ಕತಾರ್ ವಿಶ್ವಕಪ್: ಬೈನಾಕ್ಯುಲರ್‌ನೊಳಗೆ ಮದ್ಯ ಸುರಿದುಕೊಂಡು ಸ್ಟೇಡಿಯಂನೊಳಗೆ ಹೋಗಲು ಯತ್ನಿಸಿ ಸಿಕ್ಕಿಬಿದ್ದ ಅಭಿಮಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕತಾರ್‌ ವಿಶ್ವಕಪ್‌ ಪ್ರಾರಂಭಕ್ಕೆ ಕೇವಲ 48 ಗಂಟೆಗಳ ಮೊದಲು ಸ್ಟೇಡಿಯಂಗಳಲ್ಲಿ ಬಿಯರ್ ಸೇವನೆ, ಮಾರಾಟ ನಿಶೇಧಿಸಿದ್ದು ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇಸ್ಲಾಮಿಕ್ ರಾಷ್ಟ್ರ ಕತಾರ್‌ ನಲ್ಲಿ ಆಲ್ಕೋಹಾಲ್ ಅನ್ನು ಅಲ್ಲಿನ ನಿಯಮಾವಳಿಗೆ ಅನುಸಾರವಾಗಿ ನಿಷೇಧಿಸಲಾಗಿದೆ. ಆತಿಥೇಯರೊಂದಿಗಿನ ಚರ್ಚೆಯ ನಂತರ ಎಂಟು ವಿಶ್ವಕಪ್ ಕ್ರೀಡಾಂಗಣಗಳಲ್ಲಿ ಯಾವುದೇ ಅಭಿಮಾನಿಗಳಿಗೆ ಬಿಯರ್ ತರುವಂತಿಲ್ಲ ಎಂದು ಫಿಫಾ ಸಹ ಹೇಳಿದೆ. ಆದರೆ ಸಂಘಟಕರ ಈ ನಿರ್ಧಾರ ಮಧ್ಯಪ್ರಿಯ ಅಭಿಮಾನಿಗಳಿಗೇನು ಸಂತಸ ತಂದಿಲ್ಲ. ಇತ್ತಿಚೆಗೆ ವೈರಲ್ ವೀಡಿಯೊದಲ್ಲಿ, ಅಭಿಮಾನಿಯೊಬ್ಬ  ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಮಧ್ಯ ಸೇವಿಸಲು ತನ್ನ ಬೈನಾಕುಲರ್‌ (ದುರ್ಬೀನು) ನೊಳಗೆ ಮಧ್ಯ ಸುರಿದುಕೊಂಡಬಂದಿದ್ದ. ಆದರೆ ಕ್ರೀಡಾಂಗಣದ ಚಾಲಾಕಿ ಭದ್ರತಾ ಸಿಬ್ಬಂದಿ ದುರ್ಬಿನುಗಳನ್ನು ಬಿಡದೆ ಪರೀಕ್ಷಿಸುತ್ತಿರುವುದನ್ನು ಕಾಣಬಹುದು. ಸಿಬ್ಬಂದಿ ಮೊದಲು ಬೈನಾಕ್ಯುಲರ್ ಮೂಲಕ ನೋಡಲು ಪ್ರಯತ್ನಿಸಿದಾಗ ಏನೂ ಕಾಣುವುದಿಲ್ಲ. ನಂತರ ಮಸೂರವನ್ನು ತಿರುಗಿಸಿದಾಗ ಅದರೊಳಗೆ ದ್ರವರೂಪದ ಅಂಶ ಇರುವುದನ್ನು ಕಂಡುಕೊಳ್ಳುತ್ತಾನೆ. ಅದರೊಳಗೆ ಮೂಸಿ ನೋಡಿದಾಗ ಮಧ್ಯದ ವಾಸನೆ ಮೂಗಿದೆ ಬಡಿದಿದೆ. ಆಸರೆ ಅಭಿಮಾನಿ ಮಾತ್ರ ಅದರೊಳಗೆ ಇರುವುದು ಮಧ್ಯವಲ್ಲ, ಅದು ಹ್ಯಾಂಡ್ ಸ್ಯಾನಿಟೈಸರ್ ಎಂದು ವಾದಿಸುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು!.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!