
ಈ ದಿನವು ನಿಮಗೆ ಹೊಸ ನಿರೀಕ್ಷೆ, ಹೊಸ ಭರವಸೆ ಮೂಡಿಸಲಿದೆ. ಆಪ್ತೇಷ್ಟರ ಜತೆ ಕೂಡಿಕೊಂಡು ಭವಿಷ್ಯತ್ತಿಗೆ ಸುಂದರ ಯೋಜನೆ ರೂಪಿಸಿ.