ದಿನಭವಿಷ್ಯ: ಶನಿವಾರದ ರಾಶಿಫಲಗಳು ಹೀಗಿವೆ..

ಮೇಷ
ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ದೈಹಿಕ ಸಮಸ್ಯೆ ಕಾಣಿಸಿಕೊಳ್ಳಬಹುದು. ವೃತ್ತಿಯಲ್ಲಿ ಮಿಶ್ರಫಲ. ಉತ್ತಮ ನಿರ್ವಹಣೆ ತೋರಿದರೂ ಕೆಲ ಸಮಸ್ಯೆ ತೋರುವುದು.

ವೃಷಭ
ಆಹಾರ ಸೇವನೆಯಲ್ಲಿ ಹಿತಮಿತ ಸಾಸಿ. ಇಲ್ಲವಾದರೆ ಅಜೀರ್ಣ ಸಮಸ್ಯೆ ಉಂಟಾದೀತು. ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪ ಸಂಭವ.

ಮಿಥುನ
ಕೆಲವು ವಿಷಯಗಳ ಕುರಿತು ಅತಿಯಾಗಿ ಚಿಂತಿಸದಿರಿ. ಅದರಿಂದ ನೀವು ಸಣ್ಣ ಸಮಸ್ಯೆಯನ್ನು ದೊಡ್ಡದಾಗಿ ಮಾಡಿಕೊಳ್ಳುತ್ತೀರಿ.

ಕಟಕ
ಯಾವುದೇ ಕಾರ್ಯ ಪೂರ್ಣವಾಗಿರಲಿ. ಸಡಿಲ ಎಳೆ ಬಿಡಬೇಡಿ. ಇಲ್ಲವಾದರೆ ಮುಂದಕ್ಕೆ ಸಮಸ್ಯೆ ಉಂಟಾದೀತು. ಕುಟುಂಬಸ್ಥರಿಂದ ಅಸಹಕಾರ ಸಂಭವ.

ಸಿಂಹ
ಬಂಧುಗಳಿಂದ ಅಚ್ಚರಿಯ ಸುದ್ದಿ ಕೇಳಿಬಂದೀತು. ಅದು ನಿಮ್ಮ ಪಾಲಿಗೆ ಪೂರಕವೇ ಆಗಬಹುದು. ಪ್ರೀತಿಪಾತ್ರರಿಗಾಗಿ ಹೆಚ್ಚುಖರ್ಚು ಮಾಡುವಿರಿ.

ಕನ್ಯಾ
ಮಾನಸಿಕ ಒತ್ತಡ ಅಕ. ಅದಕ್ಕೆ ನಿಮ್ಮ ಖಾಸಗಿ ಬದುಕಿನ ಕೆಲವು ಪ್ರಸಂಗಗಳು ಕಾರಣವಾಗುತ್ತವೆ. ಅವನ್ನು ನಿಭಾಯಿಸಲು ಕಷ್ಟವಾಗುವುದು.

ತುಲಾ
ಸಣ್ಣ ವಿಷಯಗಳಿಗೂ ಗಮನ ಕೊಡಿ. ಕೆಲವೊಮ್ಮೆ ಅವುಗಳೇ ನಿಮಗೆ ಪ್ರಮುಖವಾಗುತ್ತವೆ. ಕೆಲವರ ವರ್ತನೆ ಕಡೆಗಣಿಸಬೇಡಿ.

ವೃಶ್ಚಿಕ
ಅನಿರೀಕ್ಷಿತ ಖರ್ಚು ಒದಗಬಹುದು. ಅದನ್ನು ಹೊಂದಿಸಲು ತುಸು ಕಷ್ಟವಾಗುವುದು. ಮನೆಕಾರ್ಯಕ್ಕೆ ಹೆಚ್ಚು ಆದ್ಯತೆ ಕೊಡುವ ಪ್ರಸಂಗ ಉದ್ಭವಿಸುವುದು.

ಧನು
ನಿಮ್ಮ ಬದುಕಿನಲ್ಲಿ ಕೆಲವು ಬದಲಾವಣೆ ಆಗುವುದು. ಸಂಬಂಧದಲ್ಲಿ ಸುಧಾರಣೆ. ಆರೋಗ್ಯ ಸ್ಥಿರ. ಆಪ್ತರಿಂದ ಸಂತೋಷಾನುಭವ.

ಮಕರ
ವೃತ್ತಿಗೆ ಸಂಬಂಸಿ ಕೆಲವು ರಿಸ್ಕ್ ತೆಗೆದುಕೊಳ್ಳುವ ಪ್ರಸಂಗ ಉಂಟಾದೀತು. ಚಿಂತೆ ಬೇಡ, ಅದರಿಂದ ನಿಮಗೆ ಹಾನಿಯಾಗದು, ಒಳಿತೇ ಆಗುವುದು.

ಕುಂಭ
ಖಾಸಗಿ ಬದುಕು ಮತ್ತು ವೃತ್ತಿ ಬದುಕಿನ ಮಧ್ಯೆ ಸಮತೋಲನ ಸಾಸಿರಿ. ಯಾವುದೇ ಒಂದನ್ನು ಕಡೆಗಣಿಸದಿರಿ. ವಿದ್ಯಾರ್ಥಿಗಳಿಗೆ ಶುಭ ಬೆಳವಣಿಗೆ.

ಮೀನ
ಆಪ್ತರೊಂದಿಗೆ ಪ್ರಾಮಾಣಿಕವಾಗಿ ವರ್ತಿಸಿ. ಯಾವುದೇ ವಿಷಯ ಮುಚ್ಚಿ ಡಲು ಹೋಗದಿರಿ. ಅದರಿಂದ ಮನಸ್ಸಿಗೆ ನಿರಾಳವಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!