ದಿನಭವಿಷ್ಯ | ಸೋಮವಾರದ ರಾಶಿಫಲಗಳು ಹೀಗಿವೆ…

ಮೇಷ
ಸಮಸ್ಯೆ ಬಗೆಹರಿಸು ವುದರಲ್ಲಿ ನೀವು ಪರಿಣತರು. ಹಾಗಾಗಿ ಕೆಲವರು ನಿಮ್ಮ ಸಹಾಯ ಕೋರುತ್ತಾರೆ.  ಆಹಾರ ಹೊಟ್ಟೆಗೆ ಅತಿಯಾಗದಿರಲಿ.ವೃಷಭ
ನಿಮ್ಮ ಏಕಾಗ್ರಚಿತ್ತ ಕದಡಿಸುವ ಹಲವಾರು ವಿಷಯಗಳಿವೆ. ಅತ್ತ ಗಮನ ಹರಿಸದಿರಿ. ಕೌಟುಂಬಿಕ ಸಾಮರಸ್ಯ ಕಾಯ್ದುಕೊಳ್ಳಿ. ಆರೋಗ್ಯ ಸುಧಾರಣೆ.
ಮಿಥುನ

ನಿಮ್ಮ ಕಾರ್ಯದಿಂದ ಮೆಚ್ಚುಗೆ ಗಳಿಸುತ್ತೀರಿ. ಹೊಸ ವ್ಯಕ್ತಿ ನಿಮ್ಮ ಜೀವನ ಪ್ರವೇಶಿಸುವರು. ಅವರೊಂದಿಗೆ ಸಂಬಂಧ ಗಾಢಗೊಳ್ಳಬಹುದು. ಕೌಟುಂಬಿಕ ನೆಮ್ಮದಿ.

ಕಟಕ
ನಿಮ್ಮ ಮೆದು ಧೋರಣೆ ನಿಮ್ಮನ್ನು ಇತರರು ಬಳಸಿಕೊಳ್ಳಲು ಕಾರಣವಾಗಲಿದೆ. ಆದ್ದರಿಂದ ಕೆಲವು ವಿಷಯಗಳಲ್ಲಿ ಕಠಿಣ ನಿಲುವು ಒಳ್ಳೆಯದು.

ಸಿಂಹ
ವ್ಯಾಪಾರ, ವಹಿವಾಟಿನಲ್ಲಿ ಉತ್ತಮ ದಿನ.  ಧನಲಾಭ. ಸಮಸ್ಯೆ ನಿವಾರಣೆ. ಭಾವನಾತ್ಮಕ ಸ್ಥಿರತೆ ಸಾಧಿಸುವಿರಿ. ಬೇಸರ ನಿವಾರಣೆ.

ಕನ್ಯಾ
ಕೆಲಸದ ಒತ್ತಡ ಹೆಚ್ಚು. ಆದರೂ ಸಂಜೆ ವೇಳೆಗೆ ಎಲ್ಲವನ್ನು ಪೂರೈಸುವಿರಿ.  ಹೊಟ್ಟೆ ಸಮಸ್ಯೆ ಹೊಂದಿರು ವವರು ಅದರಿಂದ ನಿರಾಳತೆ ಪಡೆಯುವಿರಿ.

ತುಲಾ
ಆರ್ಥಿಕವಾಗಿ ಕೆಲವು ಉತ್ತಮ ನಿರ್ಧಾರ ತಾಳುವಿರಿ. ಇದರಿಂದ ಹಣಕಾಸು ಪರಿಸ್ಥಿತಿ ದೃಢಗೊಳ್ಳಲಿದೆ. ಸಹೋದ್ಯೋಗಿಗಳ ಸಹಕಾರ.

ವೃಶ್ಚಿಕ
ಕೆಲಸದ ಒತ್ತಡ ಹೆಚ್ಚು. ಕೌಟುಂಬಿಕವಾಗಿ ಪ್ರೀತಿಪಾತ್ರರನ್ನು ಕಾಳಜಿಯಿಂದ ನೋಡಿಕೊಳ್ಳಿ. ಕಡೆಗಣಿಸಿದ ಭಾವ ಅವರಿಗೆ ಬಾರದಿರಲಿ.

ಧನು
ಮನೆ ಮತ್ತು ಕೆಲಸದ ಕ್ಷೇತ್ರದಲ್ಲಿ ಹೆಚ್ಚಿನ ಹೊಣೆಗಾರಿಕೆ. ಸೂಕ್ತ ಸಹಕಾರವೂ ದೊರಕುವುದಿಲ್ಲ. ನೀವೊಬ್ಬರೇ ಕಷ್ಟ ಪಡಬೇಕಾಗುವುದು.

ಮಕರ
ಹೃದಯದ ಭಾವನೆಗೆ ಸೂಕ್ತವಾಗಿ ಸ್ಪಂದಿಸಿ.  ಇಲ್ಲದಿದ್ದರೆ ನೋವುಣ್ಣುತ್ತೀರಿ. ಆಹಾರ ಸೇವನೆಯಲ್ಲಿ ಇತಿಮಿತಿಯಿರಲಿ. ಹೊಟ್ಟೆ ಕೆಡಬಹುದು.

ಕುಂಭ
ಕೆಲಸದ ಹೊಣೆ ಹೆಚ್ಚು. ಆದರೆ ನಿರೀಕ್ಷಿತ ಫಲ ಸಿಗುವುದಿಲ್ಲ. ಆರೋಗ್ಯ ಸಮಸ್ಯೆಯೂ ಕಾಡಬಹುದು. ವಿವಾಹಾಕಾಂಕ್ಷಿಗಳಿಗೆ ನಿರಾಶೆ ಕಾದಿದೆ.

ಮೀನ
ಏರುಪೇರುಗಳಿಲ್ಲದ ಎಂದಿನ ಸಹಜ ದಿನ. ಧನಲಾಭ ಪಡೆಯುವಿರಿ. ಮನೆ ಮತ್ತು ವೃತ್ತಿಯಲ್ಲಿ ಕೆಲಸದ ಹೊರೆ ಕಡಿಮೆಯಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!