ದಿನಭವಿಷ್ಯ | ಈ ರಾಶಿಯವರಿಗಿಂದು ವೃತ್ತಿಯಲ್ಲಿ ಯಶಸ್ಸು, ಧನಲಾಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೇಷ
ನಿಮಗಿಂದು ಹಿತವಚನ ಕೇಳಬೇಕಾದ ದಿನ. ನಿಮ್ಮ ತಪ್ಪುಗಳನ್ನು ಎತ್ತಿ ತೋರಿದರೆ ಅದನ್ನು ಒಪ್ಪಿಕೊಳ್ಳಿ. ಸಂಘರ್ಷದ ಬೇಡ. ಆರ್ಥಿಕ ನಷ್ಟ.

ವೃಷಭ
ನಿಮ್ಮ ದೈನಂದಿನ ಕಾರ್ಯದಿಂದ ತುಸು ವಿರಾಮ ಪಡೆಯಲು ಬಯಸುವಿರಿ. ಬಂಧುಗಳೊಂದಿಗೆ ಉತ್ತಮ ಸಂವಹನ. ಕೌಟುಂಬಿಕ ಶಾಂತಿ.

ಮಿಥುನ
ಬಂಧುಗಳೊಂದಿಗೆ ಇಂದು ವಾಗ್ವಾದಕ್ಕೆ ಮುಂದಾಗದಿರಿ. ಅದು ಸಂಬಂಧ ಕೆಡಿಸಬಹುದು. ಆರೋಗ್ಯದ ಕುರಿತು ಗಮನ ಹರಿಸಿ.

ಕಟಕ
ಪ್ರೀತಿಪಾತ್ರರೊಂದಿಗೆ ಉತ್ತಮ ಹೊಂದಾಣಿಕೆ. ಹಾಗಾಗಿ ಭಿನ್ನಾಭಿಪ್ರಾಯಗಳು ಬೇಗ ನಿವಾರಣೆ ಆಗುವವು. ಆರ್ಥಿಕವಾಗಿ ಲಾಭ.

ಸಿಂಹ
ಕುಟುಂಬಸ್ಥರ ಕುರಿತಂತೆ ಹೆಚ್ಚು ಆಸ್ಥೆ ವಹಿಸಿ. ನೀವು ಅವರನ್ನು ಕಡೆಗಣಿಸಿದ್ದೀರಿ ಎಂಬ ಭಾವನೆ ಬರದಂತೆ ನೋಡಿಕೊಳ್ಳಿ. ಆರ್ಥಿಕ ಚೇತರಿಕೆ.

ಕನ್ಯಾ
ಸಿಕ್ಕಿದ್ದನ್ನೆಲ್ಲಾ ತಿನ್ನುವ ನಿಮ್ಮ ಹವ್ಯಾಸಕ್ಕೆ ಕಡಿವಾಣ ಹಾಕಿ. ಇಲ್ಲವಾದರೆ ಆರೋಗ್ಯ ಸಮಸ್ಯೆ ಎದುರಿಸುವಿರಿ. ಸಂಬಂಧದಲ್ಲಿ ತೊಡಕು ಉಂಟಾಗಬಹುದು.

ತುಲಾ
ಒತ್ತಡದ ದಿನ. ಹೆಚ್ಚುವರಿ ಹೊಣೆ ಗಾರಿಕೆ ನಿಮ್ಮ ಮೇಲೆ ಬೀಳುವುದು. ಸಂಗಾತಿ ಜತೆಗೆ ಸಂಘರ್ಷ ಸಂಭವ. ಮಾತಿನ ಮೇಲೆ ನಿಯಂತ್ರಣವಿರಲಿ.

ವೃಶ್ಚಿಕ
ವೃತ್ತಿಯಲ್ಲಿ ಯಶಸ್ಸು. ಧನಲಾಭ. ನಿಮ್ಮ ಸಾಮರ್ಥ್ಯದ ಅರಿವು ಆಗುವುದು. ಇತರರಿಗೆ ಆರ್ಥಿಕ ನೆರವು ನೀಡಬೇಕಾದ ಪ್ರಸಂಗ ಉದ್ಭವಿಸುವುದು.

ಧನು
ಇಂದು ಆರ್ಥಿಕ ಲಾಭ ಗಳಿಸುವಿರಿ. ನಿಮ್ಮ ಹೊಂದಾಣಿಕೆಯ ಸ್ವಭಾವವು ಸಂಬಂಧದಲ್ಲಿ  ಬಿರುಕು ಮೂಡದಂತೆ ನೋಡಿಕೊಳ್ಳುವುದು.

ಮಕರ
ಹಣದೊಂದಿಗೆ ವ್ಯವಹರಿಸುವಾಗ ಹೆಚ್ಚು ಎಚ್ಚರ ವಹಿಸಿ. ಲೆಕ್ಕ ತಪ್ಪಬಹುದು ಅಥವಾ ನಷ್ಟವಾಗಬಹುದು.  ಸಂಗಾತಿ ಜತೆಗೆ ಹೊಂದಾಣಿಕೆಯಿರಲಿ.

ಕುಂಭ
ವೃತ್ತಿಯಲ್ಲಿ ಹೆಚ್ಚು ಪೈಪೋಟಿ ಎದುರಿಸುವಿರಿ. ನಿಮ್ಮ ಏಳಿಗೆಗೆ ಕೆಲವರು ಅಡ್ಡಗಾಲು ಹಾಕಲು ಯತ್ನಿಸುತ್ತಾರೆ. ದೃಢತೆ ನಿಮ್ಮಲ್ಲಿರಲಿ.

ಮೀನ
ನಿಮ್ಮ ಕಾರ್ಯ ಪೂರೈ ಸಲು ಯಾವುದೇ ಹಾದಿ ಹಿಡಿಯಲು ಸಿದ್ಧರಾಗುವಿರಿ. ಆದರೆ ಬಿಕ್ಕಟ್ಟಿಗೆ ಸಿಲುಕದಂತೆ ಎಚ್ಚರ ವಹಿಸಿ. ಸಹನೆ ಎಲ್ಲಕ್ಕಿಂತ ಮುಖ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!