Thursday, August 18, 2022

Latest Posts

3000 ಯೋಧರನ್ನು ಒಗ್ಗೂಡಿಸಿ ಕುಂಗನ್ ನಾಯರ್ ನಡೆಸಿದ್ದ ದಂಗೆಗೆ ಬ್ರಿಟೀಷರು ಕಂಗೆಟ್ಟಿದರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಎಡಚನ ಕುಂಗನ್ ನಾಯರ್ ಅವರು 1797ರಿಂದ 1805 ಅವಧಿಯವರೆಗೆ ವಯನಾಡ್‌ನಲ್ಲಿ ಕೇರಳ ವರ್ಮಾ ಪಜಸ್ಸಿರಾಜನ ಸೈನ್ಯದ ಕಮಾಂಡರ್ ಆಗಿದ್ದರು.
ಎಡಚನ ನಾಯರ್ ಕುಟುಂಬದ ಸದಸ್ಯರು ವಯನಾಡಿನಲ್ಲಿ ಪಜಸ್ಸಿರಾಜನ ದೊಡ್ಡ ಬೆಂಬಲಿಗರಾಗಿದ್ದರು. ಅದು ಯಾವ ಮಟ್ಟಿಗೆಂದರೆ ಈ ಕುಟುಂಬವು ಬ್ರಿಟೀಷರ ವಿರುದ್ಧ ನಡೆಸಿದ ಹೋರಾಟದಲ್ಲಿ ತನ್ನ ಐದು ಸದಸ್ಯರ ಪ್ರಾಣವನ್ನು ತ್ಯಾಗ ಮಾಡಿತು. ಪಝಸ್ಸಿರಾಜನ ಬೆಂಬಲಿಗರಾಗಿದ್ದ ಎಡಚೇನ ಕುಂಗನ್ ನಾಯರ್ ಅವರು 1802ರ ರ ಅಕ್ಟೋಬರ್ 11 ರಂದು ರಾಜನ ಸೈನ್ಯ ನಮರಮ್‌ನಲ್ಲಿರುವ ಬ್ರಿಟಿಷ್ ಸೇನಾ ಶಿಬಿರದ ಮೇಲೆ ನಡೆಸಿದ್ದ ದಾಳಿಯ ಹಿಂದಿನ ಬಲವಾಗಿದ್ದರು.
ಈ ಘಟನೆಯ ನಂತರ, ಎಡಚನ ಕುಂಗನ್ 1802 ರಲ್ಲಿ ಬ್ರಿಟೀಷ್ ವಸಾಹತುಶಾಹಿ ದಬ್ಬಾಳಿಕೆಯ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಕೊಳ್ಳುವಂತೆ ಪುಲ್ಪಲ್ಲಿ ದೇವಸ್ಥಾನದಲ್ಲಿ ವಯನಾಡ್ ಜನರಿಗೆ ಪ್ರೇರೇಪಣೆ ನೀಡಿದರು. ಅವರ ಕರೆಗೆ ಓಗೊಟ್ಟು ಸುಮಾರು 3000 ಕುರಿಚಿಯ ಸಮುದಾಯದ ಪುರುಷರು ಹೋರಾಟಕ್ಕೆ ಸಿದ್ಧರಾದರು. ಇವರನ್ನು ಬ್ರಿಟೀಷರ ವಿರುದ್ಧ ಹೋರಾಡಲು ವಯನಾಡಿನ ವಿವಿಧ ಸ್ಥಳಗಳಿಗೆ ನಿಯೋಜಿಸಲಾಯಿತು. ಈ ಸ್ಟ್‌ ಇಂಡಿಯಾ ಕಂಪನಿಯ ಸೇನೆಯನ್ನು ಎದುರಿಸಲು 500 ಜನರ ತುಕಡಿಯನ್ನು ಉತ್ತರ ವಯನಾಡಿನ ವಲ್ಲಿಯುರ್ಕಾವೆ ದೇವಸ್ಥಾನ ದತ್ತ ಕಳುಹಿಸಲಾಯಿತು. 1805ರ ಅಕ್ಟೋಬರ್ ನಲ್ಲಿ ಬಂಡುಕೋರರು ಪುಲ್ಪಲ್ಲಿ ಮುರಿಕ್ಕನ್ಮಾರ್ ದೇವಸ್ಥಾನದಲ್ಲಿ ಪಜಸ್ಸಿರಾಜ ಮತ್ತು ಎಡಚನ ಕುಂಗನ್ ನೇತೃತ್ವದಲ್ಲಿ ಒಟ್ಟುಗೂಡಿದರು.ಭ್ರಿಟೀಷರ ವಿರುದ್ಧ ಕುರಿಚಿಯಾತ್‌ನಿಂದ ಪಕ್ಕಂ ಮತ್ತು ಪುಲ್ಪಲ್ಲಿ ಪ್ರದೇಶದವರೆಗೆ ಬೃಹತ್‌  ಶಸ್ತ್ರಾಸ್ತ್ರ ದಂಗೆಯನ್ನು ನಡೆಸಿದರು. ಈ ದಂಗೆಯನ್ನು ಬ್ರಿಟೀಷರು ಕಷ್ಟಪಟ್ಟು ಮಟ್ಟ ಹಾಕಿದ್ದರಾದರೂ ಬ್ರಿಟೀಷ್‌ ಸೇನೆಗೆ ಸಾಕಷ್ಟು ಸಾವುನೋವು ಹಾನಿ ಎದುರಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!