Sunday, March 26, 2023

Latest Posts

ದಿನಭವಿಷ್ಯ| ಹಳೆಯ ಬಿಕ್ಕಟ್ಟು ಪರಿಹರಿಸಲು ಇಂದು ಸೂಕ್ತ ಅವಕಾಶ ಸಿಗುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಹಳೆಯ ಬಿಕ್ಕಟ್ಟು ಪರಿಹರಿಸಲು ಇಂದು ಸೂಕ್ತ ಅವಕಾಶ ಸಿಗುವುದು. ಕೆಲವರ ಸಂಬಂಧ ತೊರೆಯಬೇಕಾದ ಪ್ರಸಂಗ ಒದಗಲಿದೆ.

ವೃಷಭ
ಎಲ್ಲ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸುವಿರಿ. ಹೆಚ್ಚಿನ ವಿಶೇಷಗಳು ಇಂದು ಸಂಭವಿಸಲಾರವು.ಕೌಟುಂಬಿಕ ಪರಿಸರ ತೃಪ್ತಿಕರ.

ಮಿಥುನ
ಇತರರ ವರ್ತನೆಯ  ಮೇಲೆ ನಿಮ್ಮ ಸಂತೋಷ ಯಾ ಬೇಸರ ಅಡಗಿದೆ. ಈ ರೀತಿ ಅತಿಯಾದ ಅವಲಂಬನೆಯಿಂದ ನಿಮಗೆ ದುಃಖವೇ ಹೆಚ್ಚಾಗಲಿದೆ.

ಕಟಕ
ಪ್ರಗತಿಯ ದಿನ. ಧನಲಾಭ. ಕುಟುಂಬ ಸದಸ್ಯರ ಜತೆ ಸಣ್ಣಪುಟ್ಟ ಮಾತಿನ ಚಕಮಕಿ ಸಂಭವ.  ಸಹನೆ ಕಳಕೊಳ್ಳದೆ ವ್ಯವಹರಿಸಿರಿ.

ಸಿಂಹ
ವಾಗ್ವಾದಗಳಿಂದ ಆದಷ್ಟು ದೂರವಿರಿ. ಅದರಿಂದ ನಿಮ್ಮ ಮನಸ್ಸಿನ ನೆಮ್ಮದಿ ಕಲಕಬಹುದು.ಉಳಿದಂತೆ ಯಾವುದೇ ಲಾಭವಾಗದು.

ಕನ್ಯಾ
ಉತ್ತಮ ಸಲಹೆ ದೊರೆತರೆ ಅದನ್ನು ಅನುಸರಿಸುವ ಹವ್ಯಾಸ ಬೆಳೆಸಿಕೊಳ್ಳಿ. ಎಲ್ಲರನ್ನೂ ಕಡೆಗಣಿಸಲು ಹೋಗದಿರಿ. ಕೆಲವರ ಜತೆ ಮಾತಿನ ಸಂಘರ್ಷ ನಡೆದೀತು,

ತುಲಾ
ಇಂದು ನಿಮ್ಮ ಪಾಲಿಗೆ ಯಶಸ್ವಿ ದಿನ. ಆರ್ಥಿಕವಾಗಿ ಫಲಪ್ರದ. ಕೌಟುಂಬಿಕ ಉದ್ವಿಗ್ನತೆಯು ಶಮನವಾಗುವುದು. ಮಾನಸಿಕ ನಿರಾಳತೆ.

ವೃಶ್ಚಿಕ
ಹೊರಗಿನ ವ್ಯವಹಾರಕ್ಕೆ ಇಂದು ಹೆಚ್ಚು ಮನಸ್ಸು ಮಾಡುವುದಿಲ್ಲ. ಮನೆಯಲ್ಲೆ ಸಮಯ ಕಳೆಯುವ ಯೋಚನೆ ನಿಮ್ಮದಾಗಿರಬಹುದು.ಉತ್ಸಾಹರಾಹಿತ್ಯ.

ಧನು
ನಿಮಗಿಂದು ಅದೃಷ್ಟದ ದಿನ. ಕೆಲವು ಕಾಲದಿಂದ ನಿರೀಕ್ಷಿಸುತ್ತಿದ್ದ ಕಾರ್ಯವು ಸಿದ್ಧಿಯಾಗಲಿದೆ.ವ್ಯವಹಾರದಲ್ಲಿ ಲಾಭ. ಕೌಟುಂಬಿಕ ಸಹಕಾರ.

ಮಕರ
ಎಂದಿಗಿಂತ ಹೆಚ್ಚು ವೃತ್ತಿಯ ಹೊಣೆಗಾರಿಕೆ ವಹಿಸಬೇಕಾಗುವುದು.ಸಂಜೆ ವೇಳೆಗೆ ರೋಸಿ ಹೋಗುವಿರಿ.ಮನೆಯವರ ಸಂಗದಲ್ಲಿ ನೆಮ್ಮದಿ, ಶಾಂತಿ.

ಕುಂಭ
ಹಣದ ವ್ಯವಹಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ. ಎಚ್ಚರದಿಂದ ನಿಭಾಯಿಸಿ. ಕೌಟುಂಬಿಕ ಪರಿಸರ ಒತ್ತಡ ಹೇರಬಹುದು.

ಮೀನ
ಇಂದು  ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ.ವೃತ್ತಿಯ ಒತ್ತಡ ಮರೆತು ಕುಟುಂಬಸ್ಥರ ಸಂಗದಲ್ಲಿ ನಿರಾಳತೆ ಅನುಭವಿಸುವಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!