ಮೇಷ
ಪ್ರೀತಿಪಾತ್ರರ ಹಿತವಚನಕ್ಕೆ ಕಿವಿಗೊಡಿ. ಅವರ ಮಾತು ಧಿಕ್ಕರಿಸಬೇಡಿ. ಉದ್ಯೋಗದಲ್ಲಿ ಅಹಿತಕರ ಬೆಳವಣಿಗೆ. ಮನಶ್ಯಾಂತಿ ದೂರ.
ವೃಷಭ
ಮನೆಯಲ್ಲಿ ಮಾತಿನ ಜಗಳ ನಡೆದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಇಡೀ ದಿನ ನಿಮ್ಮ ಮನಸ್ಥಿತಿ ಹಾಳಾದೀತು. ಖರ್ಚು ಹೆಚ್ಚಳ.
ಮಿಥುನ
ಭಾವುಕತೆ ಮತ್ತು ಲೌಕಿಕತೆ ಎರಡನ್ನೂ ನೀವು ಹದವಾಗಿ ಬೆರೆಸಿಕೊಳ್ಳಬೇಕು. ಯಾವುದೂ ಅತಿಯಾಗದಂತೆ ನೋಡಿಕೊಳ್ಳಿ.
ಕಟಕ
ಜನಪ್ರಿಯತೆ ಗಳಿಸುವುದು ನಿಮ್ಮ ಗುರಿ. ಆದರೆ ಅದು ಅಷ್ಟು ಸುಲಭವಲ್ಲ ಎಂದು ಅರಿವಾಗಲಿದೆ. ಕೆಲ ವಿಷಯದಲ್ಲಿ ನಿರಾಶೆ ಕಾಡಲಿದೆ.
ಸಿಂಹ
ಆತ್ಮವಿಶ್ವಾಸ ನಿಮ್ಮ ಮಂತ್ರವಾಗಿರಲಿ. ನನ್ನಿಂದ ಏನೂ ಆಗದು ಎಂಬ ಭಾವನೆ ಬಿಡಿ. ನಿಮಗೆ ಅಸಾಧ್ಯವೆನಿಸಿದ ಕಾರ್ಯ ಇಂದು ಸಾಧ್ಯವಾಗಲಿದೆ.
ಕನ್ಯಾ
ಬದುಕಿನ ನೆಗೆಟಿವ್ ಅಂಶಗಳನ್ನಷ್ಟೇ ನೋಡಬೇಡಿ. ಜೀವನದಲ್ಲಿ ಪಾಸಿಟಿವ್ ಅಂಶಗಳೂ ಇವೆ ಎಂಬುದು ಅರಿಯಿರಿ. ಆಶಾವಾದ ಬೆಳೆಸಿಕೊಳ್ಳಿ.
ತುಲಾ
ನಿಮ್ಮ ಭಾವನೆಗೆ ತಕ್ಕಂತೆ ನಡಕೊಳ್ಳಿ. ಭಾವನೆ ಮುಚ್ಚಿಟ್ಟು ಮುಖವಾಡ ಹಾಕಿಕೊಳ್ಳಬೇಡಿ. ಅದು ಇತರರನ್ನು ವಂಚಿಸಿದಂತೆ. ನಿಮ್ಮಲ್ಲಿ ಪ್ರಾಮಾಣಿಕತೆ ಇರಲಿ.
ವೃಶ್ಚಿಕ
ವ್ಯಕ್ತಿಗಳನ್ನು ಮುಖ ನೋಡಿ ಅಂದಾಜಿಸದಿರಿ. ನಿಮ್ಮ ಪೂರ್ವಗ್ರಹ ನಿಮಗೆ ಸಮಸ್ಯೆ ತಂದೀತು. ಎಲ್ಲರ ಜತೆ ಬೆರೆತು ಕೆಲಸ ಮಾಡಲು ಕಲಿಯಿರಿ.
ಧನು
ಬಯಸಿದ ಕಾರ್ಯ ಸಾಧಿಸುವುದು. ಆತ್ಮೀಯರ ಉನ್ನತಿಗೆ ಹಾರೈಸುವಿರಿ. ಅದು ಕಾರ್ಯಗತವಾಗಲಿದೆ. ಕೌಟುಂಬಿಕ ಸಂತೋಷ, ಸಮಾಧಾನ.
ಮಕರ
ಟೀಕಾಕಾರರನ್ನು ವಿರೋಧಿಸಬೇಡಿ. ಅವರನ್ನು ಮೆಚ್ಚಿಸುವ ಕಾರ್ಯ ಮಾಡಿ. ಖಂಡಿತಾ ನಿಮಗೆ ಈ ವಿಷಯದಲ್ಲಿ ಗೆಲುವು ಸಿಗಲಿದೆ.
ಕುಂಭ
ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಸಿಗುವುದು. ಉತ್ಸಾಹಕ್ಕೆ ಪ್ರೋತ್ಸಾಹ ಸಿಗಲಿದೆ. ಕೌಟುಂಬಿಕ ಪರಿಸರ ಸೌಹಾರ್ದಪೂರ್ಣ. ಬಂಧು ಭೇಟಿ.
ಮೀನ
ಆರ್ಥಿಕ ವಿಚಾರಕ್ಕೆ ಆದ್ಯತೆ ಕೊಡುವಿರಿ. ಖರ್ಚಿಗಿಂತ ಉಳಿತಾಯಕ್ಕೆ ಮನ ಮಾಡುವಿರಿ. ಕೌಟುಂಬಿಕವಾಗಿ ಪೂರಕ ಬೆಳವಣಿಗೆ.