ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯುತ್ತೀರಿ. ಅವರ ಸಂತೋಷದಲ್ಲಿ ಪಾಲುದಾರ ರಾಗುತ್ತೀರಿ. ಕೌಟುಂಬಿಕ ಸಮಸ್ಯೆ ಪರಿಹಾರ. ಆರೋಗ್ಯ ಸುಧಾರಣೆ
ವೃಷಭ
ದೈಹಿಕ, ಮಾನಸಿಕ ಬಳಲಿಕೆ. ಕೌಟುಂಬಿಕ ಕಿರಿಕಿರಿಗಳು. ಹಿರಿಯರೊಬ್ಬರ ಆರೋಗ್ಯ ಸ್ಥಿತಿ ಮನಸ್ಸಿಗೆ ಆತಂಕ ತರಬಹುದು. ಆರ್ಥಿಕ ನಷ್ಟ.
ಮಿಥುನ
ಆಪ್ತರೆನಿಸಿದವರು ಮುನಿಸಿಕೊಳ್ಳುತ್ತಾರೆ. ಅದಕ್ಕೆ ನಿಮ್ಮ ವರ್ತನೆಯೂ ಕಾರಣ ವಾಗಿರಬಹುದು. ಎಲ್ಲರೆಡೆಗೆ ಸಿಡುಕುವ ಸ್ವಭಾವ ತ್ಯಜಿಸಿ.
ಕಟಕ
ಕೆಲಸದ ಒತ್ತಡ ಅಧಿಕ. ಕಾಲಮಿತಿಯೊಳಗೆ ಕೆಲಸ ಪೂರೈಸಬೇಕಾದ ಅನಿವಾರ್ಯತೆ. ತಪ್ಪಾಗದಂತೆ ಎಚ್ಚರ ವಹಿಸಿ. ಕೌಟುಂಬಿಕ ನೆಮ್ಮದಿ ಹಾಳು.
ಸಿಂಹ
ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ. ಇತರರೊಂದಿಗೆ ಸದಾ ವಿವಾದ ಕಟ್ಟಿಕೊಳ್ಳದಿರಿ.
ಕನ್ಯಾ
ಅತಿರೇಕದ ಮಹತ್ವಾಕಾಂಕ್ಷೆ ಒಳಿತಲ್ಲ. ಅದರಿಂದ ತೊಂದರೆಯೇ ಹೆಚ್ಚು. ಗುರಿ ಈಡೇರಿಕೆಗೆ ಅಡ್ಡದಾರಿ ಹಿಡಿಯದಿರಿ. ಸಾಂಸಾರಿಕ ಸಮಸ್ಯೆ.
ತುಲಾ
ಈ ದಿನ ಹೊಸ ಹುರುಪು. ಯಾವುದೋ ಕಾರಣಕ್ಕೆ ಸಂತೋಷ ಹೆಚ್ಚಲಿದೆ. ಪ್ರೀತಿಪಾತ್ರರು ಹೆಚ್ಚು ಸಮೀಪವಾಗುತ್ತಾರೆ. ಕೌಟುಂಬಿಕ ಶಾಂತಿ.
ವೃಶ್ಚಿಕ
ಕಾರ್ಯದಲ್ಲಿ ವೈಫಲ್ಯ. ಧನ ನಷ್ಟ. ನಿಮ್ಮ ಕಾರ್ಯಕ್ಕೆ ಇತರರಿಂದ ಅಡ್ಡಿ. ಸಂಘರ್ಷಕ್ಕೆ ಮುಂದಾಗಬೇಡಿ. ಅದರಿಂದ ನೀವೇ ಹಾನಿ ಅನುಭವಿಸುತ್ತೀರಿ.
ಧನು
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಿನಲ್ಲಿ ಕಿರಿಕಿರಿ ಕಾಡುತ್ತದೆ. ನೆಮ್ಮದಿ ದೂರ. ಇತರರಿಗೆ ನೆರವು ನೀಡುವುದರಿಂದ ಕಷ್ಟಕ್ಕೆ ಸಿಲುಕಿಕೊಳ್ಳಬಹುದು.
ಮಕರ
ವೃತ್ತಿಯಲ್ಲಿ ಗೊಂದಲ ಗಳು. ಸಂಕಷ್ಟಕ್ಕೆ ಸಿಲುಕುತ್ತೀರಿ. ವ್ಯಕ್ತಿಯೊಬ್ಬರು ನಿಮ್ಮ ಮನಸ್ಸಿನ ನೆಮ್ಮದಿ ಹಾಳುಮಾಡುತ್ತಾರೆ. ಕೌಟುಂಬಿಕ ಒತ್ತಡ.
ಕುಂಭ
ನಿರೀಕ್ಷೆಗೆ ತಕ್ಕಂತೆ ದಿನವು ಸಾಗುವುದಿಲ್ಲ. ಬಯಸಿದ ಗುರಿ ತಲುಪಲಾರಿರಿ. ಆರ್ಥಿಕ ಮುಗ್ಗಟ್ಟು. ಸಾಲ ಪಡೆಯಲೂ ಬೇಕಾಗಬಹುದು.
ಮೀನ
ವೈಯಕ್ತಿಕ ವಿಷಯ ಗಳು ಮನಸ್ಸಿನ ನೆಮ್ಮದಿ ಹಾಳು ಮಾಡ ಬಹುದು. ದೇಹಕ್ಕೆ ಆಲಸ್ಯ. ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ.