ಮನೆಯಲ್ಲಿಯೇ ಸುಲಭವಾಗಿ ಮಾಡುವ ಬೇಬಿ ಕಾರ್ನ್‌-65..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು: 

ಬೇಬಿ ಕಾರ್ನ್ – ಅರ್ಧ ಡಜನ್
ಕಾರ್ನ್ ಫ್ಲೋರ್ – 1ಸ್ಪೂನ್‌
ಕ್ಯಾಪ್ಸಿಕಮ್ – 1
ಈರುಳ್ಳಿ – ಸ್ವಲ್ಪ,
ಹಸಿ ಮೆಣಸಿನಕಾಯಿ – ಎರಡು
ಚಿಕ್ಕ ಈರುಳ್ಳಿ – ಎರಡು
ಶುಂಠಿ – ಕತ್ತರಿಸಿದ
ಮೆಣಸಿನಪುಡಿ – 1 ಟೀಸ್ಪೂನ್
ಟೊಮೇಟೊ ಕೆಚಪ್ – 1 ಟೀಸ್ಪೂನ್ ಸೋಯಾ ಸಾಸ್ – 1 ಚಮಚ
ಕಾಳುಮೆಣಸಿನ ಪುಡಿ – ಚಿಟಿಕೆ ಉಪ್ಪು – ರುಚಿಗೆ
ಎಣ್ಣೆ – ಸಾಕಷ್ಟು

ಮಾಡುವ ವಿಧಾನ: 

ಬೇಬಿ ಕಾರ್ನ್ ಉದ್ದ ಅಥವಾ ಅಡ್ಡವಾಗಿ ಎರಡು ತುಂಡುಗಳಾಗಿ ಕತ್ತರಿಸಿ. ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ನುಣ್ಣಗೆ ಕತ್ತರಿಸಿ ಪಕ್ಕಕ್ಕೆ ಇರಿಸಿ. ಒಂದು ಬೌಲ್ ನಲ್ಲಿ ಬೇಬಿ ಕಾರ್ನ್ ಪೀಸ್, ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ. ಈಗ ಬಾಣಲೆಯನ್ನು ಒಲೆಯ ಮೇಲಿಟ್ಟು ಬೇಕಾದಷ್ಟು ಎಣ್ಣೆ ಹಾಕಿ ಕಾದ ಬಳಿಕ ಬೇಬಿ ಕಾರ್ನ್ ತುಂಡುಗಳನ್ನು ಹಾಕಿ ಚೆನ್ನಾಗಿ ಫ್ರೈಮಾಡಿ.

ಈಗ ಮತ್ತೆ ಒಂದು ಸಣ್ಣ ಪ್ಯಾನ್‌ನಲ್ಲಿ ಎಣ್ಣೆ ಹಾಕಿ, ಕ್ಯಾಪ್ಸಿಕಂ, ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ. ಇದು ಬೇಯುವಾಗ ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ಸೋಯಾ ಸಾಸ್ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡು ನಿಮಿಷಗಳ ನಂತರ ಬೇಬಿ ಕಾರ್ನ್ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊನೆಗೆ ಈರುಳ್ಳಿ ದಂಟನ್ನು ಚಿಕ್ಕದಾಗಿ ಕತ್ತರಿಸಿ ಉದುರಿಸಿದರೆ ಹೋಟೆಲ್ ಸ್ಟೈಲ್ ಬೇಬಿ ಕಾರ್ನ್ 65 ರೆಡಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!