Friday, March 24, 2023

Latest Posts

ನಾನೂ ಕೂಡ್‌ ಫ್ರಿಡ್ಜ್‌ನ ಒಳಗೆ ಹೋಗುತ್ತಿದ್ದೆ, ಆದರೆ ದೇವರು ದೊಡ್ಡವನು ಬಚಾವ್‌ ಆಗಿದ್ದೇನೆ: ರಾಖಿ ಸಾವಂತ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ, ಡಾನ್ಸರ್‌ ರಾಖಿ ಸಾವಂತ್‌ ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ವಿಚಾರದಲ್ಲಿ ಸುದ್ದಿಯಲ್ಲಿದ್ದು, ಒಂದು ಕಡೆ ರಾಖಿ ಸಾವಂತ್‌ ನೀಡಿದ ದೂರಿನ ಆಧಾರದಲ್ಲಿ ಮೈಸೂರು ಮೂಲದ ಪತಿ ಆದಿಲ್‌ ಖಾನ್‌ ಜೈಲಿನಲ್ಲಿದ್ದರೆ, ರಾಖಿ ಸಾವಂತ್‌ ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಮಾಧ್ಯಮಗಳ ಎದುರು ಬಂದಿದ್ದ ರಾಖಿ ಸಾವಂತ್‌, ಕೆನ್ನೆ ಕೆನ್ನೆಗೆ ಹೊಡೆದುಕೊಳ್ಳುತ್ತಾ ಅಯ್ಯಯ್ಯೋ ಎಂಥಾ ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿದರು. ಶ್ರದ್ಧಾ ವಾಕರ್‌ ರೀತಿಯಲ್ಲಿಯೇ ನನ್ನನ್ನೂ ಕೂಡ ಫ್ರಿಡ್ಜ್‌ನಲ್ಲಿ ಹಾಕುವ ಪ್ಲ್ಯಾನ್‌ ಮಾಡಿದ್ದರು. ‘ದೇಶದ ಕೆಲವೊಂದು ಹೆಣ್ಣುಮಕ್ಕಳ ದೇಹಗಳು ಫ್ರಿಡ್ಜ್‌ನಲ್ಲಿ ಸಿಕ್ಕಿದ್ದವು. ಬಹುಶಃ ನನ್ನ ಕಥೆ ಕೂಡ ಅದೇ ರೀತಿ ಆಗುತ್ತಿತ್ತು. ನಾನೂ ಕೂಡ್‌ ಫ್ರಿಡ್ಜ್‌ನ ಒಳಗೆ ಹೋಗುತ್ತಿದ್ದೆ… ಆದರೆ ದೇವರು ದೊಡ್ಡವನು ಬಚಾವ್‌ ಆಗಿದ್ದೇನೆ’ ಎಂದು ಹೇಳಿದ್ದಾರೆ.

‘ನನಗೆ ನಾನೇ ಕೆನ್ನೆಗೆ ಹೊಡೆದುಕೊಳ್ಳಬೇಕು ಎಂದು ಅನಿಸುತ್ತಿದೆ. ನಿಜವಾಗಲೂ ನನಗೆ ಹೊಡೆದುಕೊಳ್ಳಬೇಕು ಎಂದೇ ಅನಿಸುತ್ತಿದೆ. ಆದಿಲ್‌ನನ್ನು ನಾನೇಕೆ ನಂಬಿದೆ. ನಾನ್ಯಾಕೆ ಅವನನ್ನು ಇಷ್ಟಪಟ್ಟೆ. ಅವನನ್ನು ನಾನು ಅಷ್ಟು ನಂಬಿದ್ದಾದರೂ ಏಕೆ. ಈಗ ನಾನೆಲ್ಲಿ ಹೋಗಲಿ’ ಎಂದು ಕೆನ್ನೆಗೆ ಹೊಡೆದುಕೊಂಡು ರಾಖಿ ಸಾವಂತ್‌ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!