ದಿನಭವಿಷ್ಯ| ಕೆಲವರ ಬದುಕಲ್ಲಿ ಇಂದು ನೆಮ್ಮದಿಯ ವಾತಾವರಣ

ಮೇಷ
ಆಧ್ಯಾತ್ಮ ಅಥವಾ ಮೂಢನಂಬಿಕೆಗಳು ನಿಮ್ಮನ್ನು ಆವರಿಸಬಹುದು. ಹಾಗಾಗಿ ದೊಡ್ಡ ಬದಲಾವಣೆಗೆ ಮನಸ್ಸು ಮಾಡಲಾರಿರಿ.

ವೃಷಭ
ಪ್ರೀತಿ ಇಂದು ನಿಮಗೆ ಸ್ವಂತ ವಿಷಯವಾಗುತ್ತದೆ. ಅಡ್ಡಿಗಳನ್ನು ನೀಗಲು ಯತ್ನಿಸುವಿರಿ. ಬಂಧುಗಳ ನೆರವು ಪಡೆಯಿರಿ.

ಮಿಥುನ
ಸ್ವಹಿತಾಸಕ್ತಿ ಇಂದು ಆದ್ಯತೆ ಪಡೆಯುತ್ತದೆ.  ಉಳಿದ ವಿಚಾರಗಳತ್ತ ಗಮನ ಹರಿಯದು. ಕೌಟುಂಬಿಕ ಸಮಸ್ಯೆ ಪರಿಹರಿಸುವುದು ಅತ್ಯವಶ್ಯ.

ಕಟಕ
ವೃತ್ತಿ ಒತ್ತಡದಿಂದ ದೂರವಾಗಿ ಸಂತೋಷ ಆಚರಣೆ. ದೈನಂದಿನ ಕಟ್ಟುಪಾಡುಗಳು ಇಂದು ಬಾಸಲಾರವು. ಕೌಟುಂಬಿಕ ನೆಮ್ಮದಿ.

ಸಿಂಹ
ಇಂದು ನಿಮ್ಮ ಯಶಸ್ಸಿಗೆ ಇತರರ ಪ್ರಯತ್ನ ಅವಲಂಬಿಸ ಬೇಕಾಗುತ್ತದೆ. ಮನೆಯಲ್ಲಿ ಕೂಡ ಎಲ್ಲರ ಸಹಕಾರದಿಂದ ಕಾರ್‍ಯ ಸಿದ್ಧಿ.

ಕನ್ಯಾ
ಇಂದು ಎಲ್ಲ ವಿಷಯಗಳಲ್ಲಿ ಕಠಿಣ ಹೃದಯಿಯಾಗಿ ವರ್ತಿಸುವಿರಿ. ಇತರರ ಸಣ್ಣ ತಪ್ಪು ಕೂಡ ನಿಮಗೆ ಸಹಿಸಲು ಅಸಾಧ್ಯವಾಗುವುದು.

ತುಲಾ
ನಿಮ್ಮ ಸುತ್ತಲಿರುವ ಕೆಲವರ ವರ್ತನೆ ಅಸಹನೀಯ ಎನಿಸುವುದು. ಅದನ್ನು ಸಹಿಸಲೇಬೇಕಾದ ಅನಿವಾರ್ಯತೆ. ಅಸ್ತವ್ಯಸ್ತ ಮನಸ್ಸು.

ವೃಶ್ಚಿಕ
ಕೊನೆಗೂ ನಿಮ್ಮ ಮಹದಾಸೆಯೊಂದು ಪೂರೈಸಲಿದೆ. ಸಂಭ್ರಮ ಆಚರಿಸಲು ತಯಾರಾಗಿ. ಬಂಧುಗಳಿಂದ ಉತ್ತಮ ಸಹಕಾರ.

ಧನು
ಪ್ರಗತಿಯ ದಿನ. ಉದ್ಯೋಗದಲ್ಲಿ ಯಶಸ್ಸು. ಆರ್ಥಿಕವಾಗಿ ಲಾಭ. ಕೌಟುಂಬಿಕ ಇಷ್ಟವೊಂದು ನೆರವೇರಲಿದೆ.

ಮಕರ
ಸಣ್ಣ ಪುಟ್ಟ ವ್ಯಾಜ್ಯ ಗಳನ್ನು ರಾಜಿಯಿಂದ ಪರಿಹರಿಸಿ. ಉಲ್ಬಣಕ್ಕೆ ಕೊಂಡೊಯ್ಯದಿರಿ. ಇದು ಇಂದು ನಿಮಗೆ ಸಲಹೆ. ತಪ್ಪಿದರೆ ಸಮಸ್ಯೆ ಹೆಚ್ಚಳ.

ಕುಂಭ
ಆರ್ಥಿಕ ವಿಷಯ ಆದ್ಯತೆ ಪಡೆಯುತ್ತದೆ. ಹಣದ ಕೊರತೆ ನೀಗಲು ಯತ್ನಿಸುವಿರಿ. ಸ್ನೇಹಿತರ ಮಹತ್ವ ಇಂದು ನಿಮಗೆ ಅರಿವಿಗೆ ಬರುವುದು. ಕೌಟುಂಬಿಕ ನೆಮ್ಮದಿ.

ಮೀನ
ಮನೆ ಮತ್ತು ಕಚೇರಿ ಎರಡೂ ಕಡೆ ಉತ್ತಮ ಕಾರ್‍ಯ ನಿರ್ವಹಣೆ. ಸಂತೋಷದ ವಾತಾವರಣ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಕೌಟುಂಬಿಕ ಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!