ದಿನಭವಿಷ್ಯ| ಇಂದಿನ ದಿನ ನೀವು ಬಯಸಿದಂತೆ ಸಾಗದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ವೃತ್ತಿ ಕ್ಷೇತ್ರದಲ್ಲಿ ನಿಮಗೆ ಪೂರಕ ಬೆಳವಣಿಗೆ. ಆದರೆ ಇದನ್ನೆ ಕೌಟುಂಬಿಕ ವಿಚಾರದಲ್ಲಿ ಹೇಳಲಾಗದು. ಅಲ್ಲಿ ಅನಪೇಕ್ಷಿತ ಬೆಳವಣಿಗೆ ಉಂಟಾದೀತು.

ವೃಷಭ
ಎಲ್ಲಾ ಕಾರ್ಯಗಳು ಇಂದು ನಿಧಾನ ಗೊಳ್ಳುತ್ತವೆ. ಸಣ್ಣಪುಟ್ಟ ಅಡ್ಡಿ ಕಾಡುತ್ತದೆ. ಆಪ್ತರ ಜತೆಗಿನ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾದೀತು. ಸಹನೆ ಇರಲಿ.

ಮಿಥುನ
ಇಂದಿನ ದಿನ ನೀವು ಬಯಸಿದಂತೆ ಸಾಗದು. ಮನಸ್ಸು ಕೆಡಿಸುವ ವಿದ್ಯಮಾನ ಉಂಟಾದೀತು. ಎಲ್ಲರ ಮೇಲೆ ಅಸಹನೆ ಕಾರುವ ಸಂಭವವಿದೆ.

ಕಟಕ
ನಿಮ್ಮ ಕಾರ್ಯಕ್ಕೆ ಕೆಲವರ ಅಸಹಕಾರ. ಭಿನ್ನಾಭಿಪ್ರಾಯ. ಪರಿಸ್ಥಿತಿ ವಿಕೋಪಕ್ಕೆ ಕೊಂಡೊಯ್ಯದಿರಿ. ಶಾಂತಚಿತ್ತರಾಗಿ ವರ್ತಿಸುವುದೊಳಿತು.

ಸಿಂಹ
ಸಮಸ್ಯೆ ಇರದಿದ್ದರೂ ಸಮಸ್ಯೆಯ ಭಾರ ಹೊತ್ತಂತೆ  ವರ್ತಿಸುವಿರಿ. ಎಲ್ಲರ ಹೊಣೆ ನಿಮ್ಮದೇ ಎಂಬಂತೆ ಭಾವಿಸುವಿರಿ. ಮೊದಲು ಮನಸ್ಸು ನಿರಾಳವಾಗಿಸಿಕೊಳ್ಳಿ.

ಕನ್ಯಾ
ಕೆಲವು ವ್ಯಕ್ತಿಗಳು ನಿಮ್ಮ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುವರು. ಅವರ ನಡೆನುಡಿ ನಿಮ್ಮ ದೈನಂದಿನ ಕಾರ್ಯದ ಮೇಲೆ ಪರಿಣಾಮ ಬೀರಲಿದೆ.

ತುಲಾ
ನಿಮ್ಮ ಅತಿಯಾದ ಭಾವುಕತೆಯು ನಿಮ್ಮ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ಕೆಲವೊಮ್ಮೆ ನಿರ್ಭಾವುಕ ಮನಸ್ಥಿತಿ ಒಳ್ಳೆಯದು.

ವೃಶ್ಚಿಕ
ನಿಮ್ಮ ಭವಿಷ್ಯಕ್ಕೆ ನೆರವಾಗುವ ಪ್ರಮುಖ ನಿರ್ಧಾರ ತಾಳಬೇಕಾದ ಸ್ಥಿತಿ ಒದಗಬಹುದು. ಯಾರದೋ ಚಿತಾವಣೆಗೆ ಒಳಗಾಗಬೇಡಿ. ಸ್ವಯಂ ನಿರ್ಧಾರ ತಾಳಿ.

ಧನು
ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ಹಾಗಾಗಿ ಪ್ರತಿಯೊಂದು ನಡೆನುಡಿಯಲ್ಲೂ ಎಚ್ಚರ ವಹಿಸಿ. ಆತುರದ ವರ್ತನೆ ತೋರದಿರಿ.

ಮಕರ
ಭಾವನಾತ್ಮಕ ಏರುಪೇರು. ಇದು ನಿಮ್ಮ ವೃತ್ತಿ ನಿರ್ವಹಣೆಯ ಮೇಲೆ ಪರಿಣಾಮ ಬೀರುವುದು. ಸಂಯಮದಿಂದ ವರ್ತಿಸುವುದೊಳಿತು.

ಕುಂಭ
ಸಣ್ಣ ಕೆಲಸವೂ ದೊಡ್ಡ  ಪ್ರಮಾಣದ ಶ್ರಮವನ್ನು ಬೇಡುತ್ತದೆ. ಅದಕ್ಕೆ ಕಾರಣ ಗ್ರಹಗತಿ ನಿಮಗಿಂದು ಪೂರಕ ಆಗಿಲ್ಲದಿರುವುದು. ಸಹನೆಯಿರಲಿ.

ಮೀನ
ಹಣದ ಹೂಡಿಕೆಯಲ್ಲಿ ಎಚ್ಚರ ವಹಿಸಿ. ಊಹಾತ್ಮಕ ವ್ಯವಹಾರ ನಿಮಗೆ ಲಾಭ ತರದು. ಕೌಟುಂಬಿಕ ಸಹಕಾರದಿಂದ ಮನಸ್ಸಿಗೆ ನಿರಾಳತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!