ದಿನಭವಿಷ್ಯ | ಪ್ರತೀ ವಿಚಾರದಲ್ಲೂ ಇಂದು ಎಚ್ಚರಿಕೆಯಿಂದ ಹೆಜ್ಜೆಯಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೇಷ
ಸಹೋದ್ಯೋಗಿಗಳು ನಿಮಗೆ ಸಮಸ್ಯೆ ಸೃಷ್ಟಿಸಬಹುದು. ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುವುದು ಲೇಸು. ಮುಕ್ತ ಮಾತುಕತೆ ನಡೆಸಿ.

ವೃಷಭ
ವೃತ್ತಿಯಲ್ಲಿ ಸೌಹಾರ್ದ ವಾತಾವರಣ. ಬಿಕ್ಕಟ್ಟು, ವಾಗ್ವಾದ ಶಮನ. ಮನೆಯಲ್ಲಿ  ಖುಷಿ ತರುವ ಮನಸ್ಥಿತಿ. ಕುಟುಂಬ ಸದಸ್ಯರಿಂದ ಸಹಕಾರ.

ಮಿಥುನ
ಸಂಗಾತಿ ಜತೆಗೆ ಅಹಂಭಾವ ಬಿಡಿ. ನಾನು ಬಗ್ಗಬಾರದು ಎಂಬ ಛಲ ಒಳಿತಲ್ಲ. ಹೊಂದಾಣಿಕೆ ಎಲ್ಲಕ್ಕಿಂತ ಮುಖ್ಯ. ಖರ್ಚು ಹೆಚ್ಚಳದ ಪ್ರಸಂಗ.

ಕಟಕ
ಕೆಲಸದಲ್ಲಿ ಬಿಡುವಿಲ್ಲದ ಒತ್ತಡ. ಹೊಣೆಗಾರಿಕೆ ಹೆಚ್ಚಳ. ಎಲ್ಲರ ಜತೆ ಉತ್ತಮ ಸಂವಹನ ಸಾಧಿಸಿ. ತಪ್ಪಭಿಪ್ರಾಯ ಬಿಕ್ಕಟ್ಟು ಉಂಟು ಮಾಡಬಹುದು.

ಸಿಂಹ
ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ಉನ್ನತಿ ಸಾಧಿಸಲು ಅವಕಾಶ ಒದಗಲಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವುದು ನಿಮ್ಮ ಹೊಣೆಗಾರಿಕೆ.

ಕನ್ಯಾ
ಪ್ರತೀ ವಿಷಯದಲ್ಲೂ ಇಂದು ಎಚ್ಚರಿಕೆಯಿಂದ ಹೆಜ್ಜೆಯಿಡಿ. ನಿಮಗೆ ಹಿನ್ನಡೆಯಾಗುವ ಬೆಳವಣಿಗೆ ಸಂಭವಿಸ ಬಹುದು. ನೈತಿಕ ಚೌಕಟ್ಟು ಮೀರದಿರಿ.

ತುಲಾ
ವೃತ್ತಿಯಲ್ಲಿ ಬದಲಾವಣೆ ಉಂಟಾದೀತು. ನಿಮ್ಮ ಹೊಣೆ ಸರಿಯಾಗಿ ನಿಭಾಯಿಸಿ. ಪ್ರತೀ ಕಾರ್ಯ ಎಸಗುವ ಮುನ್ನ ಸರಿಯಾಗಿ ಆಲೋಚಿಸಿರಿ.

ವೃಶ್ಚಿಕ
ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿ ಹೊರಬೇಕಾಗುವುದು. ಕೆಲವರು ನಿಮ್ಮನ್ನೇ ಮುಂದೆ ಮಾಡುತ್ತಾರೆ. ಕೆಲಸಗಳ್ಳರಿಗೆ ನೆರವು ನೀಡಲು ಹೋಗದಿರಿ.

ಧನು
ನಿಮಗೆ ಪೂರಕವಾದ ದಿನ. ಮನೆಯಲ್ಲಿ ಭಾವನಾತ್ಮಕ ಸಂಘರ್ಷ ಉಂಟಾದರೂ ಬೇಗನೆ  ಸರಿ ಹೋಗುವುದು. ಆಪ್ತ ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ.

ಮಕರ
ನಿಮ್ಮ ವಿಶ್ವಾಸ ಹೆಚ್ಚಿಸುವ ಬೆಳವಣಿಗೆ. ನಿರ್ಧಾರದಲ್ಲಿ ಅಚಲವಾಗಿರಿ. ಯಾರದೋ ಪ್ರಭಾವಕ್ಕೆ ಒಳಗಾಗಿ ನಿಲುವು ಬದಲಿಸಬೇಡಿ.

ಕುಂಭ
ನೀವು ಬಯಸಿದ ವ್ಯಕ್ತಿಯ ಜತೆ ಭಾವನಾತ್ಮಕವಾಗಿ ಹೆಚ್ಚು ಹತ್ತಿರವಾಗುವಿರಿ. ಆರ್ಥಿಕವಾಗಿ ನಿಮ್ಮ ಹೂಡಿಕೆ ಉತ್ತಮ ಫಲ ನೀಡುವುದು.

ಮೀನ
ಹೆಚ್ಚು ಕೆಲಸ, ಹೆಚ್ಚು ಒತ್ತಡ, ಹೆಚ್ಚು ಕಿರಿಕಿರಿ. ಇದು ಇಂದಿನ ನಿಮ್ಮ ದಿನಚರಿಯಾಗಲಿದೆ. ಸಂಗಾತಿ ಜತೆಗೆ ವಾಗ್ವಾದ ನಡೆಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!